ಅನಕಾಪಲ್ಲಿ, ಆಂಧ್ರಪ್ರದೇಶ: ಅನಕಾಪಲ್ಲಿಯಲ್ಲಿ ದುರಂತ ಸಂಭವಿಸಿದೆ. ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆ ಯತ್ನದಲ್ಲಿ ಬದುಕುಳಿದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಲಬಾಧೆಯಿಂದ ಇವರೆಲ್ಲರೂ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಸ್ಥಳೀಯರ ಮಾಹಿತಿ ಪ್ರಕಾರ: ಗುಂಟೂರು ಜಿಲ್ಲೆಯ ತೆನಾಲಿಯ ಅಕ್ಕಸಾಲಿಗ ಶಿವರಾಮಕೃಷ್ಣ ಅವರ ಕುಟುಂಬ ಕೆಲ ದಿನಗಳಿಂದ ಅನಕಾಪಲ್ಲಿಯಲ್ಲಿ ನೆಲೆಸಿದ್ದು. ಗುರುವಾರ ರಾತ್ರಿ ಇವರೆಲ್ಲರೂ ಸೈನೈಡ್ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಅವರಲ್ಲಿ ಶಿವರಾಮಕೃಷ್ಣ (40), ಮಾಧವಿ (38), ಪುತ್ರಿಯರಾದ ವೈಷ್ಣವಿ (16) ಮತ್ತು ಲಕ್ಷ್ಮಿ (13) ಮೃತಪಟ್ಟಿದ್ದಾರೆ. ಆದ್ರೆ ಮತ್ತೋರ್ವ ಪುತ್ರಿ ಕುಸುಮಪ್ರಿಯಾ (13) ಬದುಕುಳಿದಿದ್ದು, ಅನಕಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಕ್ಷಣ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಹಾಸನ: ಕೆರೆಗೆ ಹಾರಿ ಪತ್ನಿ ಆತ್ಮಹತ್ಯೆ, ರಕ್ಷಿಸಲು ಹೋದ ಪತಿಯೂ ಸಾವು
ಇತ್ತೀಚಿನ ಪ್ರಕರಣಗಳು- ಸಿಟಿ ಬಸ್ ಚಾಲಕ ಆತ್ಮಹತ್ಯೆ: ಸಿಟಿ ಬಸ್ ಚಾಲಕರೊಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿತ್ತು. ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಸಾವಿಗೀಡಾದವರು. ಸ್ಟೇಟ್ ಬ್ಯಾಂಕ್ ಮತ್ತು ಕಿನ್ಯಾ ನಡುವೆ ಚಲಿಸುವ ಖಾಸಗಿ ಸಿಟಿ ಬಸ್‌ನಲ್ಲಿ ಚಾಲಕರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು. ಡಿ. 19ರ ಮುಂಜಾನೆ ಸೋಮೇಶ್ವರದ ರುದ್ರಪಾದೆಯಿಂದ ಇವರು ಹಾರಿದ್ದರು.
ಜಿಮ್ ಟ್ರೈನರ್ ಆತ್ಮಹತ್ಯೆ: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಜಿಮ್ ಟ್ರೈನರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ವಾರ ನಗರದ ಸಿದ್ದೇಗೌಡ ಲೇಔಟ್ನಲ್ಲಿ ನಡೆದಿತ್ತು. ಶಬರೀಶ್ (35) ಮೃತರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆಗೆ ಡಿಮ್ಯಾಂಡ್, ಯುವತಿ ಆತ್ಮಹತ್ಯೆ: ಮದುವೆಗೂ ಮುನ್ನ ವರದಕ್ಷಿಣೆಗೆ ಒತ್ತಾಯಿಸಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ಕಳೆದ ವಾರ ನಡೆದಿತ್ತು. ವಿ.ಕವೀಶ (21) ಸಾವಿಗೆ ಶರಣಾದ ಯುವತಿ.
ಯುವ ವಿಜ್ಞಾನಿ ಆತ್ಮಹತ್ಯೆ: ಯುವ ವಿಜ್ಞಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಇತ್ತೀಚೆಗೆ ನಡೆದಿತ್ತು. ಭರತ್ ಕಲ್ಲರ್ಪೆ (24) ಆತ್ಮಹತ್ಯೆಗೆ ಶರಣಾದವರು. ಭರತ್ ಹೈದರಾಬಾದ್ನ ಖಾಸಗಿ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೂ ಮುಂಚೆ ಊರಿಗೆ ಆಗಮಿಸಿದ್ದು, ತಾವು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಗೆ ರಾಜೀನಾಮೆ ಪತ್ರ ರವಾನಿಸಿದ್ದರು ಎಂದು ತಿಳಿದುಬಂದಿದೆ.