ಚಂಡೀಗಢ, ಪಂಜಾಬ್: ಲೂಧಿಯಾನದಲ್ಲಿ ಸಟ್ಲೆಜ್ - ಯಮುನಾ ಲಿಂಕ್ ಕಾಲುವೆ ಮತ್ತು ಪಂಜಾಬ್‌ನ ಇತರ ಜ್ವಲಂತ ಸಮಸ್ಯೆಗಳ ಚರ್ಚೆಯಲ್ಲಿ ಭಾಗವಹಿಸಲು ಲೋಕ ಇನ್ಸಾಫ್ ಪಕ್ಷದ ಮುಖ್ಯಸ್ಥ ಸಿಮರ್‌ಜಿತ್ ಬೈನ್ಸ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರಿಗೆ ಪತ್ರ ಬರೆದಿದ್ದಾರೆ. ಬಹಿರಂಗ ಚರ್ಚೆಗೆ ನಮ್ಮನ್ನು ಬರುವಂತೆ ಆಹ್ವಾನ ನೀಡಬೇಕು ಎಂದು ಮಾಜಿ ಶಾಸಕರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ನೀರಿನ ಚರ್ಚೆಯಲ್ಲಿ ಭಾಗವಹಿಸುವುದಾಗಿ ಪತ್ರ: ಸಿಮರ್‌ಜಿತ್ ಸಿಂಗ್ ಬೇನ್ಸ್ ಅವರು, ಪಂಜಾಬ್‌ನಿಂದ ನೀರು ಲೂಟಿ ಮಾಡುತ್ತಿರುವ ವಿಷಯದ ಬಗ್ಗೆ ನಾನು ಈ ಚರ್ಚೆಯಲ್ಲಿ ಭಾಗವಹಿಸಲು ಬಯಸುತ್ತೇನೆ. ಲೂಧಿಯಾನ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಸಾಧ್ಯವಾದರೆ ದಯವಿಟ್ಟು ನನಗೆ ತಿಳಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಶಿರೋಮಣಿ ಅಕಾಲಿದಳ ಸೇರಿದಂತೆ ಇತರ ಹಲವು ವಿರೋಧಿಗಳು ಆಹ್ವಾನ ನೀಡಿದರೂ ಈ ಬಹಿರಂಗ ಚರ್ಚೆಗೆ ಹೋಗಲು ನಿರಾಕರಿಸುತ್ತಿರುವಾಗ ಸಿಮರ್‌ಜಿತ್ ಬೈನ್ಸ್ ಪತ್ರ ಬರೆದು ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಪಂಜಾಬ್‌ನ ನದಿ ನೀರಿನ ವಿಚಾರವಾಗಿ ಮುಖ್ಯಮಂತ್ರಿ ಭಗವಂತ ಮಾನ್ ಅವರ ಚರ್ಚೆಯ ಒಂದು ದಿನ ಮೊದಲು, ನವೆಂಬರ್ 1 ರಂದು ನಡೆಯಲಿರುವ ಚರ್ಚೆ ನ್ಯಾಯಯುತವಾಗಿರಬೇಕು ಎಂದು ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಆಗ್ರಹಿಸಿದ್ದಾರೆ.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಜ್ವಾ, ಪಂಜಾಬ್ ಮುಖ್ಯಮಂತ್ರಿ ಈಗ ಚರ್ಚೆಯ ಸ್ಥಳವಾದ ಪಂಜಾಬ್ ಕೃಷಿ ವಿಶ್ವವಿದ್ಯಾಲಯವನ್ನು ಪೊಲೀಸ್ ಕಂಟೋನ್ಮೆಂಟ್‌ಗೆ ಬದಲಾಯಿಸಿದ್ದಾರೆ. ಪಂಜಾಬ್ ಪೊಲೀಸ್ ಇಲಾಖೆ ಸುಮಾರು 1000 ಸಿಬ್ಬಂದಿಯನ್ನು ಚರ್ಚೆ ನಡೆಯುವ ಸ್ಥಳದಲ್ಲಿ ನಿಯೋಜಿಸಿದೆ. ಎಂಟು ಎಸ್‌ಎಸ್‌ಪಿಗಳು, ನಾಲ್ವರು ಡಿಐಜಿಗಳು ಮತ್ತು ಅಸ್ತಿತ್ವದಲ್ಲಿರುವ ಇಬ್ಬರು ಡಿಜಿಗಳು ಸಹ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಪ್ರತಾಪ್ ಸಿಂಗ್ ಬಜ್ವಾ ಆರೋಪಿಸಿದ್ದಾರೆ.
ಭದ್ರತೆ ಮತ್ತು ಪೊಲೀಸ್ ನಿಯೋಜನೆ ಕಡಿಮೆ ಮಾಡಿ: ಇಷ್ಟು ದೊಡ್ಡ ಪೊಲೀಸ್ ಪಡೆ ನಿಯೋಜಿಸಿ ಜಮ್ರೋಡ್ ಕೋಟೆಯನ್ನು ಆಕ್ರಮಿಸಲು ಹೊರಟಿದ್ದೀರಾ.. ನಾನು ಝಡ್ ಭದ್ರತೆಯನ್ನು ಹೊಂದಿದ್ದೇನೆ. ಚರ್ಚೆಯ ಸಮಯದಲ್ಲಿ ಅದನ್ನು ಬಿಟ್ಟು ಬರುತ್ತೇನೆ. ಪಂಜಾಬ್ ಮುಖ್ಯಮಂತ್ರಿ ತಮ್ಮ ಭದ್ರತೆ ಮತ್ತು ಚರ್ಚಾ ಸ್ಥಳದಲ್ಲಿ ಪೊಲೀಸ್ ನಿಯೋಜನೆಯನ್ನು ಕಡಿಮೆ ಮಾಡಬೇಕು ಎಂದು ಬಜ್ವಾ ಆಕ್ರೋಶ ಹೊರ ಹಾಕಿದರು.
ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಸರ್ಕಾರವು ಆಪ್‌ಗೆ ಹತ್ತಿರವಿರುವ ಜನರಿಗೆ ಮಾತ್ರ ಪಾಸ್‌ಗಳನ್ನು ನೀಡಿದೆ. ಸಾಮಾನ್ಯ ಜನರಿಗೆ ಮತ್ತು ಇತರ ರಾಜಕೀಯ ಪಕ್ಷಗಳಿಗೆ ಹತ್ತಿರವಿರುವ ಜನರಿಗೆ ಪಾಸ್‌ಗಳನ್ನು ಏಕೆ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.