ETV Bharat / bharat

ಭ್ರಷ್ಟಾಚಾರ ಪ್ರಕರಣ: ಪಂಜಾಬ್ ಮಾಜಿ ಸಚಿವ ಸಾಧು ಸಿಂಗ್​ ಬಂಧನ - ಭ್ರಷ್ಟಾಚಾರ ಪ್ರಕರಣ

ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಿಂಗ್​, ಇದೀಗ ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡನಿಗೆ ಶಾಕ್​ ನೀಡಿದ್ದಾರೆ.

Former minister Sadhu Singh Dharamsot arrested

author img

By

Published : Jun 7, 2022, 9:35 AM IST

ಚಂಡೀಗಢ(ಪಂಜಾಬ್​): ಪಂಜಾಬ್​​ನಲ್ಲಿ ಭಗವಂತ್ ಮಾನ್ ಸಿಂಗ್​ ಸರ್ಕಾರ ಜಾರಿಗೆ ಬಂದಾಗಿನಿಂದಲೂ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದು, ಕಳೆದ ಕೆಲ ದಿನಗಳ ಹಿಂದೆ ತಮ್ಮ ಸಚಿವ ಸಂಪುಟದ ಮಂತ್ರಿಯನ್ನೇ ವಜಾಗೊಳಿಸಿದ್ದರು. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಶಾಕ್​ ನೀಡಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿ ಕೈ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವರಿಗೆ ಶಾಕ್​ ನೀಡಿದ್ದಾರೆ.

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಸಾಧು ಸಿಂಗ್​​ ಧರಮ್ಸೋಟ್​​ ಅವರನ್ನ ಇಂದು ಬೆಳಗ್ಗೆ ಬಂಧಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್ ಸಿಂಗ್​ ಅವರ ಸಂಪುಟದಲ್ಲಿ ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ 25 ಸಾವಿರಕ್ಕೂ ಅಧಿಕ ಮರಗಳನ್ನ ಅಕ್ರಮವಾಗಿ ಕಡಿಸಿರುವ ಆರೋಪ ಇವರ ಮೇಲಿದೆ.

ಸೋಮವಾರ ಮಧ್ಯಾಹ್ನ ವಿಜೆಲೆನ್ಸ್​ ಇಲಾಖೆ(Vigilance Department) ಇವರನ್ನ ಫತೇಘರ್​ ಸಾಹಿಬ್​ ಜಿಲ್ಲೆಯ ಧರ್ಮಸೋತ್​​ ನಿವಾಸದಿಂದ ಬಂಧಿಸಿದೆ. ಇವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಅವ್ಯವಹಾರ ನಡೆಸಿರುವ ಆರೋಪ ಇದೆ. ಮರ ಕಡಿಯಲು ಹಣ ಪಡೆದುಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಮಾಜಿ ಸಚಿವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ಸಿಂಗ್​ ಈ ಹಿಂದೆ ಎಚ್ಚರಿಕೆ ಸಹ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.