ETV Bharat / bharat

'ಮಿಸ್ಟರ್ ತಮಿಳುನಾಡು' ಪ್ರಶಸ್ತಿ ವಿಜೇತ ಬಾಡಿಬಿಲ್ಡರ್ 41ನೇ ವಯಸ್ಸಿಗೆ ಹೃದಯಾಘಾತದಿಂದ ಸಾವು

2021ರಲ್ಲಿ ಮಿಸ್ಟರ್ ತಮಿಳುನಾಡು ಪ್ರಶಸ್ತಿ ಗೆದ್ದ ಯೋಗೇಶ್ ಎಂಬವರು ಜಿಮ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

heart attack
ಯೋಗೇಶ್
author img

By ETV Bharat Karnataka Team

Published : Oct 9, 2023, 10:53 PM IST

ಚೆನ್ನೈ (ತಮಿಳುನಾಡು): ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪುತ್ತಿರುವ ವರದಿಗಳು ಇತ್ತೀಚೆಗೆ ಅಲ್ಲಲ್ಲಿ ಕೇಳಿ ಬರುತ್ತಿವೆ. ದೇಹದ ಬಗ್ಗೆ ಹೆಚ್ಚು ಕಾಳಜಿವಹಿಸಿ ಜಿಮ್​ನಲ್ಲಿ ಕಸರತ್ತು ಮಾಡಿ ಫಿಟ್​ ಆಗಿದ್ದವರೂ ಕೂಡಾ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. 2021ರಲ್ಲಿ ಮಿಸ್ಟರ್ ತಮಿಳುನಾಡು ಪ್ರಶಸ್ತಿ ಗೆದ್ದ ಯೋಗೇಶ್ (41) ಎಂಬವರು ಶನಿವಾರ ಜಿಮ್​ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕೋವಿಡ್​ ನಂತರ ಇಂತಹ ಘಟನೆ ಹೆಚ್ಚಾಗಿ ವರದಿಯಾಗುತ್ತಿವೆ. ಕೆಲ ಸಂಶೋಧನೆಗಳು ಇದಕ್ಕೆ ಪೂರಕವಾಗಿದ್ದರೆ, ಕೆಲವು ಕೋವಿಡ್​ನಿಂದ ಈ ರೀತಿ ಘಟನೆಗಳು ಸಂಭವಿಸುತ್ತಿಲ್ಲ ಎಂದು ತಜ್ಞರು ಹೇಳಿರುವ ವರದಿಗಳಿವೆ. ಆದರೆ ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ಕೊಟ್ಟು ಕೊಬ್ಬಿನ ಅಂಶದಿಂದ ದೂರ ಇದ್ದವರು ಈ ರೀತಿ ಸಾವನ್ನಪ್ಪುತ್ತಿರುವುದು ಸಾಮಾನ್ಯವಾಗುತ್ತಿದೆ.

ಯೋಗೇಶ್ ಅವರು ಚೆನ್ನೈನ ಮಹಾತ್ಮ ಗಾಂಧಿ ಸ್ಟ್ರೀಟ್ ಜ್ಞಾನಮೂರ್ತಿ ನಗರದ ಅಂಬತ್ತೂರು ಮೆನಂಪೇಡು ನಿವಾಸಿ. ದೇಹದಾರ್ಢ್ಯ ಪಟುವಾಗಿದ್ದು, ಹಲವು ವರ್ಷಗಳಿಂದ ವಿವಿಧ ಚಾಂಪಿಯನ್ ಶಿಪ್​ಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗೆದ್ದಿದ್ದಾರೆ. 2021ರಲ್ಲೇ 9ಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾಗವಹಿಸಿದ್ದರು. 2021ರಲ್ಲಿ ಅವರ ದೇಹದಾರ್ಢ್ಯತೆಗೆ 'ಮಿಸ್ಟರ್ ತಮಿಳುನಾಡು' ಪ್ರಶಸ್ತಿ ಸಿಕ್ಕಿತ್ತು.

2021ರಲ್ಲಿ ವೈಷ್ಣವಿ (28) ಎಂಬವರನ್ನು ಯೋಗೇಶ್ ವಿವಾಹವಾದರು. ದಂಪತಿಗೆ 2 ವರ್ಷದ ಮಗಳಿದ್ದಾಳೆ. ಮದುವೆಯ ನಂತರ ಯೋಗೇಶ್ ಹೆಚ್ಚಾಗಿ ದೇಹ ದಂಡಿಸುವುದನ್ನು ಬಿಟ್ಟು ವಿರಾಮ ತೆಗೆದುಕೊಂಡಿದ್ದರು. ದೇಹದಾರ್ಢ್ಯ ಸ್ಪರ್ಧೆಗಳಿಗೆ ತಯಾರಿ ನಡೆಸುವ ರೀತಿಯಲ್ಲಿ ಅವರು ಯಾವುದೇ ತಯಾರಿ ಮಾಡುತ್ತಿರಲಿಲ್ಲ. ಹೀಗಾಗಿ ಕಳೆದ ವರ್ಷದಿಂದ ಕೊರಟೂರು ಬಸ್ ನಿಲ್ದಾಣದ ಬಳಿ ಇರುವ ಜಿಮ್​ನಲ್ಲಿ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು.

ನಿನ್ನೆ (08) ಜಿಮ್​ಗೆ ಬಂದಿದ್ದ ಯೋಗೇಶ್ ಯುವಕರಿಗೆ ತರಬೇತಿ ನೀಡಿ ಮನೆಗೆ ತೆರಳಲು ನಿರ್ಧರಿಸಿದ್ದಾರೆ. ಅದಕ್ಕೂ ಮುನ್ನ ಸಂಜೆ 5.45ಕ್ಕೆ ಶೌಚಾಲಯಕ್ಕೆ ತೆರಳಿದ್ದಾರೆ. ಅಲ್ಲಿ ಅವರಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಶೌಚಾಲಯಕ್ಕೆ ಹೋದವರು ತುಂಬಾ ಸಮಯದ ನಂತರವೂ ಮರಳದ ಕಾರಣ ಜಿಮ್​ನಲ್ಲಿದ್ದವರು ಹೋಗಿ ನೋಡಿದಾಗ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕ್ ವಿರುದ್ಧದ ಪಂದ್ಯಕ್ಕೆ ಮಹೇಶ್​ ತೀಕ್ಷಣ ಸೇರ್ಪಡೆ: ಶ್ರೀಲಂಕಾ ಸಹಾಯಕ ಕೋಚ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.