ETV Bharat / bharat

ಅಕ್ರಮವಾಗಿ ಸಾಗಿಸುತ್ತಿದ್ದ ಅಪರೂಪದ ಚನ್ನಬರ್ಕಾ ಮೀನುಗಳ ವಶ; ಇವುಗಳ ಬೆಲೆ ಬರೋಬ್ಬರಿ 4.5ಕೋಟಿ!! - ಅಪರೂಪದ ಮೀನುಗಳ ವಶ

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಪರೂಪದ ಮೀನುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ.

ಅಪರೂಪದ ಚನ್ನಬರ್ಕಾ ಮೀನುಗಳ ವಶ
ಅಪರೂಪದ ಚನ್ನಬರ್ಕಾ ಮೀನುಗಳ ವಶ
author img

By ETV Bharat Karnataka Team

Published : Dec 22, 2023, 8:49 AM IST

Updated : Dec 22, 2023, 9:05 AM IST

ದಿಬ್ರುಗಢ (ಅಸ್ಸೋಂ): ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಳಿವಿನಂಚಿನಲ್ಲಿರುವ ಮತ್ತು ಅಪರೂಪದ ಮೀನುಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಗುರುವಾರ (ನಿನ್ನೆ) ದಿಬ್ರುಗಢ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕೋಲ್ಕತ್ತಾಗೆ ಕಳ್ಳಸಾಗಣೆ ಮಾಡುತ್ತಿರವ ಖಚಿತ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಸುಮಾರು 4.5 ಕೋಟಿ ಮೌಲ್ಯದ 500 "ಚನ್ನ ಬರ್ಕಾ" ಮೀನುಗಳನ್ನು ವಶಪಡಿಸಿಕೊಂಡಿದ್ದಾರೆ.

ಜತೆಗೆ ಮೀನುಗಳನ್ನು ಅಕ್ರಮವಾಗಿ ವಿಮಾನ ನಿಲ್ದಾಣಕ್ಕೆ ಸಾಗಣೆ ಮಾಡಿದ್ದ ಕಾರಿನ ಚಾಲಕನನ್ನೂ ವಶಕ್ಕೆ ಪಡೆದಿದ್ದಾರೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಬಿ.ವಿ.ಸಂದೀಪ್ ತಿಳಿಸಿದ್ದಾರೆ. ಈ ವಿಶಿಷ್ಟ ಜಾತಿಯ ಚನ್ನ ಬರ್ಕಾ ಹಾವಿನ ಆಕಾರದ ತಲೆಯನ್ನು ಹೊಂದಿರುತ್ತದೆ. ಅಲ್ಲದೇ ಈ ಮೀನುಗಳು ಹೆಚ್ಚಾಗಿ ಬಾಂಗ್ಲಾದೇಶ ಮತ್ತು ಈಶಾನ್ಯದ ಭಾಗದ ಬ್ರಹ್ಮಪುತ್ರ ನದಿಯ ಜಲಾನಯನ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ.

ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಪ್ರಕಾರ, 2014ರಲ್ಲಿ ಇವುಗಳನ್ನು ಅಳಿವಿನಂಚಿನಲ್ಲಿರುವ ಮೀನನುಗಳ ಪಟ್ಟಿಗೆ ಸೇರಿಸಲಾಗಿದೆ. ಸದ್ಯ ವಶಪಡಿಸಿಕೊಂಡಿರುವ ಮೀನುಗಳನ್ನು ನದಿಗೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಹಿಂದಿನ ಪ್ರಕರಣ, ನಕ್ಷತ್ರ ಆಮೆ ವಶ: ಬ್ಯಾಕಾಂಕ್​ನಿಂದ ಬೆಂಗಳೂರಿಗೆ ಅಕ್ರಮವಾಗಿ ತರಲಾಗಿದ್ದ 60 ಜೀವಂತ ನಕ್ಷತ್ರ ಆಮೆಗಳನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ನೀಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಬ್ಯಾಂಕಾಕ್​ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ ಆತನ ಬ್ಯಾಗೇಜ್​ನಲ್ಲಿ 60 ಜೀವಂತ ನಕ್ಷತ್ರ ಆಮೆಗಳು ಪತ್ತೆಯಾಗಿದ್ದವು. ತಕ್ಷಣವೇ ನಕ್ಷತ್ರ ಆಮೆಗಳ ರಕ್ಷಣೆ ಮಾಡಿದ ಅಧಿಕಾರಿಗಳು ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದರು. ಆರೋಪಿಯನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಕೇರಳದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಳಿವಿನಂಚಿನಲ್ಲಿರುವ ಇಡ್ತಲೆ(ಎರಡು ತಲೆ) ಹಾವನ್ನು ಅರಣ್ಯ ಅದಿಕಾರಿಗಳು ರಕ್ಷಣೆ ಮಾಡಿ ಐವರನ್ನು ಬಂಧಿಸಿದ್ದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಕೇರಳದ ಕಾಸರಗೋಡಿನಿಂದ ಸುಳ್ಯಕ್ಕೆ ಸ್ವಿಫ್ಟ್ ಕಾರಿನಲ್ಲಿ ಸುಮಾರು 8 ಕೆ.ಜಿ.ತೂಕದ ಇಡ್ತಲೆ ಹಾವನ್ನು ಸಾಗಿಸುತ್ತಿದ್ದಾಗ ತಪಾಸಣೆ ವೇಳೆ ಪತ್ತೆಯಾಗಿತ್ತು. ಹಾವನ್ನು ರಕ್ಷಣೆ ಮಾಡಿ ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು ಕೇರಳದ ಐವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: Eel Fish found: ಸುರತ್ಕಲ್​ನಲ್ಲಿ ಅಪರೂಪದ ಈಲ್ ಮೀನು ಪತ್ತೆ

Last Updated : Dec 22, 2023, 9:05 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.