ETV Bharat / bharat

Gadchiroli encounter.. ಮಹಾರಾಷ್ಟ್ರದಲ್ಲಿ 26 ನಕ್ಸಲರ ಬೇಟೆಯಾಡಿದ ಪೊಲೀಸರು - Gadchiroli encounter

ಪೊಲೀಸರ ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿ(encounter) ನಡೆದಿದ್ದು, ಈ ವೇಳೆ 26 ನಕ್ಸಲರು ಹತರಾಗಿದ್ದಾರೆಂದು ಪೊಲೀಸ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Four Naxals killed in encounter
Four Naxals killed in encounter
author img

By

Published : Nov 13, 2021, 3:21 PM IST

Updated : Nov 13, 2021, 7:31 PM IST

ಗಡ್​ಚಿರೋಲಿ(ಮಹಾರಾಷ್ಟ್ರ): ಇಲ್ಲಿನ ಗಡ್​ಚಿರೋಲಿ(gadchiroli encounter) ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಪೊಲೀಸರು ನಡೆಸಿರುವ ಎನ್​ಕೌಂಟರ್​​ನಲ್ಲಿ 26 ಕೆಂಪು ಉಗ್ರರು ಹತರಾಗಿದ್ದಾರೆ. ಮಹಾರಾಷ್ಟ್ರದ ಪೊಲೀಸ್ ಹಾಗೂ ಸಿ-60 ಘಟಕ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 26 ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಎನ್​ಕೌಂಟರ್ ವೇಳೆ ಮೂವರು ಯೋಧರು ಗಾಯಗೊಂಡಿದ್ದಾಗಿ ಗಡ್​​ಚಿರೋಲಿ ಎಸ್ಪಿ ಅಂಕಿತ್​ ಗೋಯೆಲ್​(Gadchiroli SP Ankit Goel) ತಿಳಿಸಿದ್ದಾರೆ.

  • 26 Naxals have been eliminated in an encounter with the C-60 unit of Maharashtra Police in the jungles of Gyarapatti in Gadchiroli district today. Three jawans have suffered injuries in the encounter: Gadchiroli SP Ankit Goel

    — ANI (@ANI) November 13, 2021 " class="align-text-top noRightClick twitterSection" data=" ">

ಗಡ್​ಚಿರೋಲಿ(Gadchiroli) ಜಿಲ್ಲೆಯ ಗ್ಯಾರಹ್​ಬತ್ತಿ ಅರಣ್ಯ ವಲಯದ ಧನೋರಾದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉತ್ತರ ನೀಡಿರುವ ಪೊಲೀಸರು 26 ನಕ್ಸಲರನ್ನು ಬೇಟೆಯಾಡಿದ್ದಾರೆ.

ಇದನ್ನೂ ಓದಿರಿ: ನಿಜಕ್ಕೂ ಪವಾಡ: ಮೊಹಮ್ಮದ್​ ರಿಜ್ವಾನ್​ಗೆ ಚಿಕಿತ್ಸೆ ನೀಡಿದ ಭಾರತೀಯ ವೈದ್ಯನ ಮಾತು!

ಗುಂಡಿನ ಕಾರ್ಯಾಚರಣೆಯಲ್ಲಿ 26 ನಕ್ಸಲರು ಹತರಾಗಿದ್ದು, ಸ್ಥಳದಲ್ಲೇ ಶೋಧಕಾರ್ಯ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಂಕಿತ್ ಗೋಯೆಲ್​​ ಮಾಹಿತಿ ನೀಡಿದ್ದಾರೆ.

Last Updated : Nov 13, 2021, 7:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.