ETV Bharat / bharat

ಬಂಧುಗಳ ಬಲಿ ಪಡೆದ ಕೋವಿಡ್‌: ಖಿನ್ನತೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಆಂಧ್ರ ಪ್ರದೇಶದಲ್ಲಿ ನಾಲ್ವರ ಆತ್ಮಹತ್ಯೆ

ಕೊರೊನಾದಿಂದ ಸ್ನೇಹಿತರು ಮತ್ತು ಬಂಧುಗಳು ಮೃತಪಡುತ್ತಿರುವ ಕಾರಣದಿಂದ ಮನನೊಂದು, ಖಿನ್ನತೆಗೆ ಒಳಗಾಗಿ ಒಂದೇ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

four-members-from-same-family-commit-suicided-by-having-poison
ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ, ಆತ್ಮಹತ್ಯೆ
author img

By

Published : Jun 23, 2021, 11:52 AM IST

Updated : Jun 23, 2021, 12:31 PM IST

ಕರ್ನೂಲ್(ಆಂಧ್ರಪ್ರದೇಶ): ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ನಡೆದಿದೆ. ಕರ್ನೂಲ್ ನಗರದ ವಡ್ಡೆಗೇರಿ ಈ ಹೃದಯ ವಿದ್ರಾವಕ ಪ್ರಕರಣಕ್ಕೆ ಸಾಕ್ಷಿಯಾಗಿದೆ.

ಪ್ರತಾಪ್ (42), ಹೇಮಲತಾ(36) ದಂಪತಿ ಹಾಗೂ ಅವರ ಮಕ್ಕಳಾದ ಜಯಂತ್ (17) ಮತ್ತು ರಿಷಿತಾ (14) ಸಾವನ್ನಪ್ಪಿದವರು. ಪ್ರತಾಪ್ ಟಿವಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಜಯಂತ ಡಿಪ್ಲೊಮಾ ಮತ್ತು ರಿಷಿತಾ ಏಳನೇ ತರಗತಿ ಓದುತ್ತಿದ್ದರು.

ಆತ್ಮಹತ್ಯೆ ಮಾಡಿಕೊಂಡ ಸ್ಥಳದ ದೃಶ್ಯಗಳು

ಬೆಳಗ್ಗೆ ಎಷ್ಟು ಸಮಯವಾದರೂ ಬಾಗಿಲು ತೆರೆಯದ ಕಾರಣದಿಂದ ಅನುಮಾನಪಟ್ಟ ನೆರೆಹೊರೆಯವರು ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಆದರೂ ಬಾಗಿಲು ತೆರೆಯದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಬಾಗಿಲನ್ನು ಒಡೆದು ನೋಡಿದಾಗ ಎಲ್ಲರೂ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಭಾರತದಲ್ಲಿ ಮುಕ್ಕೋಟಿ ದಾಟಿದ ಕೋವಿಡ್ ಸೋಂಕಿತರು; 29 ಕೋಟಿ ಜನರಿಗೆ ವ್ಯಾಕ್ಸಿನ್‌

ಕೊರೊನಾ ಕಾರಣದಿಂದಾಗಿ ಸಾಕಷ್ಟು ಮಂದಿ ಬಂಧುಗಳು, ಸ್ನೇಹಿತರನ್ನು ಕಳೆದುಕೊಂಡ ಕಾರಣ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ. ಈ ಪ್ರಕರಣದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದ್ರೆ ನಿಖರವಾದ ಕಾರಣಕ್ಕಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Last Updated : Jun 23, 2021, 12:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.