ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ಇಲ್ಲಿನ ಪಿ.ಗನ್ನವರಂ ವ್ಯಾಪ್ತಿಯ ಲಂಕಲಗನ್ನವರಂನ ವಶಿಷ್ಠ ಗೋದಾವರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಯರ್ರಂಶೆಟ್ಟಿ ರತ್ನಸಾಗರ್, ಬಂಡಾರು ನವೀನ್, ಪಂದಾಲ ಪವನ್, ಖಂಡವಿಲ್ಲಿ ವಿನಯ್ ಎಂದು ಗುರುತಿಸಲಾಗಿದೆ.
ಇವರೆಲ್ಲರೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಭಾನುವಾರ ಮಧ್ಯಾಹ್ನ ಮನೆಯಿಂದ ಹೊರ ಹೋಗಿದ್ದಾರೆ. ರಾತ್ರಿ 7 ಗಂಟೆಯಾದ್ರೂ ಮಕ್ಕಳು ವಾಪಸ್ಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗಾಬರಿಗೊಂಡು ಶೋಧ ನಡೆಸಿದ್ದರು.
ವಶಿಷ್ಠ ಗೋದಾವರಿ ನದಿಯ ದಡದ ಬಳಿ ತೆರಳಿ ಹುಡುಕಾಟ ನಡೆಸಿದಾಗ ಮಕ್ಕಳ ಬಟ್ಟೆ, ಚಪ್ಪಲಿ ಮತ್ತು ಎರಡು ಫೋನ್ಗಳು ಪತ್ತೆಯಾಗಿತ್ತು. ಹೀಗಾಗಿ ಮಕ್ಕಳು ಸ್ನಾನಕ್ಕೆ ತೆರಳಿ ನೀರುಪಾಲಾಗಿರುವ ಸಂಶಯ ವ್ಯಕ್ತವಾಗಿದೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.