ನವದೆಹಲಿ: ಜ್ವರ ಹಾಗೂ ಆಯಾಸದಿಂದ ಬಳಲುತ್ತಿರುವ ಕಾರಣ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಸಂಜೆ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
-
Former Prime Minister Dr. Manmohan Singh admitted to All India Institute of Medical Sciences, Delhi
— ANI (@ANI) October 13, 2021 " class="align-text-top noRightClick twitterSection" data="
(file photo) pic.twitter.com/SAm5NOpeiF
">Former Prime Minister Dr. Manmohan Singh admitted to All India Institute of Medical Sciences, Delhi
— ANI (@ANI) October 13, 2021
(file photo) pic.twitter.com/SAm5NOpeiFFormer Prime Minister Dr. Manmohan Singh admitted to All India Institute of Medical Sciences, Delhi
— ANI (@ANI) October 13, 2021
(file photo) pic.twitter.com/SAm5NOpeiF
ಅವರು ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಪ್ರಕಟಣೆ ಸಹ ಹೊರಡಿಸಿದ್ದು, ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎಂದು ತಿಳಿಸಿದೆ. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಹೃದ್ರೋಗ ವಿಭಾಗದಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
88 ವರ್ಷದ ಮಾಜಿ ಪ್ರಧಾನಿ ಈ ಹಿಂದೆ ಕೂಡ ಕೋವಿಡ್ ಸೋಂಕಿನಿಂದಾಗಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ಅವರು, ಕೆಲ ದಿನಗಳ ನಂತರ ಡಿಸ್ಚಾರ್ಜ್ ಆಗಿದ್ದರು.