ನವದೆಹಲಿ: ಹವ್ಯಾಸಿ ಪತ್ರಕರ್ತರೊಬ್ಬರು 2016ರಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ನಿಂದಿಸಿ ಮತ್ತು ತಮ್ಮ ಪತ್ರಿಕೆ 'ಬ್ರೇಕಿಂಗ್ ನ್ಯೂಸ್'ಗೆ ಜಾಹೀರಾತು ಪಡೆಯುವ ಉದ್ದೇಶದಿಂದ ಸಾರ್ವಜನಿಕ ವಲಯದ ಹಲವು ಸಂಸ್ಥೆಗಳಿಗೆ ನಕಲಿ ಪತ್ರಗಳನ್ನು ಕಳುಹಿಸಿದ ಆರೋಪದ ಮೇಲೆ ಅವರನ್ನು ಜನವರಿ 28ರಂದು ಬಂಧಿಸಲಾಗಿದೆ.
ಒಡಿಶಾದ ಭುವನೇಶ್ವರ ಮೂಲದ ಮನೋಜ್ ಕುಮಾರ್ ಸೇಠ್ (41) ಬಂಧಿತರು. ದೆಹಲಿ ಪೊಲೀಸ್ ವಿಶೇಷ ಸೆಲ್‌ನ ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (ಐಎಫ್‌ಎಸ್‌ಒ) ಘಟಕವು ಕಳೆದ ಆರು ವರ್ಷಗಳಿಂದ ನಾಪತ್ತೆಯಾಗಿದ್ದ ಈತನನ್ನು ಬಂಧಿಸಿದೆ.
ಆದಿತ್ಯನಾಥ್ ಅವರ ಆಪ್ತ ಕಾರ್ಯದರ್ಶಿ ರಾಜಭೂಷಣ್ ಸಿಂಗ್ ರಾವತ್ ಅವರು, ಬಿಜೆಪಿ ನಾಯಕರ ಸಹಿಗಳನ್ನು ಬಳಸಿಕೊಂಡು ಕೆಲವು ಅಪರಿಚಿತ ವ್ಯಕ್ತಿಗಳು ನಕಲಿ ಇಮೇಲ್ ಐಡಿಯನ್ನು ರಚಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದರು. ಆರೋಪಿಗಳು ಆದಿತ್ಯನಾಥ್ ಅವರ ನಕಲಿ ಸಹಿಯೊಂದಿಗೆ ಸ್ಕ್ಯಾನ್ ಮಾಡಿದ ಪತ್ರಗಳನ್ನು ಸಹ ಲಗತ್ತಿಸಿದ್ದರು. ಆ ಸಮಯದಲ್ಲಿ ಆದಿತ್ಯನಾಥ್ ಗೋರಖ್‌ಪುರದ ಲೋಕಸಭಾ ಸಂಸದರಾಗಿದ್ದರು.
ಇದನ್ನೂ ಓದಿ: ಕಾರು ಡಿಕ್ಕಿಯಾಗಿ ನಾಲ್ವರು ಸಾವು ಪ್ರಕರಣ: ಮೂವರು ಅಪ್ರಾಪ್ತರು ಸೇರಿ ಕಾರು ಮಾಲೀಕ ಅರೆಸ್ಟ್
ರಾವತ್ ಪ್ರಕಾರ, ಆರೋಪಿಗಳು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಒಎನ್‌ಜಿಸಿ ಮತ್ತು ಗೇಲ್ ಇಂಡಿಯಾದಂತಹ ಸಾರ್ವಜನಿಕ ವಲಯದ ಘಟಕಗಳಿಗೆ ಇಮೇಲ್ ಮತ್ತು ನಕಲಿ ಪತ್ರಗಳನ್ನು ಕಳುಹಿಸಿದ್ದರು ಎನ್ನಲಾಗ್ತಿದೆ.
ಇಂಗ್ಲಿಷ್ ಪತ್ರಿಕೆಯ ಪರವಾಗಿ ಜಾಹೀರಾತುಗಳನ್ನು ಬಿಡುಗಡೆ ಮಾಡುವಂತೆ ಕೋರಿ ಆಪಾದಿತ ಇಮೇಲ್ ಕಳಿಸಿದ್ದ. ಅದೇ ರೀತಿ, ಮತ್ತೊಂದು ಪತ್ರಿಕೆಯ ಪರವಾಗಿ ಜಾಹೀರಾತು ನೀಡುವಂತೆ ಕೋರಿ ನಕಲಿ ಇಮೇಲ್ ಮತ್ತು ನಕಲಿ ಪತ್ರಗಳನ್ನು ONGC ಮತ್ತು GAIL ಗೆ ಕಳುಹಿಸಲಾಗಿತ್ತು. IP ವಿಳಾಸದ ಮೂಲಕ ನಾವು ಆರೋಪಿಯನ್ನು ಮನೋಜ್ ಕುಮಾರ್ ಸೇಠ್ ಎಂದು ಗುರುತಿಸಿದೆವು ಎಂದು ಉಪ ಪೊಲೀಸ್ ಆಯುಕ್ತ ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ.
ಸೇಠ್‌ನ ಈ ಪ್ಲಾನ್ ಯಶಸ್ವಿಯಾಗಲಿಲ್ಲ ಮತ್ತು ಆತ ತನಿಖಾಧಿಕಾರಿಗಳಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ಇರುವ ಸ್ಥಳವನ್ನು ಬದಲಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಹಿಡಿಯಲು ಎಸಿಪಿ ರಾಮನ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
2020 ರ ಸುಲಿಗೆ ಪ್ರಕರಣದಲ್ಲಿ ಸೇಠ್ ಭಾಗಿಯಾಗಿದ್ದು, ಈ ಸಂಬಂಧ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕಟಕ್‌ನ ಚಾಲಿಯಾ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.