ಹೈದರಾಬಾದ್: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಎಷ್ಟು ಸಂವೇದನಾಶೀಲರೋ ಅಷ್ಟೇ ಕ್ರಿಯಾಶೀಲರಾಗಿದ್ದಾರೆ. ಆದ್ರೆ, ಕೆಲವೊಮ್ಮೆ ಸೂಕ್ತ ಮಾರ್ಗದರ್ಶನ ಸಿಗದೆ ಸಣ್ಣ ಸಣ್ಣ ವಿಷಯಗಳಿಗೆ ಭಯಗೊಂಡು ಒತ್ತಡಕ್ಕೆ ನಲುಗಿ ತಮ್ಮ ಬದುಕನ್ನೇ ಬಲಿಕೊಡುತ್ತಾರೆ. ತೆಲಂಗಾಣ ಇಂಟರ್ ಮೀಡಿಯೇಟ್ ಪರೀಕ್ಷೆ ಫಲಿತಾಂಶ ಮೊನ್ನೆ (ಮೇ.9) ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತಂಕಗೊಂಡ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ಸಾವಿಗೆ ಶರಣಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 12ಕ್ಕೆ ತಲುಪಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಣಿಕೊಂಡ ಕೆಪಿಆರ್ ಕಾಲೋನಿಯ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿದ್ದಳು. ಮೂರು ವಿಷಯಗಳಲ್ಲಿ ಅನುತ್ತೀರ್ಣಳಾದ ನಂತರ ಮನನೊಂದ ಆಕೆ, ಕಟ್ಟಡದಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಳು. ಬಳಿಕ ವಿದ್ಯಾರ್ಥಿನಿಯನ್ನ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿತಾದರೂ ಬುಧವಾರ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: ಶಾಲೆಗೆ ಚಕ್ಕರ್ ಹಾಕಿದ ಪುತ್ರ, ಬೈದು ಬುದ್ಧಿ ಹೇಳಿದ್ದಕ್ಕೆ ಮನೆಯನ್ನೇ ತೊರೆದ!
ವನಸ್ಥಲಿಪುರಂನಲ್ಲಿ ನೆಲೆಸಿರುವ ವಿದ್ಯಾರ್ಥಿಯೊಬ್ಬ (17) ಹಸ್ತಿನಾಪುರದ ಖಾಸಗಿ ಕಾಲೇಜಿನಲ್ಲಿ ಇಂಟರ್ ಮೊದಲ ವರ್ಷದ ವ್ಯಾಸಂಗ ಮಾಡುತ್ತಿದ್ದ. ಪರೀಕ್ಷೆಯಲ್ಲಿ ಅನುತ್ತೀರ್ಣನಾದ ನೋವಿನಿಂದ ಮನನೊಂದು ನಿನ್ನೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಗೆಯೇ, ಪಂಜಗುಟ್ಟ ಪ್ರತಾಪನಗರದ ವಿದ್ಯಾರ್ಥಿಯೊಬ್ಬಳು (16) ಯಳ್ಳಾರೆಡ್ಡಿಗುಡಾದ ಕಾಲೇಜಿನಲ್ಲಿ ಇಂಟರ್ ಸಿಇಸಿ ಓದುತ್ತಿದ್ದಳು. ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನೆಲೆ ಮನನೊಂದು ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾವಿಗೆ ಶರಣಾಗಿದ್ದಾಳೆ.
ಇದನ್ನೂ ಓದಿ : SSLCಯಲ್ಲಿ ಔಟ್ ಆಫ್ ಅಂಕ: ಕೃಷಿಕ ತಂದೆಯ ಪ್ರೋತ್ಸಾಹವೇ ಕಾರಣ- ಟಾಪರ್ ಭೀಮನಗೌಡ
ಖಮ್ಮಂ ಜಿಲ್ಲೆಯ ಕರೇಪಲ್ಲಿ ಮಂಡಲ ಮೂಲದ ವಿದ್ಯಾರ್ಥಿ (16)ಯೊಬ್ಬ ಕರೇಪಲ್ಲಿಯ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಟರ್ ಓದುತ್ತಿದ್ದ. ಎಕ್ಸಾಂ ಫೇಲ್ ಆದ ಕಾರಣ ಮನನೊಂದ ಆತ ಟೊಮೆಟೊದಲ್ಲಿ ಇಲಿ ಪಾಷಾಣ ಬೆರೆಸಿ ತಿಂದಿದ್ದಾನೆ. ಬಳಿಕ, ಬಿಪಿ ಮಾತ್ರೆಗಳನ್ನು ಸೇವಿಸಿದ್ದಾನೆ. ಕೂಡಲೇ ಆತನನ್ನು ಖಮ್ಮಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಗೋಡೆ ಮೇಲೆ ಡೆತ್ ನೋಟ್ ಬರೆದಿಟ್ಟು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಕಳೆದ ತಿಂಗಳಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿತ್ತು. ಅಭಯ್ ರೆಡ್ಡಿ (22) ಮೃತ ವಿದ್ಯಾರ್ಥಿ. ಈತ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನ ವಸತಿ ನಿಲಯದ ಗೋಡೆಯ ಮೇಲೆ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದ. ಕಾಲೇಜಿನ ಪ್ರಾಂಶುಪಾಲರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.
ಇದನ್ನೂ ಓದಿ : ಪಿಯುಸಿ ಫಲಿತಾಂಶ : ಹುಬ್ಬಳ್ಳಿ ವಿದ್ಯಾನಿಕೇತನ ಕಾಲೇಜಿನ ಸಾಯೀಶ್‌ಗೆ ವಿಜ್ಞಾನ ವಿಭಾಗದಲ್ಲಿ 3ನೇ ರ‍್ಯಾಂಕ್