ETV Bharat / bharat

ಪೊಲೀಸ್​ ಜೀಪ್​ಗೆ ಗುದ್ದಿದ ಲಾರಿ: ನಾಲ್ವರು ಕಾನ್ಸ್​​ಟೇಬಲ್​​ಗಳ ದುರ್ಮರಣ - ನಾಲ್ವರು ಕಾನ್‌ಸ್ಟೇಬಲ್​ಗಳ ದುರ್ಮರಣ

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯೋಧನೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಬರುತ್ತಿದ್ದ ನಾಲ್ವರು ಪೊಲೀಸ್​ ಕಾನ್ಸ್​​ಟೇಬಲ್​​​ಗಳು ಸಾವನ್ನಪ್ಪಿದ್ದಾರೆ.

AP: Four constables dead in a road accident in Srikakulam District
ಭೀಕರ ರಸ್ತೆ ಅಪಘಾತ
author img

By

Published : Aug 23, 2021, 5:09 PM IST

Updated : Aug 23, 2021, 5:18 PM IST

ಶ್ರೀಕಾಕುಳಂ (ಆಂಧ್ರಪ್ರದೇಶ): ಪೊಲೀಸ್​ ಜೀಪ್​ಗೆ ಲಾರಿಯೊಂದು ಗುದ್ದಿದ ಪರಿಣಾಮ ನಾಲ್ವರು ಕಾನ್ಸ್​​ಟೇಬಲ್​​​ಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.

ಇಚ್ಚಪುರಂ ಪಟ್ಟಣದಲ್ಲಿ ಯೋಧನೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಶ್ರೀಕಾಕುಳಂನ ಜಿಲ್ಲಾ ಕೇಂದ್ರಕ್ಕೆ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಸ್ತೆ ತಿರುವು ತೆಗೆದುಕೊಳ್ಳುವ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಲಾರಿ ಪೊಲೀಸ್​ ಜೀಪ್​ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಪೊಲೀಸ್​ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಕಾನ್ಸ್​​ಟೇಬಲ್​​​ಗಳ ದುರ್ಮರಣ

ಮೃತ ಕಾನ್‌ಸ್ಟೇಬಲ್​ಗಳನ್ನು ಕೃಷ್ಣ, ಬಾಬುರಾವ್, ಆ್ಯಂಟನಿ, ಜನಾರ್ದನ ರಾವ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷಗೆ ಅಸ್ಪತ್ರೆಗೆ ರವಾನಿಸಲಾಗಿದೆ. ಹಿರಿಯ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಂಧ್ರ ಸಿಎಂ ಜಗನ್ ಮೋಹನ್​ ರೆಡ್ಡಿ ಅವರು ಸಾವಿಗೆ ಸಂತಾಪ ಸೂಚಿಸಿದ್ದಾರೆ.

Last Updated : Aug 23, 2021, 5:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.