ETV Bharat / bharat

ಹೀಗಿರಲಿದೆ ನೂತನ ಸಂಸತ್​ ಭವನ... ಡಿ.10ಕ್ಕೆ ಶಂಕುಸ್ಥಾಪನೆ - session of both the Houses in the new Parliament building

971 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸಂಸತ್​ ಭವನದ ಶಂಕುಸ್ಥಾಪನೆ ಡಿಸೆಂಬರ್ 10 ರಂದು ನಡೆಯಲಿದೆ.

new Parliament building
ನೂತನ ಸಂಸತ್​ ಭವನ ಕಟ್ಟಡ
author img

By

Published : Dec 5, 2020, 5:43 PM IST

Updated : Dec 5, 2020, 8:51 PM IST

ನವದೆಹಲಿ: ನೂತನ ಸಂಸತ್​ ಭವನದ ವಿನ್ಯಾಸದ ಬಗ್ಗೆ ಮಾಹಿತಿ ನೀಡಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಡಿಸೆಂಬರ್ 10 ರಂದು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರುವುದು ಎಂದು ಹೇಳಿದ್ದಾರೆ.

ಡಿ.10ರ ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು 'ಭೂಮಿ ಪೂಜೆ' ನಡೆಸಲಿದ್ದು, ಇದರೊಂದಿಗೆ ಸಮಾರಂಭ ಆರಂಭಗೊಳ್ಳುವುದು. ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಪೂರ್ಣಗೊಂಡ ನಂತರ ನಾವು ನೂತನ ಸಂಸತ್ತಿನ ಕಟ್ಟಡದಲ್ಲಿ ಉಭಯ ಸದನಗಳ ಅಧಿವೇಶನವನ್ನು ಪ್ರಾರಂಭಿಸುತ್ತೇವೆ ಎಂದು ಬಿರ್ಲಾ ತಿಳಿಸಿದ್ದಾರೆ.

ಹೀಗಿರಲಿದೆ ನೂತನ ಸಂಸತ್​ ಭವನ

ಇದನ್ನೂ ಓದಿ: ಟಾಟಾ ತೆಕ್ಕೆಗೆ ಹೊಸ ಸಂಸತ್ ಭವನ ನಿರ್ಮಾಣ​ದ ಗುತ್ತಿಗೆ: ಹೇಗಿರಲಿದೆ ನ್ಯೂ ಪಾರ್ಲಿಮೆಂಟ್ ಹೌಸ್​​?

ಇದು ರಾಷ್ಟ್ರದ ವೈವಿಧ್ಯತೆಯನ್ನು ಪ್ರತಿಬಿಂಬಿಸುವಂತಹ 'ಆತ್ಮನಿರ್ಭರ ಭಾರತ'ದ ಒಂದು ದೇವಾಲಯವಾಗಲಿದೆ. ಇದನ್ನು 971 ಕೋಟಿ ರೂ.ಗಳ ವೆಚ್ಚದಲ್ಲಿ 64,500 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗುವುದು. ಇದು ಹಳೆಯ ಸಂಸತ್ತಿನ ಕಟ್ಟಡಕ್ಕಿಂತ 17,000 ಚ. ಮೀ ದೊಡ್ಡದಾಗಿರಲಿದೆ. ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ಗೆ ಈ ಯೋಜನೆಯ ಗುತ್ತಿಗೆ ನೀಡಲಾಗಿದೆ. ಕಟ್ಟಡದ ವಿನ್ಯಾಸವನ್ನು ಹೆಚ್​ಸಿಪಿ ಡಿಸೈನ್ಸ್​, ಪ್ಲಾನಿಂಗ್​ & ಮ್ಯಾನೇಜ್​ಮೆಂಟ್​ ರಚಿಸಿದೆ ಎಂದು ಸ್ಪೀಕರ್ ಮಾಹಿತಿ ನೀಡಿದ್ದಾರೆ.

ಸಂಸತ್ತಿನ ನೂತನ ಕಟ್ಟಡವನ್ನು ಹೊಸದಾಗಿ ಈಗಿರುವ ಸಂಸತ್ ಭವನದ 118ನೇ ಫ್ಲಾಟ್​ನಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. 2022ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಭಾರತ ಸರ್ಕಾರ ಇಟ್ಟುಕೊಂಡಿದೆ.

Last Updated : Dec 5, 2020, 8:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.