ETV Bharat / bharat

ಅಸ್ಸೋಂ ಕಾಂಗ್ರೆಸ್​ ಮಾಜಿ ಅಧ್ಯಕ್ಷ ರೂಪಿನ್​ ಬೋರಾ ಟಿಎಂಸಿ ಪಕ್ಷಕ್ಕೆ ಸೇರ್ಪಡೆ - ಅಸ್ಸೋಂ ಕಾಂಗ್ರೆಸ್​ ರಾಜ್ಯ ಘಟಕದ ಮಾಜಿ ಅಧ್ಯಕ್ಷ ರೂಪಿನ್​ ಬೋರಾ

1976ರಿಂದ ಕಾಂಗ್ರೆಸ್​ನಲ್ಲಿದ್ದ ಹಿರಿಯ ನಾಯಕ ರೂಪಿನ್​ ಬೋರಾ ರವಿವಾರ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 2016ರಿಂದ 2021ರವರೆಗೆ ಅಸ್ಸೋಂ ಕಾಂಗ್ರೆಸ್​ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಇದೇ ಏಪ್ರಿಲ್​ 2ರಂದು ರಾಜ್ಯಸಭೆಯಿಂದ ರೂಪಿನ್​ ಬೋರಾ ನಿವೃತ್ತರಾಗಿದ್ದರು..

ಅಸ್ಸೋಂ ಕಾಂಗ್ರೆಸ್​ ಮಾಜಿ ಅಧ್ಯಕ್ಷ ರೂಪಿನ್​ ಬೋರಾ ಟಿಎಂಸಿ ಪಕ್ಷಕ್ಕೆ ಸೇರ್ಪಡೆ

author img

By

Published : Apr 17, 2022, 7:49 PM IST

ನವದೆಹಲಿ : ಅಸ್ಸೋಂ ಕಾಂಗ್ರೆಸ್​ ರಾಜ್ಯ ಘಟಕದ ಮಾಜಿ ಅಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ರೂಪಿನ್​ ಬೋರಾ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ನಾಲ್ಕು ದಶಕಕ್ಕೂ ಅಧಿಕ ನಂಟನ್ನು ಕಡೆದುಕೊಂಡು ಅವರು ರವಿವಾರ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್​ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿಗೆ ಸೇರಿದ್ದಾರೆ. ಕಾಂಗ್ರೆಸ್​​ಗೆ ತಾವು ರಾಜೀನಾಮೆ ನೀಡುವುದಕ್ಕೆ ಪಕ್ಷದಲ್ಲಿನ ಒಳ ಗುದ್ದಾಟವೇ ಕಾರಣ. ಇದರಿಂದಲೇ ನಾನು ಪಕ್ಷ ಬಿಡುತ್ತಿದ್ದೇನೆ. ಅಲ್ಲದೇ, ಅಸ್ಸೋಂ ಹಿರಿಯ ಮುಖಂಡರು ಬಿಜೆಪಿ ಸರ್ಕಾರ, ಪ್ರಮುಖವಾಗಿ ಮುಖ್ಯಮಂತ್ರಿಯೊಂದಿಗೆ ರಹಸ್ಯ ಒಪ್ಪಂದ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಬಿಜೆಪಿಯ ಕೋಮು ದ್ವೇಷ ಮತ್ತು ಒಡೆದಾಳುವ ನೀತಿ ಹೆಚ್ಚಾಗಿದೆ. ಇದು ದೇಶದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜಾತ್ಯಾತೀತ ಹಾಗೂ ಆರ್ಥಿಕತೆಗೆ ಗಂಭೀರವಾದ ಪೆಟ್ಟುಕೊಟ್ಟಿದೆ. ಇದರ ವಿರುದ್ಧ ಪ್ರಬಲವಾಗಿ ಹೋರಾಟ ಮಾಡುವುದು ಬಿಟ್ಟು ಕೆಲವರು ಪಕ್ಷದ ಸಿದ್ಧಾಂತವನ್ನು ಬಲಿ ಕೊಡುತ್ತಿದ್ದಾರೆ ಎಂದೂ ಅವರು ದೂರಿದ್ದಾರೆ.

ಇದನ್ನೂ ಓದಿ: ಕಾನೂನಿಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಲಿ: ರಾಜ್ ಠಾಕ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.