ಅಮರಾವತಿ(ಮಹಾರಾಷ್ಟ್ರ): ಅಮರಾವತಿಯ ಇಂಜಿನಿಯರಿಂಗ್ ಕಾಲೇಜ್ನಲ್ಲಿ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತದೇಹಗಳನ್ನ ಈಗಾಗಲೇ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅಮರಾವತಿಯ ಸಮೀಪದ ಕಠೋರಾ ಪ್ರದೇಶದಲ್ಲಿರುವ ಕೋಟಿ ಇಂಜನಿಯರಿಂಗ್ ಕಾಲೇಜ್ನ ಪ್ರವೇಶ ದ್ವಾರಕ್ಕೆ ಬಣ್ಣ ಬಳಿಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಈಗಾಗಲೇ ಗಡಗೇನಗರ ಪೊಲೀಸರ ತಂಡ ಭೇಟಿ ನೀಡಿ, ಮೃತದೇಹಗಳನ್ನ ವಶಕ್ಕೆ ಪಡೆದುಕೊಂಡು, ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದೆ.
ಇದನ್ನೂ ಓದಿರಿ: ಬಾಲಿವುಡ್ನಲ್ಲಿ ಕೊರೊನಾ ಸ್ಫೋಟ.. ಅರ್ಜುನ್ ಕಪೂರ್, ರಿಯಾ, ಅನ್ಶುಲಾಗೆ ಸೋಂಕು
ಪ್ರವೇಶ ದ್ವಾರಕ್ಕೆ ಬಣ್ಣ ಬಳಿಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ಶಾಕ್ ಹೊಡೆದು ಇವರು ದುರ್ಮರಣಕ್ಕೀಡಾಗಿದ್ದಾರೆಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.