ಮುಂಬೈ (ಮಹಾರಾಷ್ಟ್ರ): ಟಾಟಾ ಸಮೂಹದ ಮಾಜಿ ಅಧ್ಯಕ್ಷರಾದ ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಇಂದು ಮಧ್ಯಾಹ್ನ ಮುಂಬೈ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸೈರಸ್ ಮಿಸ್ತ್ರಿ ಅವರು 2012ರಲ್ಲಿ ಟಾಟಾ ಗ್ರೂಪ್‌ನ ಆರನೇ ಅಧ್ಯಕ್ಷರಾಗಿ ನೇಮಕವಾಗಿದ್ದರು. ಆದಾಗ್ಯೂ, ಅವರನ್ನು ಟಾಟಾ ನಿರ್ದೇಶಕರ ಮಂಡಳಿಯು 2016ರ ಅಕ್ಟೋಬರ್ 24ರಂದು ವಜಾಗೊಳಿಸಲಾಗಿತ್ತು. ಅಲ್ಲದೇ, ಟಾಟಾ ಸನ್ಸ್ ಮತ್ತು ಸೈರಸ್ ಮಿಸ್ತ್ರಿ ನಡುವೆ ವಿವಾದವಿತ್ತು. ಇದರಿಂದಲೇ ಅವರು ಸಾಕಷ್ಟು ಸುದ್ದಿಯಾಗಿದ್ದರು. ಬಳಿಕ ಈ ವಿವಾದ ಪ್ರಕರಣವು ನೇರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಡಿವೈಡರ್ಗೆ ಕಾರು ಡಿಕ್ಕಿ ಹೊಡೆದು ದುರಂತ: ಅಹಮದಾಬಾದ್ನಿಂದ ಮುಂಬೈಗೆ ಸೈರಸ್ ಮಿಸ್ತ್ರಿ ಮರ್ಸಿಡಿಸ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಮಧ್ಯಾಹ್ನ 3.15ರ ಸುಮಾರಿಗೆ ಮುಂಬೈನ ಸಮೀಪದ ಪಾಲ್ಘರ್ ಜಿಲ್ಲೆಯ ಸೂರ್ಯ ನದಿಯ ಸೇತುವೆ ಮೇಲೆ ಡಿವೈಡರ್ಗೆ ಕಾರು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೈರಸ್ ಮಿಸ್ತ್ರಿ ಅವರೊಂದಿಗೆ ಕಾರಿನ ಚಾಲಕ ಸೇರಿ ಇತರೆ ಇಬ್ಬರು ಇದ್ದರು. ಈ ಘಟನೆಯಲ್ಲಿ ಆ ಇಬ್ಬರು ಕೂಡ ಗಾಯಗೊಂಡಿದ್ದು, ಗುಜರಾತ್ನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಮತ್ತು ಆಂಧ್ರ ಗಡಿಯ 2 ಕಿ.ಮೀ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಲು ಹೋರಾಟ