ಅಸ್ಸಾಂ: ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಿಎಂ ಹಿತೇಶ್ವರ ಸೈಕಿಯಾ ಪುತ್ರ ಅಶೋಕ್ ಸೈಕಿಯಾರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ನಾಳೆ ಅವರನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1996ರಲ್ಲಿ ಅಸ್ಸಾಂ ರಾಜ್ಯದ ಸಹಕಾರ ಮತ್ತು ಕೃಷಿ ಅಭಿವೃದ್ಧಿ (ASCARD) ಬ್ಯಾಂಕ್‌ನಲ್ಲಿ ನಡೆದ ಸಾಲ ಹಗರಣದ ಪ್ರಕರಣವನ್ನು 2001 ರಿಂದ ಸಿಬಿಐ ತನಿಖೆ ನಡೆಸುತ್ತಿದೆ. ಇಂದು ಗುವಾಹಟಿಯ ಸರುಮಟರಿಯಾದಲ್ಲಿರುವ ಅಶೋಕ್ ಮನೆ ಮೇಲೆ ದಾಳಿ ಮಾಡಿದ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಸುದೀರ್ಘ ವಿಚಾರಣೆಯ ನಂತರ ಆರೋಪಿಯನ್ನು ಬಂಧಿಸಲಾಗಿದೆ.