ಲಖನೌ (ಉತ್ತರ ಪ್ರದೇಶ): ಭಾರತೀಯ ವಾಯುಪಡೆಯ ಮಹಿಳಾ ಅಧಿಕಾರಿಯನ್ನು ಯುವಕನೊಬ್ಬ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪ್ರೀತಿಯ ಬಲೆಯಲ್ಲಿ ಬೀಳಿಸಿ ನಂತರ, ಮದುವೆಯ ನೆಪದಲ್ಲಿ ಸುಮಾರು 24 ಲಕ್ಷ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಹಣ ವಾಪಸ್‌ಗೆ ಬೇಡಿಕೆ ಇಟ್ಟಿದ್ದ ಸೇನಾಧಿಕಾರಿಯೊಬ್ಬರಿಗೆ ಹಣವಂಚಿಸಿದ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಹಣ ಕಳೆದುಕೊಂಡ ಮಹಿಳಾ ಅಧಿಕಾರಿ ಸೋಮವಾರ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೈಬರ್ ಸೆಲ್ ಸಹಾಯದಿಂದ ಆರೋಪಿಯನ್ನು ಹುಡುಕಾಟ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಯಾಗುವ ನೆಪದಲ್ಲಿ ಹಣ ವಂಚನೆ: ಲಖನೌನ ಕ್ಯಾಂಟ್ ಪ್ರದೇಶದಲ್ಲಿ ನೆಲೆಸಿರುವ ಭಾರತೀಯ ವಾಯುಪಡೆಯ ಮಹಿಳಾ ಅಧಿಕಾರಿ, ಮದುವೆಯಾಗಲು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಖಾತೆಯನ್ನು ತೆರೆದಿದ್ದರು. ತಮಗೆ ಪರಿಪೂರ್ಣವಾಗಿ ಹೊಂದಾಣಿಕೆಯಾಗುವಂತಹ ವರನನ್ನು ಹುಡುಕಲು ಪ್ರಾರಂಭಿಸಿದರು. ಈ ವೇಳೆ ದೆಹಲಿ ನಿವಾಸಿ ಡಾ.ಅಮಿತ್ ಯಾದವ್ ಅವರಿಂದ ಮ್ಯಾಟ್ರಿಮೋನಿಯಲ್ಯಲ್ಲಿ ಮನವಿ ಸ್ವೀಕರಿಸಿದರು. ವಾಯುಪಡೆಯ ಮಹಿಳಾ ಅಧಿಕಾರಿ, ಡಾ.ಅಮಿತ್ ಅವರ ಮನವಿಯನ್ನು ಸ್ವೀಕರಿಸಿ ಮಾತುಕತೆ ಆರಂಭಿಸಿದರು. ತಾನು ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದು, ಭಾರತಕ್ಕೆ ಬರಲು ಬಯಸುತ್ತೇನೆ. ಇದಕ್ಕಾಗಿ ಆಕೆಯನ್ನು ಮದುವೆಯಾಗಿ ಭಾರತದಲ್ಲಿ ನೆಲೆಸುವುದಾಗಿ ಸೇನಾ ಅಧಿಕಾರಿಗೆ ಅಮಿತ್ ಹೇಳಿದ್ದಾನೆ ಎಂದು ಸಂತ್ರಸ್ತೆ ಸೇನಾಧಿಕಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹಣ ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಕಿದ ವೈದ್ಯ: ಸ್ವಲ್ಪ ಸಮಯ ಕಳೆದ ನಂತರ, ಅಮಿತ್ ಭಾರತದಲ್ಲಿ ಆಸ್ತಿ ಖರೀದಿಸುವ ಬಯಕೆಯನ್ನು ವ್ಯಕ್ತಪಡಿಸಲು ಪ್ರಾರಂಭಿಸಿದನು. ಇದರಿಂದ ಆತ ಮಹಿಳಾ ಅಧಿಕಾರಿಯಿಂದ ಆರ್ಥಿಕ ಸಹಾಯವನ್ನು ಕೋರಿದ್ದ. ಅಷ್ಟೇ ಅಲ್ಲ, ಹಣ ಕೊಡದೇ ಇದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಮೋಷನಲ್ ಬ್ಲಾಕ್ ಮೇಲ್ ಮಾಡತೊಡಗಿದ. ಅಮಿತ್ನ ಖಾತೆಗೆ ಮಹಿಳಾ ಸೇನಾಧಿಕಾರಿ 23 ಲಕ್ಷ 50 ಸಾವಿರ ರೂ. ಹಾಕಿದ್ದಾರೆ. ಆದರೆ, ಬಹಳ ಸಮಯದ ನಂತರ, ಹಣ ವಾಪಸ್ ಕೇಳಿದಾಗ ಅಮಿತ್ ಬೆದರಿಕೆ ಹಾಕಲು ಆರಂಭಿಸಿದ್ದಲ್ಲದೆ, ಮಹಿಳಾ ಸೇನಾಧಿಕಾರಿಗೆ ಚಾಟ್ ಹಾಗೂ ಫೋಟೋ ಹಾಕಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸರು ಹೇಳಿದ್ದೇನು?: ಸೋಮವಾರ, ಯುವಕನ ಬೆದರಿಕೆಯಿಂದ ತೊಂದರೆಗೀಡಾದ ಮಹಿಳಾ ಮಿಲಿಟರಿ ಅಧಿಕಾರಿ ಲಕ್ನೋದ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಆರೋಪಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿ, ಹಣ ವಾಪಸ್ ಪಡೆಯುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕ್ಯಾಂಟ್ ಇನ್ಸ್ಪೆಕ್ಟರ್ ರಾಜಕುಮಾರ್ ತಿಳಿಸಿದ್ದಾರೆ. ಸೈಬರ್ ಸೆಲ್‌ನಿಂದ ಸಹಾಯ ಪಡೆಯಲಾಗುತ್ತಿದ್ದು, ಇದರ ಹೊರತಾಗಿ ಆರೋಪಿ ಯುವಕನನ್ನು ದೆಹಲಿಯ ವಿಳಾಸದಲ್ಲಿ ಹುಡುಕಲಾಗುತ್ತಿದೆ. ಶೀಘ್ರವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: ರೀಲ್ಸ್ ಹುಚ್ಚಾಟಕ್ಕೆ ಇಬ್ಬರು ಮಹಿಳೆಯರು ಬಲಿ: ಹರಿಯಾಣದಲ್ಲಿ ಭೀಕರ ಹಿಟ್ & ರನ್ ಕೇಸ್