ETV Bharat / bharat

ವಿಶ್ವ ಪರಿಸರ ದಿನಾಚರಣೆ: ಮನೆಯನ್ನೇ ಆಮ್ಲಜನಕದ ಸ್ಥಾವರವಾಗಿಸಿದ ಹರ್ಬಿಲಾಸ್..! ಒಂದಲ್ಲ 2ಅಲ್ಲ 4ಸಾವಿರ ಸಸ್ಯ!!

ಹರ್ಬಿಲಾಸ್​ಗೆ ಚಿಕ್ಕಂದಿನಿಂದಲೂ ಮರ ಗಿಡಗಳೆಂದರೆ ಎಲ್ಲಿಲ್ಲದೆ ಪ್ರೀತಿ. ಅವರ ಮನೆ ಸುತ್ತಲೂ ಗಿಡ ನೆಟ್ಟು ಪೋಷಿಸುವುದೇ ಅವರ ಕಾಯಕವಾಗಿತ್ತು. ಅವರ ಮದುವೆಯ ನಂತರವೂ, ಪತ್ನಿ ಉಮಾ ಗುಪ್ತಾ ಈ ಉತ್ತಮ ಕಾರ್ಯಕ್ಕೆ ಪ್ರೋತ್ಸಾಹ ನೀಡಿದರು.

ಮನೆಯನ್ನೇ ಆಮ್ಲಜನಕದ ಸ್ಥಾವರವನ್ನಾಗಿ ಮಾಡಿದ ಹರ್ಬಿಲಾಸ್..!

author img

By

Published : Jun 5, 2021, 9:59 PM IST

ಕರ್ನಾಲ್ (ಹರಿಯಾಣ): ಇಂದು ವಿಶ್ವ ಪರಿಸರ ದಿನ. ಪರಿಸರದ ಬಗ್ಗೆ ಜನತೆಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶ. ಕರ್ನಾಲ್​ನಲ್ಲಿರುವ ಪರಿಸರ ಪ್ರೇಮಿ ಹರ್ಬಿಲಾಸ್​ ಗುಪ್ತಾ ತಮ್ಮ ಮನೆಯನ್ನು ಆಮ್ಲಜನಕದ ಸ್ಥಾವರವನ್ನಾಗಿ ಮಾಡಿದ್ದಾರೆ. ಅವರ ನಿವಾಸದಲ್ಲಿ ಅಂದಾಜು 4 ಸಾವಿರ ಸಸ್ಯಗಳಿದ್ದು, ಹಸಿರಿನ ಸಿರಿಯಂತೆ ಮೇಳೈಸುತ್ತಿದೆ.

ಮನೆಯನ್ನೇ ಆಮ್ಲಜನಕದ ಸ್ಥಾವರವನ್ನಾಗಿ ಮಾಡಿದ ಹರ್ಬಿಲಾಸ್..!

‘ಮರ-ಗಿಡಗಳೆಂದರೆ ಎಲ್ಲಿಲ್ಲದ ಪ್ರೀತಿ’

ಹರ್ಬಿಲಾಸ್​ಗೆ ಚಿಕ್ಕಂದಿನಿಂದಲೂ ಮರ ಗಿಡಗಳೆಂದರೆ ಎಲ್ಲಿಲ್ಲದೆ ಪ್ರೀತಿ. ಅವರ ಮನೆ ಸುತ್ತಲೂ ಗಿಡ ನೆಟ್ಟು ಪೋಷಿಸುವುದೇ ಅವರ ಕಾಯಕವಾಗಿತ್ತು. ಅವರ ಮದುವೆಯ ನಂತರವೂ, ಪತ್ನಿ ಉಮಾ ಗುಪ್ತಾ ಈ ಉತ್ತಮ ಕಾರ್ಯಕ್ಕೆ ಪ್ರೋತ್ಸಾಹ ನೀಡಿದರು.

‘ತೂಗು ಉದ್ಯಾನ ನಿರ್ಮಾಣ’

ಲಾಕ್​ಡೌನ್ ಸಮಯದಲ್ಲಿ ದಂಪತಿ ರಸ್ತೆ ಬದಿ ಶೆಡ್​ಗಳನ್ನು ನಿರ್ಮಿಸಿ, ತೂಗು ಉದ್ಯಾನಗಳನ್ನು ನಿರ್ಮಿಸಿದ್ದಾರೆ. ಶೆಡ್​ಗಳ ಸುತ್ತ ಗಿಡಗಳನ್ನು ನೆಟ್ಟು, ಅಲ್ಲಿ ವಿಶ್ರಾಂತಿ ಪಡೆಯುವವರಿಗೆ ಶುದ್ಧ ಗಾಳಿ ಸಿಗುವಂತೆ ಮಾಡಿದ್ದಾರೆ. ಅಲ್ಲಿ ಕುಳಿತುಕೊಳ್ಳುವ ಪ್ರತಿಯೊಬ್ಬರು ದಂಪತಿ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.

ಪರಿಸರ ದಿನದ ಉದ್ದೇಶ

ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದ್ದು, ಜನತೆಗೆ ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.

ಇದನ್ನೂ ಓದಿ:ವಿಶ್ವ ಪರಿಸರ ದಿನ ವಿಶೇಷ : ಪ್ರಕೃತಿ ಸಂರಕ್ಷಣೆಯಲ್ಲಿ ಹಸಿರು ನ್ಯಾಯಪೀಠದ ಕೊಡುಗೆ ಅವಿಸ್ಮರಣೀಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.