ಭೋಪಾಲ್(ಮಧ್ಯಪ್ರದೇಶ): 'ಜೀವ' ನೀರಿನ ಮೇಲಿನ ಗುಳ್ಳೆ ಇದ್ದಂತೆ ಯಾವಾಗ ಇರ್ತದೆ ಯಾವಾಗ ಹೋಯ್ತದೆ ಎಂದು ಹೇಳೋಕಾಗಲ್ಲ. ಖುಷಿ ಖುಷಿಯಲ್ಲಿದ್ದ ಸಂದರ್ಭದಲ್ಲೇ ಅನೇಕರ ಪ್ರಾಣಪಕ್ಷಿ ಹಾರಿ ಹೋಗಿರುವ ಘಟನೆ ಸಾಕಷ್ಟು ಬಾರಿ ನಡೆದು ಹೋಗಿವೆ. ಸದ್ಯ ಮಧ್ಯಪ್ರದೇಶದ ಭೋಪಾಲ್ನಲ್ಲಿ ಅಂತಹದೊಂದು ಮನಕಲಕುವ ಘಟನೆ ನಡೆದಿದೆ.
ಭೋಪಾಲ್ನಲ್ಲಿ ಕೆಲ ವೈದ್ಯರು ಸೇರಿಕೊಂಡು ನೃತ್ಯ ಮಾಡ್ತಿದ್ದ ವೇಳೆ ವಿಧಿವಿಜ್ಞಾನ ತಜ್ಞ ಡಾ. ಸಿ.ಎಸ್ ಜೈನ್ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಸಂಭ್ರಮದಲ್ಲಿ ತೇಲಾಡುತ್ತಿದ್ದ ಕಾರ್ಯಕ್ರಮದಲ್ಲಿ ದಿಢೀರ್ ಶೋಕ ಮನೆ ಮಾಡಿದೆ.
ಭೋಪಾಲ್ನ ಪ್ರಸಿದ್ಧ ವೈದ್ಯರಾಗಿರುವ ಸಿ.ಎಸ್ ಜೈನ್, ತಮ್ಮ ಹಳೆಯ ಸಹೋದ್ಯೋಗಿಗಳ ಜೊತೆ ಸೇರಿ ಡ್ಯಾನ್ಸ್ ಮಾಡ್ತಿದ್ದಾಗಲೇ ಈ ಘಟನೆ ನಡೆದಿದೆ. ಎಲ್ಲ ಸೇರಿಕೊಂಡು ಸ್ಟಾರ್ ಹೋಟೆಲ್ವೊಂದರಲ್ಲಿ ಪಾರ್ಟಿ ಮಾಡ್ತಿದ್ದರು. ಇದರಲ್ಲಿ ಹೃದ್ರೋಗ ತಜ್ಞರು ಸೇರಿದಂತೆ ವಿವಿಧ ವಿಭಾಗಗಳ 50ಕ್ಕೂ ಹೆಚ್ಚು ಹಿರಿಯ ವೈದ್ಯರು ಭಾಗಿಯಾಗಿದ್ದರು. ಎಲ್ಲರೂ ನಗುನಗುತ್ತಾ ಡ್ಯಾನ್ಸ್ ಮಾಡ್ತಿದ್ದಾಗಲೇ ಈ ದುರ್ಘಟನೆ ನಡೆದು ಹೋಗಿದೆ.
ಇದನ್ನೂ ಓದಿರಿ: ಕಿಡ್ನಿಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ.. ಡಾಕ್ಟರ್ ಎಡವಟ್ಟಿಗೆ ರೋಗಿ ಬಲಿ!
ಡಾ. ಜೈನ್ 1975ರ ಎಂಬಿಬಿಎಸ್(ಮಧ್ಯಪ್ರದೇಶ) ಬ್ಯಾಚ್ನ ವಿದ್ಯಾರ್ಥಿಯಾಗಿದ್ದು, ತಮ್ಮ ಸಹ ವೈದ್ಯರೊಂದಿಗೆ ಸೇರಿಕೊಂಡು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ದಿಢೀರ್ ಆಗಿ ಪ್ರಾಣ ಕಳೆದುಕೊಂಡಿದ್ದಕ್ಕಾಗಿ ಎಲ್ಲರೂ ಆಘಾತ ವ್ಯಕ್ತಪಡಿಸಿದ್ದಾರೆ.