ETV Bharat / bharat

ಪುಲ್ವಾಮಾದಲ್ಲಿ ವಿಶೇಷ ಪೊಲೀಸ್ ಅಧಿಕಾರಿ, ಪತ್ನಿ, ಮಗಳನ್ನು ಗುಂಡಿಕ್ಕಿ ಕೊಂದ ಉಗ್ರರು - ಮಾಜಿ ವಿಶೇಷ ಪೊಲೀಸ್ ಅಧಿಕಾರಿ ಮತ್ತವರ ಪತ್ನಿಯನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

ಜಮ್ಮು ಮತ್ತು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಮತ್ತು ಅವರ ಪತ್ನಿ, ಪುತ್ರಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ.

Terrorists shot dead former SPO and his wife in Pulwama
ಮಾಜಿ ವಿಶೇಷ ಪೊಲೀಸ್ ಅಧಿಕಾರಿ ಮತ್ತವರ ಪತ್ನಿಯನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು
author img

By

Published : Jun 28, 2021, 7:47 AM IST

Updated : Jun 28, 2021, 10:47 AM IST

ಪುಲ್ವಾಮಾ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಮತ್ತು ಅವರ ಪತ್ನಿ, ಮಗಳನ್ನು ಪುಲ್ವಾಮಾ ಜಿಲ್ಲೆಯ ಹರಿಪರಿಗಂ ಗ್ರಾಮದಲ್ಲಿರುವ ಅವರ ಮನೆಯಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಕಾಶ್ಮೀರ ವಲಯ ಪೊಲೀಸರು ಈ ಬಗ್ಗೆ ಟ್ವೀಟ್​ ಮಾಡಿದ್ದು, "ಭಯೋತ್ಪಾದಕರು ಹರಿಪರಿಗಂ ಅವಂತಿಪೋರಾದ ಎಸ್‌ಪಿಒ ಫಯಾಜ್ ಅಹ್ಮದ್ ಅವರ ಮನೆಗೆ ನುಗ್ಗಿ ಗುಂಡು ಹಾರಿಸಿದ್ದಾರೆ. ಈ ವೇಳೆ ಅವರ ಪತ್ನಿ ಮತ್ತು ಮಗಳ ಮೇಲೆ ಸಹ ಗುಂಡಿನ ದಾಳಿ ನಡೆದಿದೆ. ಫಯಾಜ್​ ಮತ್ತು ಅವರ ಪತ್ನಿ ಮೃತಪಟ್ಟಿದ್ದಾರೆ" ಎಂದು ತಿಳಿಸಿದ್ದಾರೆ.

Terrorists shot dead former SPO and his wife in Pulwama
ಪುಲ್ವಾಮಾ ಜಿಲ್ಲೆಯ ಹರಿಪರಿಗಂ ಗ್ರಾಮ

ದಾಳಿಯಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ತೀವ್ರವಾಗಿ ಗಾಯಗೊಂಡಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ವಿಶೇಷ ಪೊಲೀಸ್ ಅಧಿಕಾರಿ ಫಯಾಜ್​ ಅವರ ಮಗಳು ಸಹ ಕೊನೆಯುಸಿರೆಳೆದಿದ್ದಾರೆ.

  • I strongly condemn brutal terrorist attack on SPO Fayaz Ahmad & his family at Awantipora. This is an act of cowardice & perpetrators of violence will be brought to justice very soon. My deepest condolences to the family of martyr & prayers for the recovery of injured.

    — Office of LG J&K (@OfficeOfLGJandK) June 27, 2021 " class="align-text-top noRightClick twitterSection" data=" ">

ಘಟನೆ ಖಂಡಿಸಿದ ಲಡಾಖ್​ ಲೆಫ್ಟಿನೆಂಟ್​ ಗವರ್ನರ್

"ಅವಂತಿಪೋರಾದಲ್ಲಿ ಎಸ್‌ಪಿಒ ಫಯಾಜ್ ಅಹ್ಮದ್ ಮತ್ತು ಅವರ ಕುಟುಂಬದ ಮೇಲೆ ನಡೆದ ಕ್ರೂರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಇದು ಹೇಡಿತನದ ಕೃತ್ಯ. ಹಿಂಸಾಚಾರ ಮಾಡುವವರನ್ನು ಶೀಘ್ರದಲ್ಲೇ ಶಿಕ್ಷಿಸಲಾಗುವುದು" ಎಂದು ಲಡಾಖ್​ ಲೆಫ್ಟಿನೆಂಟ್​ ಗವರ್ನರ್​ ಆರ್. ಕೆ. ಮಾಥುರ್ ಟ್ವೀಟ್ ಮಾಡಿದ್ದಾರೆ.

Former special police officer of J-K Police
ಪುಲ್ವಾಮಾದಲ್ಲಿ ವಿಶೇಷ ಪೊಲೀಸ್ ಅಧಿಕಾರಿ, ಪತ್ನಿ ಅಂತ್ಯಕ್ರಿಯೆ

ಫಯಾಜ್ ಅಹ್ಮದ್‌ ಮತ್ತು ಅವರ ಪತ್ನಿಯ ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಭಾಗಿಯಾಗಿದ್ದರು.

ಇದನ್ನೂ ಓದಿ: ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟ.. ಸ್ಥಳಕ್ಕೆ ದೌಡಾಯಿಸಿದ ಬಾಂಬ್​ ಸ್ಕ್ವಾಡ್​

Last Updated : Jun 28, 2021, 10:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.