ETV Bharat / bharat

ಟ್ರ್ಯಾಕ್ಟರ್​-ಟ್ರಕ್​ ನಡುವೆ ಭೀಕರ ಅಪಘಾತ: ನಾಲ್ವರು ಭಕ್ತರ ದುರ್ಮರಣ - ಟ್ರ್ಯಾಕ್ಟರ್​-ಟ್ರಕ್​ ಅಪಘಾತದಲ್ಲಿ ನಾಲ್ವರ ಸಾವು

ದೇವರ ದರ್ಶನಕ್ಕೆ ಟ್ರ್ಯಾಕ್ಟರ್​​ನಲ್ಲಿ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್​ ಹಾಗೂ ಟ್ರಕ್​ ಮುಖಾಮುಖಿ ಡಿಕ್ಕಿಯಾಗಿವೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

barabanki
ಟ್ರ್ಯಾಕ್ಟರ್​-ಟ್ರಕ್​ ನಡುವೆ ಭೀಕರ ಅಪಘಾತ
author img

By

Published : Jul 24, 2021, 8:08 AM IST

ಬಾರಾಬಂಕಿ(ಉತ್ತರ ಪ್ರದೇಶ): ಸೀತಾಪುರದಿಂದ ಬಾರಾಬಂಕಿಗೆ ಭಕ್ತರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್​​ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್​​ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟು, 24 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಟ್ರ್ಯಾಕ್ಟರ್​-ಟ್ರಕ್​ ನಡುವೆ ಭೀಕರ ಅಪಘಾತ

ಮಂಜೀಠದಲ್ಲಿರುವ ನಾಗದೇವ ದೇವಸ್ಥಾನಕ್ಕೆ ಭೇಟಿ ನೀಡಲು ಸುಮಾರು 35 ಮಂದಿ ಭಕ್ತರು ಟ್ರ್ಯಾಕ್ಟರ್​​ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಟ್ರ್ಯಾಕ್ಟರ್​ ಮತ್ತು ಟ್ರಕ್​ ಮುಖಾಮುಖಿಯಾಗಿವೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕಾಮಿಸಿದ ಪೊಲೀಸರು ಗಾಯಾಳುಗಳನ್ನು ಸಿಎಚ್‌ಸಿ ದೇವಾನ್ ಮತ್ತು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಲಖನೌ ಆಸ್ಪತ್ರೆಗೆ ಸೇರಿಸಲಾಗಿದೆ. ಆ್ಯಂಬುಲೆನ್ಸ್​ನಲ್ಲಿ ಕೆಲವರನ್ನು ಕರೆದೊಯ್ದರೆ, ಮತ್ತೆ ಕೆಲವು ಗಾಯಾಳುಗಳನ್ನು ಪೊಲೀಸರು ತಮ್ಮ ಜೀಪ್​ನಲ್ಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಸತ್ತವರಲ್ಲಿ ಒಬ್ಬ ಮಹಿಳೆ ಮತ್ತು ಮೂವರು ಪುರುಷರು ಸೇರಿದ್ದಾರೆ.

ಪ್ರತಿ ವರ್ಷ ಬಾರಾಬಂಕಿಯ ಮಂಜಿಠದಲ್ಲಿ, ಆಷಾಢ ತಿಂಗಳ ಹುಣ್ಣಿಮೆಯಿಂದ ಪ್ರಾರಂಭವಾಗಿ ಹಲವಾರು ದಿನಗಳವರೆಗೆ ಬೃಹತ್ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆಂದು ನಾನಾ ಜಿಲ್ಲೆಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಆದರೆ, ಕೋವಿಡ್ ಕಾರಣ, ಕಳೆದ ವರ್ಷ ಜಾತ್ರೆ ನಡೆದಿಲ್ಲ. ಈ ವರ್ಷವೂ ಜಾತ್ರೆ ರದ್ದು ಮಾಡಲಾಗಿದೆ. ಆದರೆ ಭಕ್ತರಿಗೆ ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಜಾತ್ರೆಗೆಂದು ಹೊರಟಿದ್ದರು ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.