ಇಂದೋರ್(ಮಧ್ಯಪ್ರದೇಶ): 2021ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿದ್ದು, ಅದರಲ್ಲಿ ಎರಡು ಗ್ರಹಣಗಳು ಮಾತ್ರ ಭಾರತದಲ್ಲಿ ಗೋಚರಿಸಲಿವೆ ಎಂದ ಉಜ್ಜೈನಿ ಮೂಲದ ಜಿವಾಜಿ ವೀಕ್ಷಣಾಲಯದ ಸೂಪರಿಂಟೆಂಡೆಂಟ್ ಡಾ.ರಾಜೇಂದ್ರ ಪ್ರಕಾಶ್ ಗುಪ್ತ್ ಭಾನುವಾರ ತಿಳಿಸಿದ್ದಾರೆ.
ನಾಲ್ಕು ಗ್ರಹಣಗಳಲ್ಲಿ ಮೂರು ಚಂದ್ರ ಗ್ರಹಣಗಳಾಗಲಿದ್ದು, ಒಂದು ಸೂರ್ಯಗ್ರಹಣವಾಗಲಿದೆ. ಮೊದಲ ಗ್ರಹಣ ಚಂದ್ರಗ್ರಹಣವಾಗಲಿರಲಿದ್ದು, ಮೇ 26ರಂದು ನಡೆಯಲಿದ್ದು, ದೇಶದ ಪಶ್ಚಿಮ ಬಂಗಾಳ, ಒಡಿಶಾ ಕರಾವಳಿ ಹೊರತುಪಡಿಸಿ, ಈಶಾನ್ಯ ರಾಜ್ಯಗಳಲ್ಲಿ ಗೋಚರಿಸಲಿದೆ. ಈ ಗ್ರಹಣದ ವೇಳೆ ಭೂಮಿಯು ಚಂದ್ರನ ಶೇಕಡಾ 101.6 ಆವರಿಸಲಿದೆ ಎಂದು ಅವರು ಹೇಳಿದ್ದಾರೆ.
ಓದಿ: ದೇಶದ ಮೊದಲ ಚಾಲಕರಹಿತ ರೈಲು ಸೇವೆಗೆ ನಾಳೆ ಮೋದಿ ಚಾಲನೆ
ಜೂನ್ 10ರಂದು ಸಂಭವಿಸಲಿರುವ ಸೂರ್ಯ ಗ್ರಹಣ, ಭಾರತದಲ್ಲಿ ಗೋಚರವಾಗುವುದಿಲ್ಲ. ಗೋಚರವಾಗುವ ಸ್ಥಳಗಳಲ್ಲಿ ರಿಂಗ್ ಆಫ್ ಫೈರ್ ಗೋಚರವಾಗಲಿದೆ. ಈ ವೇಳೆ ಸುಮಾರು ಶೇಕಡಾ 94.3ರಷ್ಟು ಸೂರ್ಯನನ್ನು ಚಂದ್ರ ಆವರಿಸಲಿದ್ದಾನೆ.
ನಂತರ ನವೆಂಬರ್ 19ರಂದು ಪಾರ್ಶ್ವ ಚಂದ್ರಗ್ರಹಣ ನಡೆಯಲಿದ್ದು, ಇದು ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನ ಕೆಲವು ಭಾಗಗಳಲ್ಲಿ ಸ್ವಲ್ಪ ಸಮಯದವರೆಗೆ ಕಾಣಸಿಗಲಿದೆ. ಈ ವರ್ಷದ ಕೊನೆಯಲ್ಲಿ ಡಿಸೆಂಬರ್ 4ರಂದು ಭಾರತದಲ್ಲಿ ಗೋಚರವಾಗುವುದಿಲ್ಲ ಎಂದು ಡಾ.ರಾಜೇಂದ್ರ ಪ್ರಕಾಶ್ ಗುಪ್ತ್ ತಿಳಿಸಿದ್ದಾರೆ.
2020ನೇ ವರ್ಷದಲ್ಲಿ ಒಟ್ಟು ಎರಡು ಸೂರ್ಯ ಗ್ರಹಣಗಳು ಹಾಗೂ ನಾಲ್ಕು ಚಂದ್ರಗ್ರಹಣಗಳು ಸಂಭವಿಸಿದ್ದವು.