ತಿರುವನಂತಪುರಂ: ಕಳೆದ ಆರು ದಿನಗಳಿಂದ ಸತತವಾಗಿ 20,000ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ ನಂತರ, ಕೇರಳ ರಾಜ್ಯದಲ್ಲಿ ಇಂದು 13,984 ಸೋಂಕಿತರ ಸಂಖ್ಯೆ ವರದಿಯಾಗಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 34,25,473ಕ್ಕೆ ಏರಿಕೆಯಾಗಿದೆ. ಕೋವಿಡ್ ಪಾಸಿಟಿವ್ ರೇಟ್ ಶೇಕಡಾ 11ಕ್ಕೆ ಇಳಿಕೆಯಾಗಿದೆ. ಕೋವಿಡ್ -19ಕ್ಕೆ ಬಲಿಯಾದವರ ಸಂಖ್ಯೆ 16,955 ಕ್ಕೆ ಏರಿಕೆಯಾಗಿದ್ದು, 118 ಸಾವುಗಳು ಸಂಭವಿಸಿವೆ. ಕಳೆದ ಶನಿವಾರ ದಿಂದ ಇಲ್ಲಿಯ ವರೆಗೆ 15,923 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು 32,42,684 ಡಿಸ್ಚಾರ್ಜ್ ಆಗಿದ್ದಾರೆ. 1,65,322 ಸಕ್ರಿಯ ಪ್ರಕರಣಗಳಿವೆ ಎಂದು ಕೇರಳ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ತ್ರಿಶೂರ್ ಜಿಲ್ಲೆಯಲ್ಲಿ 2,350 ಪ್ರಕರಣಗಳು ಪತ್ತೆಯಾಗಿದ್ದು, ಕೇರಳ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಮಲಪ್ಪುರಂ 1,925, ಕೊಯಿಕ್ಕೋಡ್ 1,772, ಪಾಲಕ್ಕಾಡ್ 1,506, ಎರ್ನಾಕುಲಂ 1,219 ಮತ್ತು ಕೊಲ್ಲಂ 949. ಹೊಸ ಪ್ರಕರಣಗಳಲ್ಲಿ 79 ಆರೋಗ್ಯ ಕಾರ್ಯಕರ್ತರು, 80 ರಾಜ್ಯ ಹೊರಗಿನಿಂದ ಬಂದವರು ಮತ್ತು 13,221 ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 604 ಪ್ರಕರಣಗಳಲ್ಲಿ ಸಂಪರ್ಕದ ಮೂಲ ಸ್ಪಷ್ಟವಾಗಿಲ್ಲ.
ಕಳೆದ 24 ಗಂಟೆಗಳಲ್ಲಿ, 1,27,903 ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಟಿಪಿಆರ್ ಶೇಕಡಾ 10.93 ಎಂದು ಕಂಡುಬಂದಿದೆ. ಇಲ್ಲಿಯವರೆಗೆ ಒಟ್ಟು 2,75,15,603 ಕೋವಿಡ್ ಟೆಸ್ಟ್ ಮಾಡಲಾಗಿದೆ. ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,62,529 ಜನರು ನಿಗಾದಲ್ಲಿದ್ದಾರೆ. ಈ ಪೈಕಿ 4,33,879 ಸಾಂಸ್ಥಿಕ ಕ್ವಾರಂಟೈನ್ ಮತ್ತು 28,650 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ 678 ಪ್ರದೇಶಗಳಿದ್ದು, 10 ಶೇಕಡಾಕ್ಕಿಂತ ಹೆಚ್ಚಿನ ಟಿಪಿಆರ್ ಇದೆ ಎಂದು ಕೇರಳ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.