ETV Bharat / bharat

ರೋಶಿನಿ ಹಗರಣದಲ್ಲಿ ಮೊದಲ ಕೇಸ್: ಮಾಜಿ ಸಚಿವನಿಗೆ ಶಾಕ್ ಕೊಟ್ಟ ಸಿಬಿಐ - ರೋಶಿನಿ ಹಗರಣದ ಮೊದಲ ಕೇಸ್

ರೋಶಿನಿ ಹಗರಣದ ಅಡಿಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಮುಖಂಡ ತಾಜ್ ಮೊಹಿಯುದ್ದೀನ್ ಸಿಬಿಐನಿಂದ ಪ್ರಕರಣ ದಾಖಲಿಸಿಕೊಂಡಿದೆ.

cbi
ಸಿಬಿಐ
author img

By

Published : Nov 26, 2020, 10:59 PM IST

ಶ್ರೀನಗರ (ಜಮ್ಮು ಕಾಶ್ಮೀರ): ರೋಶಿನಿ ಕಾಯ್ದೆಯ ಅಡಿಯಲ್ಲಿ ಅರಣ್ಯ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಜಮ್ಮು ಮತ್ತು ಕಾಶ್ಮೀರ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ತಾಜ್ ಮೊಹಿಯುದ್ದೀನ್ ವಿರುದ್ಧ ಪ್ರಕರಣ ದಾಖಲಿಸಿದೆ.

ರೋಶಿನಿ ಹಗರಣದ ಅಡಿಯಲ್ಲಿ ಮೊದಲ ಬಾರಿಗೆ ಸಿಬಿಐನಿಂದ ಪ್ರಕರಣ ದಾಖಲಿಸಿಕೊಳ್ಳಲ್ಪಟ್ಟ ಮೊದಲ ರಾಜಕೀಯ ವ್ಯಕ್ತಿ ತಾಜ್ ಮೊಹಿಯುದ್ದೀನ್ ಆಗಿದ್ದು, ಸಿಬಿಐ ತನಿಖೆ ಮುಂದುವರೆಸಿದೆ.

ತಾಜ್ ಮೊಹಿಯುದ್ದೀನ್ ಶೋಪಿಯಾನ್ ಜಿಲ್ಲೆಯ 13 ಕೆನಾಲ್ ಅರಣ್ಯ ಭೂಮಿಯನ್ನು ಕಸಿದುಕೊಂಡು ರೋಶ್ನಿ ಕಾಯ್ದೆಯ ಅಡಿಯಲ್ಲಿ ಅದನ್ನು ಕ್ರಮಬದ್ಧಗೊಳಿಸಿದ್ದರು ಎಂದು ಆರೋಪದ ಹಿನ್ನೆಲೆಯಲ್ಲಿ ಸಿಬಿಐ ದೂರು ದಾಖಲಿಸಿದೆ.

ವರದಿಗಳ ಪ್ರಕಾರ, ಮಾಜಿ ಸಚಿವರ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಭ್ರಷ್ಟಾಚಾರ ನಿಗ್ರಹ ದಳದಿಂದ ದೂರು ಬಂದಿದೆ ಎಂದು ಸಿಬಿಐ ಹೇಳಿದೆ.

ಸಿಬಿಐ ಆರೋಪಕ್ಕೆ ಪ್ರತಿಕ್ರಿಯೆ ತಾಜ್​ ಮೊಹಿಯುದ್ದೀನ್ ರೋಶಿನಿ ಯೋಜನೆಯಡಿ ನಾನು ಯಾವುದೇ ಭೂಮಿಯನ್ನು ಪಡೆದುಕೊಂಡಿಲ್ಲ. ಮುಂಬರುವ ಡಿಡಿಸಿ ಚುನಾವಣೆಗಳಲ್ಲಿ ಲಾಭ ಪಡೆಯಲು ಕೆಲವರು ಸಂಚು ರೂಪಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.