ETV Bharat / bharat

75 ವರ್ಷ ಮೇಲ್ಪಟ್ಟವರಿಗೆ ಐಟಿ ರಿಟರ್ನ್ಸ್‌ನಿಂದ ವಿನಾಯಿತಿ.. ಅರ್ಜಿ ಸಲ್ಲಿಸಲು ಸೂಚನೆ - exemption from IT returns for sr citizens of 75 yrs

ಆದಾಯ ತೆರಿಗೆ ಕಾಯ್ದೆಯ ಮಿತಿಯನ್ನು ಮೀರಿ ಆದಾಯ ಹೊಂದಿರುವ ಎಲ್ಲ ವ್ಯಕ್ತಿಗಳು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ, ಇದೀಗ 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸರ್ಕಾರ ವಿನಾಯಿತಿ ನೀಡುತ್ತಿದೆ..

ಐಟಿ ರಿಟರ್ನ್ಸ್‌
ಐಟಿ ರಿಟರ್ನ್ಸ್‌
author img

By

Published : Sep 5, 2021, 9:34 PM IST

ನವದೆಹಲಿ : 2021-22ರ ಹಣಕಾಸು ವರ್ಷದಲ್ಲಿ 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಐಟಿ ರಿಟರ್ನ್ ಸಲ್ಲಿಸುವುದರಿಂದ ವಿನಾಯಿತಿ ಪಡೆಯಲು ಅರ್ಜಿ ಸಲ್ಲಿಸಬೇಕೆಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ನಿರ್ದಿಷ್ಟ ಬ್ಯಾಂಕಿಗೆ ಅರ್ಜಿ ಸಲ್ಲಿಸಿದರೆ ಮಾತ್ರ ಏಪ್ರಿಲ್ 1ರಿಂದ ಆರಂಭವಾದ ಹಣಕಾಸು ವರ್ಷದಲ್ಲಿ ಹಿರಿಯ ನಾಗರಿಕರು ತಮ್ಮ ಪಿಂಚಣಿ ಆದಾಯ ಮತ್ತು ನಿಶ್ಚಿತ ಠೇವಣಿಯ ಬಡ್ಡಿ ಮೇರೆಗೆ ಆದಾಯ ತೆರಿಗೆಯನ್ನು ಕಡಿತಗೊಳಿಸಲಾಗುವುದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ತಿಳಿಸಿದೆ. ಆದರೆ, ಸರ್ಕಾರ ಸೂಚಿಸಿದ ಬ್ಯಾಂಕ್​ನಲ್ಲಿಯೇ ಪಿಂಚಣಿ ಮಾಡಿಸಿಕೊಂಡವರು ಮಾತ್ರ ಐಟಿ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ ಪಡೆಯುತ್ತಾರೆ.

ಇದನ್ನೂ ಓದಿ: ವರ್ತಕರು, ಆದಾಯ ತೆರಿಗೆದಾರರ ಗಮನಕ್ಕೆ: ಇಂದಿನಿಂದ ಹೊಸ ಇ-ಪೋರ್ಟಲ್ ಶುರು

ಆದಾಯ ತೆರಿಗೆ ಕಾಯ್ದೆಯ ಮಿತಿಯನ್ನು ಮೀರಿ ಆದಾಯ ಹೊಂದಿರುವ ಎಲ್ಲ ವ್ಯಕ್ತಿಗಳು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ, ಇದೀಗ 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸರ್ಕಾರ ವಿನಾಯಿತಿ ನೀಡುತ್ತಿದೆ.

ಈ ಹಿಂದೆ ಆದಾಯ ತೆರಿಗೆ ಇಲಾಖೆಯು 2020-21ನೇ ಸಾಲಿನ ಐಟಿ ರಿಟರ್ನ್ಸ್ ಗಡುವನ್ನು ಕೋವಿಡ್​ ಸಾಂಕ್ರಾಮಿಕ ಹಿನ್ನೆಲೆ ಹಾಗೂ ಇ-ಫೈಲಿಂಗ್​ ವೆಬ್​ ಪೋರ್ಟಲ್​ನಲ್ಲಿ ತಾಂತ್ರಿಕ ದೋಷವಿದ್ದ ಕಾರಣ ಸೆಪ್ಟೆಂಬರ್​ 30ಕ್ಕೆ ಮುಂದೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.