ETV Bharat / bharat

16ನೇ ಹಣಕಾಸು ಆಯೋಗ ಅಧ್ಯಕ್ಷರಾಗಿ ಅರವಿಂದ್ ಪನಗಾರಿಯಾ ನೇಮಕ

author img

By ANI

Published : Dec 31, 2023, 10:43 PM IST

16th Finance Commission: 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ಅರವಿಂದ್ ಪನಗಾರಿಯಾ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.

Arvind Panagariya
ಅರವಿಂದ್ ಪನಗಾರಿಯಾ

ನವದೆಹಲಿ: 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ನೀತಿ ಆಯೋಗದ ಮಾಜಿ ಉಪಾಧ್ಯಕ್ಷ, ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರವಿಂದ್ ಪನಗಾರಿಯಾ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಆಯೋಗದ ಕಾರ್ಯದರ್ಶಿಯಾಗಿ ಹಣಕಾಸು ಸಚಿವಾಲಯದ ರಿತ್ವಿಕ್ ರಂಜನಂ ಪಾಂಡೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಭಾನುವಾರ ವಿತ್ತ ಸಚಿವಾಲಯದ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಜನವರಿ 2015ರಿಂದ 2017ರ ಆಗಸ್ಟ್​ವರೆಗೆ ಪನಗಾರಿಯಾ ಅವರು ಕ್ಯಾಬಿನೆಟ್ ದರ್ಜೆಯೊಂದಿಗೆ ನೀತಿ ಆಯೋಗದ ಮೊದಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಅವರು ಭಾರತದ ಜಿ20 ಶೆರ್ಪಾ ಆಗಿ ಟರ್ಕಿ (2015), ಚೀನಾ (2016) ಮತ್ತು ಜರ್ಮನಿ (2017) ಜೊತೆಗೆ ಜಿ20 ಸಂವಹನಗಳ ಮಾತುಕತೆ ನಡೆಸಿದ ಭಾರತೀಯ ತಂಡಗಳನ್ನು ಮುನ್ನಡೆಸಿದ್ದರು.

ಪ್ರೊ.ಪನಗಾರಿಯಾ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದಾರೆ. 1978ರಿಂದ 2003ರ ವರೆಗೆ ಕಾಲೇಜ್ ಪಾರ್ಕ್‌ನಲ್ಲಿರುವ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ಅಧ್ಯಾಪಕರಾಗಿದ್ದರು. ವಿಶ್ವ ಬ್ಯಾಂಕ್, ಐಎಂಎಫ್​ ಮತ್ತು ಯುಎನ್‌ಸಿಟಿಎಡಿನೊಂದಿಗೆ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಪ್ರಿನ್ಸ್‌ಟನ್​ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

16ನೇ ಹಣಕಾಸು ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆಗಳ ನಿವ್ವಳ ಆದಾಯದ ವಿತರಣೆಯ ಬಗ್ಗೆ ಶಿಫಾರಸುಗಳನ್ನು ಮಾಡಲಿದೆ. ಆಯೋಗದ ಅಧ್ಯಕ್ಷರು ಮತ್ತು ಇತರ ಸದಸ್ಯರು ಕ್ರಮವಾಗಿ ತಮ್ಮ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ವರದಿಯನ್ನು ಸಲ್ಲಿಸುವ ದಿನಾಂಕದವರೆಗೆ ಅಥವಾ 2025ರ ಅಕ್ಟೋಬರ್ 31ರ ವರೆಗೆ ಅಧಿಕಾರವನ್ನು ಹೊಂದಿರುತ್ತಾರೆ.

ಅಧಿಸೂಚನೆಯ ಪ್ರಕಾರ, ಆಯೋಗವು ವಿಪತ್ತು ನಿರ್ವಹಣಾ ಕಾಯ್ಡೆ-2005 (2005ರ 53) ಅಡಿಯಲ್ಲಿ ರಚಿಸಲಾದ ನಿಧಿಗಳನ್ನು ಉಲ್ಲೇಖಿಸಿ ವಿಪತ್ತು ನಿರ್ವಹಣೆಯ ಉಪಕ್ರಮಗಳಿಗೆ ಹಣಕಾಸು ಒದಗಿಸುವ ಪ್ರಸ್ತುತ ವ್ಯವಸ್ಥೆಗಳನ್ನು ಪರಿಶೀಲಿಸಬಹುದು ಮತ್ತು ನಂತರ ಸೂಕ್ತ ಶಿಫಾರಸುಗಳನ್ನು ಮಾಡಬಹುದು. ಆಯೋಗವು ತನ್ನ ವರದಿಯನ್ನು 2025ರ ಅಕ್ಟೋಬರ್ 31ರೊಳಗೆ ಸಲ್ಲಿಸಬೇಕು. ಈ ವರದಿಯು 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಐದು ವರ್ಷಗಳ ಅವಧಿಯನ್ನು ಹೊಂದಿರುತ್ತದೆ.

ಇದೇ ನವೆಂಬರ್​ 28ರಂದು 16ನೇ ಹಣಕಾಸು ಆಯೋಗದ ನಿಯಮಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. 2017ರ ನವೆಂಬರ್ 27ರಂದು ರಚನೆಗೊಂಡ 15ನೇ ಹಣಕಾಸು ಆಯೋಗವು ತನ್ನ ಮಧ್ಯಂತರ ಮತ್ತು ಅಂತಿಮ ವರದಿಗಳ ಮೂಲಕ 2020ರ ಏಪ್ರಿಲ್ 1ರಿಂದ ಆರು ವರ್ಷಗಳ ಅವಧಿ ಒಳಗೊಂಡ ಶಿಫಾರಸುಗಳನ್ನು ಮಾಡಿದೆ. ಈ ಶಿಫಾರಸುಗಳು 2025-26ರ ಹಣಕಾಸು ವರ್ಷದವರೆಗೆ ಮಾನ್ಯವಾಗಿರುತ್ತವೆ.

ಇದನ್ನೂ ಓದಿ: ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.