ETV Bharat / bharat

ಸಂಗೀತಕ್ಕಾಗಿ ಬಿಜೆಪಿ ತೊರೆಯಲು ನಿರ್ಧರಿಸಿದ್ರಾ ಮಾಜಿ ಕೇಂದ್ರ ಸಚಿವ ಬಾಬುಲ್​ ಸುಪ್ರಿಯೊ?

ಮಾಜಿ ಕೇಂದ್ರ ಸಚಿವ ಬಾಬುಲ್​ ಸುಪ್ರಿಯೊ ಪರೋಕ್ಷವಾಗಿ ಪ್ರಮುಖ ಬಿಜೆಪಿ ನಾಯಕರನ್ನು ಟೀಕಿಸಿದ್ದಾರೆ. ಪಕ್ಷದಿಂದ ತಮ್ಮ ಸಂಗೀತದ ಆಸಕ್ತಿಗೆ ಬೆಂಬಲ ಸಿಗುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

Babul Supriyo
ಬಾಬುಲ್​ ಸುಪ್ರಿಯೊ
author img

By ETV Bharat Karnataka Team

Published : Dec 16, 2023, 8:06 PM IST

ದುರ್ಗಾಪುರ (ಪಶ್ಚಿಮ ಬಂಗಾಳ): ಭಾರತದ 'ಶಾಹೆನ್​ ಶಾ', 'ಬಾದ್​ ಶಾ' ಯಾರೂ ನನ್ನ ಜೀವನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಬಾಬುಲ್​ ಸುಪ್ರಿಯೊ ಯಾರ ಹೆಸರನ್ನೂ ಉಲ್ಲೇಖಿಸದೇ ಪರೋಕ್ಷವಾಗಿ ನರೇಂದ್ರ ಮೋದಿ ಮತ್ತು ಅಮಿತ್​ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ರಾತ್ರಿ ಪಶ್ಚಿಮ ಬಂಗಾಳದ ದುರ್ಗಾಪುರ ಉತ್ಸವದಲ್ಲಿ ಮಾತನಾಡಿದ ಅವರು, ತಮ್ಮದೇ ಪಕ್ಷದ ನಾಯಕರನ್ನು ಟೀಕಿಸಿದರು. ಜೊತೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಉತ್ಸವದಲ್ಲಿ ಪ್ರಸ್ತುತ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ರಾಜ್ಯ ಸಚಿವರಾಗಿರುವ ಬಾಬುಲ್ ಸುಪ್ರಿಯೊ ಅವರ 54ನೇ ಹುಟ್ಟುಹಬ್ಬದ ಸಲುವಾಗಿ ಸಂಗೀತ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿತ್ತು.

ಈ ವೇಳೆ ವೇದಿಕೆಯಲ್ಲಿ ನಿಂತು ಬಾಬುಲ್​ ಸುಪ್ರಿಯೊ ಹಾಡಿದರು. ಬಳಿಕ ಮಾತನಾಡಿ, "ಗಾಯನದಲ್ಲೇ ಮುಂದುವರೆಯುವಂತೆ ಪದೇ ಪದೇ ನನ್ನಲ್ಲಿ ಆಸೆ ಹುಟ್ಟುತ್ತದೆ. ಸಂಗೀತ ನನ್ನ ಅರ್ಧಾಂಗಿ. ಈಗಾಗಲೇ ಈ ವಿಚಾರವನ್ನು ನಾನು ನನ್ನ ಹೆಂಡತಿಗೂ ಹೇಳಿದ್ದೇನೆ. ಹಾಗಾಗಿ ನಾನು ಈ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ನಾನು ನನ್ನ ಜೀವನದ ಚಕ್ರವರ್ತಿ. ಹೀಗಿರುವಾಗ ದೇಶದ ಚಕ್ರವರ್ತಿ ಅಥವಾ ರಾಜ ನನ್ನ ಜೀವನವನ್ನು ಬದಲಿಸಲು ಸಾಧ್ಯವಿಲ್ಲ. ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದಗಳು. ಅವರು ನನಗೆ ಸಂಗೀತದಲ್ಲಿ ಮುಂದುವರೆಯುವಂತೆ ಪ್ರೇರೇಪಿಸಿದರು" ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿ ಪಕ್ಷದಲ್ಲಿ ತಮ್ಮ ಸಂಗೀತದ ಆಸಕ್ತಿಗೆ ಬೆಂಬಲ ಸಿಗುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಸುಪ್ರಿಯೊ ಹುಟ್ಟುಹಬ್ಬ ಆಚರಣೆ: ಶುಕ್ರವಾರ ಬಾಬುಲ್​ ಸುಪ್ರಿಯೊ ಅವರ 54ನೇ ವರ್ಷದ ಹುಟ್ಟುಹಬ್ಬ. ಅವರು ದುರ್ಗಾಪುರ ಉತ್ಸವದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಹಾಡಲು ಬಂದಿದ್ದರು. ಬಾಬುಲ್​ ಅವರ ಜನ್ಮದಿನದ ಸ್ಮರಣಾರ್ಥ ಸಂಘಟಕರು ಸಂಭ್ರಮಾಚರಣೆ ಕಾರ್ಯಕ್ರಮವನ್ನೂ ಏರ್ಪಡಿಸಿದ್ದರು. ವೇದಿಕೆಯ ಮೇಲೆಯೇ ಕೇಕ್​ ಕತ್ತರಿಸುವ ಮೂಲಕ ಪ್ರೇಕ್ಷಕರ ಸಮ್ಮುಖದಲ್ಲಿ ಅವರ ಹುಟ್ಟುಹಬ್ಬವನ್ನು ಕೂಡ ಆಚರಿಸಲಾಯಿತು. ಇದನ್ನು ಕಂಡು ಭಾವುಕರಾದ ಸುಪ್ರಿಯೊ ಅವರು ಸಂಗೀತದ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ಒಪ್ಪಿಕೊಂಡರು.

ಜೊತೆಗೆ, ಯಾರ ಹೆಸರನ್ನು ಉಲ್ಲೇಖಿಸಿದೇ ಪರೋಕ್ಷವಾಗಿ ಪಕ್ಷದ ನಾಯಕರನ್ನು ಟೀಕಿಸಿ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್​ಗೆ ಸೇರುವ ಬಗ್ಗೆ ಮಾಹಿತಿ ನೀಡಿದರು. ಮುಂದಿನ ವಾರ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹೊಸ ಆಲ್ಬಂ ಕೂಡ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು. ನಾನು ಸಚಿವನಾಗಿರುವುದರಿಂದ ಕುಣಿಯುವುದಿಲ್ಲ, ಹಾಡುವುದಿಲ್ಲ. ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಕೇಸರಿ ದಳದಿಂದ ಹೊರಬರಲು ಸಂಗೀತವೇ ಮುಖ್ಯ ಕಾರಣ ಎಂಬುದನ್ನು ಪರೋಕ್ಷವಾಗಿ ಹಂಚಿಕೊಂಡರು.

ಇದನ್ನೂ ಓದಿ: ಅಮಿತ್​ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೋರ್ಟ್​ಗೆ ರಾಹುಲ್​ ಗಾಂಧಿ ಗೈರು, ಮತ್ತೊಮ್ಮೆ ಸಮನ್ಸ್​ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.