ನವದೆಹಲಿ: ಉತ್ತರ ಪ್ರದೇಶ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಅನೂಪ್ ಚಂದ್ರ ಪಾಂಡೆ ಅವರು ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಈ ಕುರಿತಂತೆ ಕೇಂದ್ರ ಕಾನೂನು ಮತ್ತು ಸಂಸದೀಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಅನೂಪ್ ಚಂದ್ರ ಪಾಂಡೆ ಅವರು ಭಾರತೀಯ ಆಡಳಿತ ಸೇವೆಯ 1984ರ ಕೇಡರ್ನ ಅಧಿಕಾರಿಯಾಗಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಪಾಂಡೆಯವರನ್ನು ನೇಮಕ ಮಾಡಿದ್ದಾರೆ.
ಪಾಂಡೆ 2019 ಆಗಸ್ಟ್ನಲ್ಲಿ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದರು. ಇದೀಗ ಚುನಾವಣಾ ಆಯೋಗದ ಇಬ್ಬರು ಮುಖ್ಯಸ್ಥರುಗಳ ಪೈಕಿ ಒಂದು ಸ್ಥಾನಕ್ಕೆ ಆಯ್ಕೆಯಾಗಿದ್ದು, ಇವರೊಂದಿಗೆ ರಾಜೀವ್ ಕುಮಾರ್ ಅವರು ಕೂಡ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುಶೀಲ್ ಚಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾರೆ. ಈ ಹಿಂದಿನ ಸುನಿಲ್ ಅರೋರಾ ಅವರ ಅವಧಿ ಮುಗಿದ ನಂತರ ಚಂದ್ರ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಹೀಗಾಗಿ ಏಪ್ರಿಲ್ 12ರಿಂದ ಚುನಾವಣಾ ಆಯೋಗದ ಆಯುಕ್ತರ ಹುದ್ದೆ ತೆರವಾಗಿತ್ತು.
ಇದನ್ನೂ ಓದಿ: ಕಾನ್ಪುರ ಅಪಘಾತಕ್ಕೆ ಪ್ರಧಾನಿ ಕಂಬನಿ: ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ