ETV Bharat / bharat

ಡಿಜಿಪಿ ಫೋಟೋವನ್ನೇ ವಾಟ್ಸ್‌ಆ್ಯಪ್‌​ ಡಿಪಿಯಾಗಿ ಬಳಸಿ ಹಣ ಪೀಕುತ್ತಿರುವ ಸೈಬರ್​ ಕಳ್ಳರು!

author img

By

Published : Jun 28, 2022, 10:00 PM IST

ತೆಲಂಗಾಣದ ಡಿಜಿಪಿ ಅವರ ಫೋಟೋವನ್ನೇ ವಾಟ್ಸ್​​ಆ್ಯಪ್​ ಡಿಪಿಯಾಗಿ ಬಳಸಿ ವಂಚನೆಗೆ ಸಂಚು ಹಾಕಿರುವುದು ಬಯಲಿಗೆ ಬಂದಿದೆ.

fraudsters-try-to-cheat-in-name-of-dgp-in-telangana
ಡಿಜಿಪಿ ಫೋಟೋವನ್ನೇ​ ಡಿಪಿಯಾಗಿ ಬಳಸಿ ಪೀಕುತೀರುವ ಸೈಬರ್​ ಕಳ್ಳರು

ಹೈದರಾಬಾದ್ ​(ತೆಲಂಗಾಣ): ಇತ್ತೀಚೆಗೆ ಸೈಬರ್​ ಕಳ್ಳರ ಹಾವಳಿ ಹೆಚ್ಚಾಗಿದೆ. ಯಾರದ್ದೋ ಫೋಟೋ ಬಳಸಿ, ಅವರ ಹೆಸರ ಮೇಲೆ ಹಣ ವಸೂಲಿ ಮಾಡುವುದು ದಂಧೆಯಾಗಿ ಮಾರ್ಪಟ್ಟಿದೆ. ಆದರೆ, ಇಲ್ಲಿ ಒಬ್ಬ ರಾಜ್ಯದ ಡಿಜಿಪಿ ಹೆಸರಲ್ಲೇ ಮೋಸ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹೌದು, ತೆಲಂಗಾಣದ ಡಿಜಿಪಿ ಮಹೇಂದ್ರರೆಡ್ಡಿ ಅವರ ಫೋಟೋವನ್ನೇ ವಾಟ್ಸ್​​ಆ್ಯಪ್​ ಡಿಪಿಯಾಗಿ ಬಳಸಿ ವಂಚನೆಗೆ ಸಂಚು ಹಾಕಿರುವುದು ಬಯಲಿಗೆ ಬಂದಿದೆ. ಡಿಜಿಪಿ ಫೋಟೋ ಡಿಪಿಯಾಗಿಟ್ಟ ಕಾರಣ ಕೆಲವರು ಹಣ ಕೊಟ್ಟು ಮೋಸ ಹೋಗಿದ್ದನ್ನು ಗುರುತಿಸಲಾಗಿದೆ ಎಂದು ಸೆಂಟ್ರಲ್ ಕ್ರೈಂ ಸ್ಪೇಷನ್​ ಜಂಟಿ ಕಮಿಷನರ್​​​ ಗಜರಾವು ಭೂಪಾಲ್​ ತಿಳಿಸಿದ್ದಾರೆ.

ಅಲ್ಲದೇ, ಅವರ ಫೋಟೋವನ್ನು ಬಂಡವಾಳ ಮಾಡಿಕೊಂಡು ಹಣ ಕಳುಹಿಸುವಂತೆ ಬೇಡಿಕೆ ಇಟ್ಟುರುವುದೂ ಕೂಡ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಇನ್ಮುಂದೆ ಉನ್ನತಾಧಿಕಾರಿಗಳ ಫೋಟೋ ಬಳಸಿ ಹಣ ಕೇಳುವವರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕೆಂದೂ ಜಂಟಿ ಕಮಿಷನರ್​ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಬಕೆಟ್​​ನ ನೀರಿನಲ್ಲಿ ಪತ್ನಿಯ ತಲೆ ಮುಳುಗಿಸಿ ಕೊಲೆ : ತಾನೂ ರೈಲಿಗೆ ತಲೆ ಕೊಟ್ಟ ಪತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.