ಪ್ರಕಾಶಂ (ಆಂಧ್ರಪ್ರದೇಶ): ಮದುವೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿರುವ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪ್ರಕಾಶಂನಲ್ಲಿ ನಡೆದಿದೆ. ದುರ್ಘಟನೆ ವೇಳೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಪ್ರಕಾಶಂನಲ್ಲಿ ಈ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಸಾವನ್ನಪ್ಪಿದವರು ವಧುವಿನ ಕಡೆಯವರೆಂದು ತಿಳಿದು ಬಂದಿದ್ದು, ಪೊಡಿಲಿ - ಮಾರ್ಕಾಪುರ್ ಎಕ್ಸ್ಪ್ರೆಸ್ವೇನಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದೆ. ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವಧುವಿನೊಂದಿಗೆ ಎಲ್ಲರೂ ಪ್ರಯಾಣ ಬೆಳೆಸಿದ್ದರು. ರಭಸವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಕೆಲವರು ಆಟೋದಿಂದ ಕೆಳಗೆ ಬಿದ್ದಿರುವ ಪರಿಣಾಮ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.
ಆಟೋದಲ್ಲಿ ವಧು ಸೇರಿದಂತೆ 10 ಜನರು ಪ್ರಯಾಣ ಬೆಳೆಸಿದ್ದರು. ಸಾವನ್ನಪ್ಪಿದವರನ್ನ ಶ್ರೀನಿವಾಸ್(55), ವೆಂಕಟಸುಬ್ಬ ರಾವ್(45), ಕಾರ್ತಿಕ್(13) ಹಾಗೂ ಅನಿಲ್(11) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಇಬ್ಬರನ್ನ ಮರ್ಕಪುರ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.