ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಆಗಾಗ್ಗೆ ಪೊಲೀಸರು ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚನೆಗಳನ್ನೂ ನೀಡುತ್ತಿದ್ದಾರೆ. ಆದರೂ ವಂಚನೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಲಾಟರಿ ಗೆದ್ದಿರುವ ಆಮಿಷ ತೋರಿಸಿ ಇಲ್ಲಿನ ಚಂಬಾ ಪಟ್ಟಣದ ವ್ಯಕ್ತಿಯೊಬ್ಬರಿಂದ ಸೈಬರ್ ಕಿಡಿಗೇಡಿಗಳು 72 ಲಕ್ಷ ರೂಪಾಯಿ ದೋಚಿದ್ದಾರೆ. ಭಗವಾನ್ ಛಂಗಾ ರಾಮ್ ಎಂಬವರು ಹಣ ಕಳೆದುಕೊಂಡಿದ್ದಾರೆ.
ಕಳೆದ ಸಪ್ಟೆಂಬರ್ ತಿಂಗಳಲ್ಲಿ ಎರಡೂವರೆ ಕೋಟಿ ರೂ ಮೌಲ್ಯದ ಲಾಟರಿ ಗೆದ್ದಿರುವ ಮೆಸೇಜ್ ಇವರ ಮೊಬೈಲ್ಗೆ ಬಂದಿದೆ. ಇದಾದ ಬಳಿಕ ಲಾಟರಿ ಹಣದ ಬಗ್ಗೆ ಮೊಬೈಲ್‌ನಲ್ಲಿ ಚರ್ಚಿಸಿದ್ದೆವು. 2.5 ಕೋಟಿ ಮೌಲ್ಯದ ಲಾಟರಿ ಗೆದ್ದಿದ್ದೀರಿ. ಹಣ ತೆಗೆದುಕೊಳ್ಳಬೇಕೆಂದರೆ ಇದಕ್ಕೆ ಪ್ರತಿಯಾಗಿ ಬ್ಯಾಂಕ್ ಖಾತೆಗೆ ಸ್ವಲ್ಪ ಹಣ ಹಾಕಬೇಕು ಎಂದು ಸೈಬರ್ ವಂಚಕರು ತಿಳಿಸಿದ್ದಾರೆ.
ಅವರು ಲಾಟರಿಯ ಬದಲು ವಿವಿಧ ವಿಚಾರಗಳನ್ನು ಚರ್ಚಿಸಿ ಹಲವು ಬಾರಿ ನನ್ನಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಎರಡೂವರೆ ಕೋಟಿ ಹಣದ ಆಸೆಯಲ್ಲಿ ಸೈಬರ್ ಅಪರಾಧಿಗಳು ಹೇಳಿದ ಬ್ಯಾಂಕ್ ಖಾತೆಗೆ ಸುಮಾರು 200 ಬಾರಿ ಹಣ ವರ್ಗಾಯಿಸಿದ್ದೆ. ಹೆಚ್ಚಿನ ಬಾರಿ ಹಣವನ್ನು ಬ್ಯಾಂಕ್ ಮೂಲಕ ಮತ್ತು ಕೆಲವು Google Pay ಮೂಲಕ ಕಳುಹಿಸಲಾಗಿದೆ. ಸುಮಾರು 3 ತಿಂಗಳ ಕಾಲ ಅವರು ಹೇಳಿದ ಖಾತೆಗೆ ಹಣ ಕಳುಹಿಸಿದ್ದೇನೆ ಎಂದು ಛಂಗಾ ರಾಮ್ ತಿಳಿಸಿದ್ದಾರೆ.
ಛಂಗಾ ರಾಮ್ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಕೊನೆಯದಾಗಿ ಹಣ ಟ್ರಾನ್ಸ್ಫರ್ ಮಾಡಿದ್ದರು. 3 ತಿಂಗಳ ಕಾಲ ತಾವೇ ಬ್ಯಾಂಕ್‌ಗೆ ತೆರಳಿ ವಂಚಕರು ಹೇಳಿದ ಬ್ಯಾಂಕ್ ಖಾತೆಗೆ ಹಣ ಕಳುಹಿಸಿದ್ದರು. ಸುಮಾರು 200 ವಹಿವಾಟು ನಡೆಸಿದ ಬಳಿಕ 72 ಲಕ್ಷ ರೂಪಾಯಿ ಠೇವಣಿ ಕಳೆದುಕೊಂಡಿರುವ ಬಗ್ಗೆ ಗೊತ್ತಾಗಿದೆ. ಠೇವಣಿ ಕಳೆದುಕೊಂಡಿದ್ದ ಛಂಗಾ ರಾಮ್ ಚಂಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇದ್ದುದರಿಂದ ಮತ್ತೆ ಶಿಮ್ಲಾದ ಸೈಬರ್ ಸೆಲ್‌ಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್ನಲ್ಲಿತ್ತು 25 ಲಕ್ಷ ರೂಪಾಯಿ: ಪೊಲೀಸರಿಗೆ ತಂದೊಪ್ಪಿಸಿದ ಆಟೋ ಚಾಲಕ!