ಪಲಾಮು (ಜಾರ್ಖಂಡ್): ಜಿಲ್ಲೆಯ ರಾಮಗಢ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾ ಎಂಬಲ್ಲಿ ಆಳವಾದ ನೀರಿನ ಕೊಳದಲ್ಲಿ ಮುಳುಗಿ ನಾಲ್ವರು ಶಾಲಾ ಬಾಲಕಿಯರು ಮೃತಪಟ್ಟ ಘಟನೆ ನಡೆದಿದೆ. ಗುರುವಾರ ತಡರಾತ್ರಿ ನಾಲ್ವರು ಬಾಲಕಿಯರ ಮೃತದೇಹಗಳು ಪತ್ತೆಯಾಗಿವೆ. ಬಾಲಕಿಯರೆಲ್ಲರೂ ಉಳದಂಡ ಪಂಚಾಯಿತಿ ನಿವಾಸಿಗಳೆಂದು ತಿಳಿದು ಬಂದಿದೆ.
ಆರಾಧನಾ ಕುಮಾರಿ (8 ವರ್ಷ), ಛಾಯಾ ಖಾಖಾ (5 ವರ್ಷ), ಸಲ್ಮಿ ಕುಮಾರಿ (6 ವರ್ಷ) ಮತ್ತು ಇನ್ನೊಬ್ಬ ವಿದ್ಯಾರ್ಥಿನಿಯ ಹೆಸರು ಪತ್ತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಮೃತ ವಿದ್ಯಾರ್ಥಿಗಳು ಸರ್ಜಾದಲ್ಲಿರುವ ನೀಲಾಂಬರ್ - ಪಿತಾಂಬರ್ ಎಂಬ ಶಾಲೆಯ ಓದುತ್ತಿದ್ದರು. ಮೃತರೆಲ್ಲರೂ ಗುರುವಾರ ಸರ್ಜಾದ ನೀಲಾಂಬರ್ ಪೀತಾಂಬರ ಶಾಲೆಗೆ ತೆರಳಿದ್ದರು.
ಸಂಜೆಯಾದರೂ ಹಿಂತಿರುಗದ ಹಿನ್ನೆಲೆಯಲ್ಲಿ ಸಂಬಂಧಿಕರು ಬಾಲಕಿಯರಿಗಾಗಿ ಹುಡುಕಾಟ ಆರಂಭಿಸಿದ್ದರು. ಆದರೆ, ಸಾಕಷ್ಟು ಹುಡುಕಾಟದ ನಂತರ ಸರ್ಜಾ ಸಮೀಪದ ಕೊಳದ ಬಳಿ ಬಾಲಕಿಯರ ಕೆಲವು ಪುಸ್ತಕ ಹಾಗೂ ಬ್ಯಾಗ್ ಇರುವುದು ಕಂಡು ಬಂದಿದೆ. ಬಳಿಕ ಅಲ್ಲಿಯೇ ಹುಡುಕಾಟ ನಡೆಸುತ್ತಿದ್ದಾಗ ಕೊಳದಲ್ಲಿ ಅವರ ಮೃತದೇಹ ಪತ್ತೆಯಾಗಿವೆ. ತಡರಾತ್ರಿಯೇ ಎಲ್ಲ ಬಾಲಕಿಯರ ಮೃತ ದೇಹಗಳನ್ನು ನೀರಿನಿಂದ ಹೊರ ತೆಗೆಯಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಮಗಢ ಪೊಲೀಸ್ ಠಾಣೆಯ ಉಸ್ತುವಾರಿ ಪ್ರಭಾತ್ ರಂಜನ್ ರೈ, ನಾಲ್ವರು ಶಾಲಾ ಬಾಲಕಿಯರ ಶವಗಳು ಕೆರೆಯಲ್ಲಿ ಪತ್ತೆಯಾಗಿವೆ ಎಂದು ಸ್ಥಳೀಯರು ತಡರಾತ್ರಿ ನಮಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ತಿಳಿದ ತಕ್ಷಣ ನಮ್ಮ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆಗ ನೀರಿನಲ್ಲಿ ಮೃತದೇಹ ಪತ್ತೆಯಾಗಿದ್ದು ಅವುಗಳನ್ನು ಹೊರತೆಗೆದಿದ್ದಾರೆ.
ಮೃತ ದೇಹವನ್ನು ಹೊರತೆಗೆದ ನಂತರ ಪಂಚನಾಮೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತ ಬಾಲಕಿಯರ ವಯಸ್ಸು 8 ರಿಂದ 10 ವರ್ಷ. ಈ ಹುಡುಗಿಯರು ನೀಲಾಂಬರ್ ಪಿತಾಂಬರ ಶಾಲೆಯ ಎಲ್ಕೆಜಿಯಲ್ಲಿ ಓದುತ್ತಿದ್ದರು. ಮೃತರಲ್ಲಿ ಮೂವರು ಹೆಸರು ಪತ್ತೆಯಾಗಿದ್ದು ಇನ್ನೊಬ್ಬ ವಿದ್ಯಾರ್ಥಿನಿಯನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ. ನಾಲ್ವರು ಬಾಲಕಿಯರು ಹೇಗೆ ನೀರಿನಲ್ಲಿ ಮುಳುಗಿದರು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಪೊಲೀಸರು ಈ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ ಇಡೀ ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ. ಬಾಲಕಿಯರು ಶಾಲೆಯಿಂದ ಕೊಳದತ್ತ ಹೇಗೆ ಬಂದರು ಎಂಬುದು ತಿಳಿದಿಲ್ಲ. ಪೊಲೀಸರು ಇಂದು (ಶುಕ್ರವಾರ) ಮತ್ತೆ ಗ್ರಾಮಕ್ಕೆ ಆಗಮಿಸಿದ್ದು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಉನ್ನತ ಆಡಳಿತಾಧಿಕಾರಿಗಳು ಕೂಡ ಸ್ಥಳಕ್ಕೆ ತೆರಳಿದ್ದಾರೆ. ಒಂದು ವಾರದ ಹಿಂದೆ ಪಲಮುವಿನ ಪಿಪ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳದಲ್ಲಿ ಇಬ್ಬರು ಹುಡುಗಿಯರು ಮುಳುಗಿ ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ದುರಂತ ನಡೆದಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Boat tragedy: ಬೋಟ್ ಮುಳುಗಿ ಒಂದೇ ಕುಟುಂಬದ ಇಬ್ಬರು ಸಾವು.. ದೋಣಿ ಮುಳುಗಲು ಕಾರಣವಾಯ್ತು ಒಂದು ಸಣ್ಣ ರಂಧ್ರ