ತರಾಲಿ(ಉತ್ತರಾಖಂಡ್): ಶುಕ್ರವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳುಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಲ್ಸಿರಿ ಗ್ರಾಮದ ಕೈಲ್ ನದಿಯಲ್ಲಿ ಸ್ನಾನ ಮಾಡಲು ಹೋದ ನಾಲ್ಕು ಮಕ್ಕಳು ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕುಟುಂಬ ಸದಸ್ಯರೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಾಯದಿಂದ ನಾಲ್ವರ ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ನಾಲ್ವರು ವಿದ್ಯಾರ್ಥಿಗಳನ್ನು ರಘುವೀರ್ ಸಿಂಗ್ (16), ಹರೇಂದ್ರ ಸಿಂಗ್(17), ಭರತ್ ಸಿಂಗ್(15) ಮತ್ತು ರಾಕೇಶ್ ಮಿಶ್ರಾ(16) ಎಂದು ಗುರುತಿಸಲಾಗಿದೆ.
ನಾಲ್ವರು ವಿದ್ಯಾರ್ಥಿಗಳು ವಿವಿಧ ಗ್ರಾಮದವರಾಗಿದ್ದು, ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸ್ಥಳೀಯರ ಪ್ರಕಾರ ಪತ್ತೆಯಾದ ಮೃತ ದೇಹಗಳ ಬಳಿ ಒಸಿಬಿ ಪೇಪರ್‌ಗಳು ಸಹ ಪತ್ತೆಯಾಗಿದ್ದು, ಈ ಘಟನೆಯ ಮೊದಲು ಕೆಲವು ರೀತಿಯ ಅಮಲು ಪದಾರ್ಥಗಳನ್ನು ಸೇವಿಸುವ ಸಾಧ್ಯತೆಗಳು ವ್ಯಕ್ತವಾಗುತ್ತಿವೆ. ಸ್ಥಳೀಯ ಸಾರ್ವಜನಿಕ ಪ್ರತಿನಿಧಿಗಳು ಘಟನಾ ತನಿಖೆಯ ನಂತರ ಸ್ಥಳದಲ್ಲಿ ಪತ್ತೆಯಾದ ವಸ್ತುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒತ್ತಾಯಿಸಿದ್ದಾರೆ.
ಘಟನೆ ಬಗ್ಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ರವೀಂದ್ರ ಜುನ್ವಾಥಾ ಕಡಿಮೆ ಆಳದ ನೀರಿನಲ್ಲಿ ಒಟ್ಟಿಗೆ ಮುಳುಗಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಇದರಲ್ಲಿ ಎಲ್ಲೋ ಏನೋ ಸಂಶಯವಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಹೇಳಿದ್ದಾರೆ.
ಇದನ್ನೂ ಓದಿ: ಈಜಲು ಸಮುದ್ರಕ್ಕೆ ಇಳಿದ ಮಕ್ಕಳು: ಇಬ್ಬರ ಸಾವು, ಮೂವರ ರಕ್ಷಣೆ