ಚಂಡೀಗಢ: ಪಂಜಾಬ್ನಲ್ಲಿ ನಾಲ್ವರು ಯುವತಿಯರು ಓರ್ವ ಕಾರ್ಮಿಕನನ್ನು ವಿಳಾಸ ಕೇಳುವ ನೆಪದಲ್ಲಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಪಂಜಾಬ್‌ನ ಜಲಂಧರ್ ನಗರದಲ್ಲಿ ನಾಲ್ವರು ಯುವತಿಯರು ವಿಳಾಸ ಕೇಳುವ ನೆಪದಲ್ಲಿ ರಾತ್ರಿ ಪಾಳಯದಲ್ಲಿ ಕಾರ್ಖಾನೆಗೆ ತೆರಳುತ್ತಿದ್ದ ಕಾರ್ಮಿಕನನ್ನು ತಡೆದು ಅಪಹರಿಸಿದರು. ಬಳಿಕ ತನಗೆ ಮತ್ತು ಬರುವ ಪಾನೀಯವನ್ನು ಕುಡಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತ ತಿಳಿಸಿದ್ದಾನೆ. ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರಚಿದ ಕಾರಿನಲ್ಲಿ ನನ್ನನ್ನು ಅಪಹರಿಸಿದರು. ಬಳಿಕ ತಡರಾತ್ರಿ ಅಜ್ಞಾತ ಸ್ಥಳದಲ್ಲಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಬಿಸಾಡಿದರು ಎಂದು ಸಂತ್ರಸ್ತ ಹೇಳಿದ್ದಾನೆ.