ETV Bharat / bharat

ಮೊಹರಂ ಮೆರವಣಿಗೆ ವೇಳೆ ವಿದ್ಯುತ್​ ಶಾಕ್​ ತಗುಲಿ ನಾಲ್ವರು ಸಾವು.. 6 ಮಂದಿಗೆ ಗಾಯ

ಮೊಹರಂ ಶೋಕ ಮೆರವಣಿಗೆ ವೇಳೆ ವಿದ್ಯುತ್ ಶಾಕ್​ ತಗುಲಿ ನಾಲ್ವರು ಮೃತಪಟ್ಟು, 6 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್​ನ ಬೊಕಾರೋದಲ್ಲಿ ನಡೆದಿದೆ.

Etv four-electrocuted-to-death-6-injured-as-live-wire-falls-on-ashura-procession-in-jharkhands-bokaro
ಮೊಹರಂ ಮೆರವಣಿಗೆ : ವಿದ್ಯುತ್​ ಶಾಕ್​ ತಗುಲಿ ನಾಲ್ವರು ಸಾವು.. 6 ಮಂದಿಗೆ ಗಾಯ
author img

By

Published : Jul 29, 2023, 11:56 AM IST

Updated : Jul 29, 2023, 1:40 PM IST

ಬೊಕಾರೋ (ಜಾರ್ಖಂಡ್​) : ಮೊಹರಂ ಹಬ್ಬದ ನಿಮಿತ್ತ ಶೋಕ ಮೆರವಣಿಗೆ ತೆರಳುತ್ತಿದ್ದ ಜನರಿಗೆ ವಿದ್ಯುತ್​ ತಂತಿ ತಗುಲಿ ನಾಲ್ವರು ಸಾವನ್ನಪ್ಪಿ, 6 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್​ನ ಬೊಕಾರೋದಲ್ಲಿ ನಡೆದಿದೆ. ಗಾಯಾಳುಗಳನ್ನು ಇಲ್ಲಿನ ಡಿವಿಸಿ ಬೊಕಾರೋ ಥರ್ಮಲ್​ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮೊಹರಂ ಹಬ್ಬದ ಹಿನ್ನೆಲೆ ಶಿಯಾ ಸಮುದಾಯದವರು ಇಲ್ಲಿನ ಖೆಟ್ಕೊ ಎಂಬಲ್ಲಿ ಶೋಕ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಸುಮಾರು 11000 ವೋಲ್ಟ್​ ತಂತಿಯು ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ತಗುಲಿದೆ. ಇದರಿಂದಾಗಿ ಹತ್ತು ಮಂದಿಗೆ ವಿದ್ಯುತ್​ ಶಾಕ್​ ತಗುಲಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದಾಗಿ ಹೆಚ್ಚಿನ ವಿದ್ಯುತ್​ ಸರಬರಾಜಿಗೆ ಇರಿಸಲಾಗಿದ್ದ ಬ್ಯಾಟರಿ ಕೂಡ ಸ್ಫೋಟಗೊಂಡಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಶೋಕ ಮೆರವಣಿಗೆಯನ್ನು ಇಸ್ಲಾಮಿಕ್​ ಕ್ಯಾಲೆಂಡರ್​ನ ಮೊದಲ ತಿಂಗಳಾದ ಮೊಹರಂನ 10ನೇ ದಿನ ಆಚರಿಸಲಾಗುತ್ತದೆ. ಶಿಯಾ ಸಮುದಾಯದವರು ಇಂದು ಶೋಕ ಮೆರವಣಿಗೆ ನಡೆಸುತ್ತಾರೆ.

ವಿದ್ಯುತ್​ ಶಾಕ್​ ತಗುಲಿ ಯುವಕ ಸಾವು : ಮೊಬೈಲ್ ಚಾರ್ಜ್ ಹಾಕಲು ಹೋಗಿ ಯುವಕ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿತ್ತು. ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶಿರಪ್ಪೆವಾಡಿ ಗ್ರಾಮದ ಆಕಾಶ ಸಂಕಪಾಳ (27) ಎಂಬ ಯುವಕ ಮೃತಪಟ್ಟಿದ್ದ.

ಮುಂಜಾನೆ ಮನೆಯಲ್ಲಿ ಮೊಬೈಲ್ ಚಾರ್ಜ್​ ಹಾಕಲು ಯುವಕ ಮುಂದಾಗಿದ್ದ. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸಾವು ಸಂಭವಿಸಿದೆ ಎಂದು ಮೃತ ಯುವಕನ ತಂದೆ ನಿಪ್ಪಾಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ನಿಪ್ಪಾಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನೆ ಸಂಬಂಧ ನಿಪ್ಪಾಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆಳಗಾವಿ ಎಸ್ಪಿ ಡಾ ಸಂಜೀವ್​ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಜಿಮ್​ನಲ್ಲಿ ವಿದ್ಯುತ್​ ತಗುಲಿ ಯುವಕ ಸಾವು : ಜಿಮ್​ನಲ್ಲಿನ ಟ್ರೆಡ್​ಮಿಲ್​ ಮೇಲೆ ರನ್ನಿಂಗ್​ ಮಾಡುತ್ತಿದ್ದ ವೇಳೆ ವಿದ್ಯುತ್​ ಹರಿದ ಪರಿಣಾಮ ಯುವಕ ಸಾವನಪ್ಪಿದ್ದ ಘಟನೆ ನವದೆಹಲಿಯಲ್ಲಿ ನಡೆದಿತ್ತು. ದೆಹಲಿಯ ರೋಹಿಣಿ ಪ್ರದೇಶದ ಸಕ್ಷಮ್​ ಸಾವನ್ನಪ್ಪಿದ ಯುವಕ. ಎಂದಿನಂತೆ ಬೆಳಗ್ಗೆ ರೋಹಿಣಿ ಪ್ರದೇಶದಲ್ಲಿರುವ ಜಿಮ್​ಗೆ ಬಂದಿದ್ದ ಸಕ್ಷಮ್,​ ಟ್ರೆಡ್​ಮಿಲ್​ನಲ್ಲಿ ರನ್ನಿಂಗ್​ ಮಾಡುತ್ತಿದ್ದ. ಈ ಸಂದರ್ಭ ವಿದ್ಯುತ್​ ಪ್ರವಹಿಸಿ ಸಕ್ಷಮ್​ ಅಲ್ಲೇ ಕುಸಿದು ಬಿದ್ದಿದ್ದ. ತಕ್ಕಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅದಾಗಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಹಂತದಲ್ಲಿ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದರು.

ಇದನ್ನೂ ಓದಿ : ಎರಡು ಬಸ್​ಗಳ ನಡುವೆ ಭೀಕರ ಅಪಘಾತ.. 6 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವು, 25 ಮಂದಿಗೆ ಗಾಯ

Last Updated : Jul 29, 2023, 1:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.