ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್‌ನಿಂದ 14 ಯುವತಿಯರು ಸ್ನಾನಗೃಹದ ಕಿಟಕಿ ಗಾಜುಗಳನ್ನು ತೆಗೆದು ಅಲ್ಲಿಂದ ಪರಾರಿಯಾಗಿದ್ದಾರೆ. ಹೈದರಾಬಾದ್‌ನ ರಂಗಾರೆಡ್ಡಿ ಜಿಲ್ಲೆಯ ಗಂಡಿಪೇಟ ಮಂಡಲ್ನ ಹೈದರ್‌ಶಾಕೋಟ್‌ನಲ್ಲಿರುವ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್‌ನಿಂದ ನಿನ್ನೆ 14 ಯುವತಿಯರು ಪರಾರಿಯಾಗಿದ್ದಾರೆ.
ಈ ಬಗ್ಗೆ ಟ್ರಸ್ಟ್ನ ಮ್ಯಾನೇಜರ್ ರಾಮಕೃಷ್ಣ ಮೂರ್ತಿ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ನಾನಗೃಹದ ಕಿಟಕಿಯ ಗಾಜುಗಳನ್ನು ತೆಗೆದು ಅಲ್ಲಿಂದ ಮಹಿಳೆಯರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೈದರಾಬಾದ್‌ನ ವಿವಿಧ ಪ್ರಕರಣಗಳಲ್ಲಿ ಬಂಧಿತರಾಗುವ ಯುವತಿಯರು ಮತ್ತು ಮಹಿಳೆಯರನ್ನು ಪೊಲೀಸರು ಈ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್‌ಗೆ ಸ್ಥಳಾಂತರಿಸುತ್ತಾರೆ. ಸಂಪೂರ್ಣ ಭದ್ರತೆಯ ನಡುವೆ 18 ಜನರನ್ನು ಇಲ್ಲಿ ಇರಿಸಲಾಗಿತ್ತು.
ಶುಕ್ರವಾರದಂದು 15 ಮಂದಿ ಸ್ನಾನಗೃಹದ ಕಿಟಕಿ ಗಾಜುಗಳನ್ನು ತೆಗೆದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಯುವತಿಯೊಬ್ಬಳಿಗೆ ಸ್ವಲ್ಪ ಗಾಯಗಳಾಗಿ ಅಲ್ಲೇ ಉಳಿದುಕೊಂಡಿದ್ದಾಳೆ. ಉಳಿದ 14 ಯುವತಿಯರು ಓಡಿಹೋದರು. ಪರಾರಿಯಾಗಿರುವವರಲ್ಲಿ ಹೆಚ್ಚಿನವರು ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದವರಾಗಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಖಾಲಿ ರೈಲು!
ಈ ಬಗ್ಗೆ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಪರಾರಿಯಾದವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.