ETV Bharat / bharat

ಸಾಹಿಬ್​ಗಂಜ್​ಗೆ ತಲುಪಿದ ಗಂಗಾ ವಿಲಾಸ್​ ನೌಕೆ : ಪ್ರವಾಸಿಗರಿಗೆ ರೇಷ್ಮೆ ಶಾಲು ನೀಡಿ ಬೀಳ್ಕೊಡುಗೆ - ಈಟಿವಿ ಭಾರತ ಕನ್ನಡ

ಜಾರ್ಖಂಡ್​​ನ ಸಾಹಿಬ್​ಗಂಜ್​ಗೆ ತಲುಪಿದ ಗಂಗಾ ವಿಲಾಸ್​ ನೌಕೆ - ನೌಕೆ ಮತ್ತು ಪ್ರವಾಸಿಗರಿಗೆ ಅದ್ಧೂರಿ​ ಸ್ವಾಗತ - ಪ್ರವಾಸಿಗರಿಗೆ ರೇಷ್ಮೆ ಶಾಲು, ಸ್ಮರಣಿಕೆ ಉಡುಗೊರೆ

foreigners-from-ganga-vilas-cruise-welcomed-in-jharkhand-and-farewell-with-sahibganj-famous-silk-scarves
ಸಾಹಿಬ್​ಗಂಜ್​ಗೆ ತಲುಪಿದ ಗಂಗಾ ವಿಲಾಸ್​ ನೌಕೆ : ಪ್ರವಾಸಿಗರಿಗೆ ರೇಷ್ಮೆ ಶಾಲು ನೀಡಿ ಬೀಳ್ಕೊಡುಗೆ
author img

By

Published : Jan 21, 2023, 11:05 PM IST

ಸಾಹಿಬ್​ಗಂಜ್​ಗೆ ತಲುಪಿದ ಗಂಗಾ ವಿಲಾಸ್​ ನೌಕೆ : ಪ್ರವಾಸಿಗರಿಗೆ ರೇಷ್ಮೆ ಶಾಲು ನೀಡಿ ಬೀಳ್ಕೊಡುಗೆ

ಸಾಹಿಬ್​ ಗಂಜ್​( ಜಾರ್ಖಂಡ್​) : ಉತ್ತರ ಪ್ರದೇಶದ ವಾರಾಣಾಸಿಯಿಂದ ವಿದೇಶಿ ಪ್ರವಾಸಿಗರನ್ನು ಹೊತ್ತು ಹೊರಟಿದ್ದ ವಿಶ್ವದ ಅತಿ ಉದ್ದದ ನದಿ ವಿಹಾರ ನೌಕೆ ಜಾರ್ಖಂಡ್​ನ ಸಾಹಿಬ್​ ಗಂಜ್​ಗೆ ಆಗಮಿಸಿದೆ. ಶನಿವಾರ ಸಾಹಿಬ್​ಗಂಜ್​ಗೆ ಆಗಮಿಸಿದ ಗಂಗಾ ವಿಲಾಸ್​ ಕ್ರೂಸ್​ಗೆ ಜಿಲ್ಲಾಡಳಿತ ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು. ಜೊತೆಗೆ ಹಡಗಿನಲ್ಲಿದ್ದ ವಿದೇಶಿ ಪ್ರವಾಸಿಗಳನ್ನು ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ನೃತ್ಯದಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಾಮ್ ನಿವಾಸ್ ಯಾದವ್, ರಾಜಮಹಲ್ ವಿಧಾನಸಭಾ ಕ್ಷೇತ್ರದ ಶಾಸಕ ಅನಂತ್ ಓಜಾ, ಪೊಲೀಸ್ ವರಿಷ್ಠಾಧಿಕಾರಿ ಅನುರಂಜನ್ ಕಿಸ್ಪೊಟ್ಟಾ ಮತ್ತಿತರರು ಉಪಸ್ಥಿತರಿದ್ದರು.

ಎರಡು ದಿನಗಳ ಮುಂಚಿತವಾಗಿ ತಲುಪಿದ ನೌಕೆ : ಇನ್ನು ಈ ಪ್ರವಾಸಿಗರನ್ನು ಹೊತ್ತ ನೌಕೆ ಜನವರಿ 23ರಂದು ಸಾಹಿಬ್​ಗಂಜ್​ ತಲುಪಲಿದೆ ಎಂದು ಹೇಳಲಾಗಿತ್ತು. ಇದಕ್ಕೂ ಮುನ್ನವೇ ನೌಕೆಯು ಜನವರಿ 20ರ ಸಂಜೆ ಸಾಹಿಬ್​ಗಂಜ್​ಗೆ ತಲುಪಿದೆ. ಈ ಹಡಗು ಕಳೆದ ಶುಕ್ರವಾರದಿಂದ ಇಲ್ಲಿ ನೆಲೆಸಿತ್ತು. ಹಡಗಿನಲ್ಲಿದ್ದ ಪ್ರವಾಸಿಗರಿಗೆ ಇಲ್ಲಿನ ಜಿಲ್ಲಾಡಳಿತ ವಿವಿಧ ಸೌಕರ್ಯಗಳನ್ನು ಒದಗಿಸಿತ್ತು. ಅಲ್ಲದೆ ಪ್ರವಾಸಿಗರ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಂಡಿತ್ತು. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿತ್ತು.

ಮಲ್ಟಿ ಮಾಡಲ್​ ಟೆರ್ಮಿನಲ್​ ಜೊತೆ ಗ್ರಾಮಸ್ಥರನ್ನು ಭೇಟಿ ಮಾಡಿದ ಪ್ರವಾಸಿಗರು : ಡೆಪ್ಯೂಟಿ ಕಮಿಷನರ್ ರಾಮ್​ ನಿವಾಸ್ ಯಾದವ್ ನೇತೃತ್ವದಲ್ಲಿ ಸ್ವಿಟ್ಜರ್ಲೆಂಡ್ ಹಾಗೂ ವಿವಿಧ ದೇಶಗಳಿಂದ ಆಗಮಿಸಿದ ಪ್ರವಾಸಿಗರನ್ನು ಮಲ್ಟಿಮೋಡಲ್ ಟರ್ಮಿನಲ್​ಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಪ್ರವಾಸಿಗರು ಹತ್ತಿರದ ಹಳ್ಳಿಗೂ ಭೇಟಿ ನೀಡಿದರು. ಹಳ್ಳಿಯಲ್ಲಿ ಮಕ್ಕಳು, ವೃದ್ಧರು, ಹಿರಿಯರನ್ನು ಭೇಟಿಯಾಗಿ ವಿವಿಧ ಫೋಟೋಗಳನ್ನು ತೆಗೆದರು. ಜೊತೆಗೆ ಇಲ್ಲಿನ ಪರಿಸರ ಮತ್ತು ಶಾಂತವಾದ ವಾತಾವರಣ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಪ್ರವಾಸಿಗರಿಗೆ ರೇಷ್ಮೆ ಶಾಲು ಉಡುಗೊರೆ : ಶಾಸಕ ಅನಂತ್ ಓಜಾ, ಡಿಸಿ ರಾಮ್ ನಿವಾಸ್ ಯಾದವ್ ಮತ್ತು ಎಸ್ಪಿ ಕಿಸ್ಪೊಟ್ಟಾ ಪರವಾಗಿ ವಿದೇಶಿ ಪ್ರವಾಸಿಗರಿಗೆ ಸಾಹಿಬ್‌ಗಂಜ್‌ನ ಪ್ರಸಿದ್ಧ ರೇಷ್ಮೆಯಿಂದ ಮಾಡಿದ ಶಾಲು ಮತ್ತು ಸ್ಮರಣಿಕೆಯನ್ನು ನೀಡಿ ಬೀಳ್ಕೊಡಲಾಯಿತು.

ಗಂಗಾ ವಿಲಾಸ್​ಗೆ ಚಾಲನೆ ನೀಡಿದ್ದ ಪ್ರಧಾನಿ ಮೋದಿ : ಪ್ರಧಾನಿ ನರೇಂದ್ರ ಮೋದಿಯವರು ಇದೇ ಜನವರಿ 13ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಗಂಗಾ ವಿಲಾಸ್​ ನೌಕೆಗೆ ಚಾಲನೆ ನೀಡಿದ್ದರು. ಇದು ವಿಶ್ವದ ಅತಿ ಉದ್ದದ ನದಿ ವಿಹಾರ ನೌಕೆಯಾಗಿದೆ. ಇದರಲ್ಲಿ ಪಂಚತಾರಾ ಹೋಟೆಲ್‌ನಂತಹ ಸೌಲಭ್ಯಗಳನ್ನು ಹೊಂದಿದೆ. ಈ ವಿಹಾರ ನೌಕೆಯಿಂದ ಭಾರತದ 'ರಿವರ್ ಕ್ರೂಸ್' ಪ್ರವಾಸೋದ್ಯಮದ ಹೊಸ ದೆಸೆ ಆರಂಭವಾಗಿದೆ.

ಇನ್ನು ಈ ನದಿ ವಿಹಾರ ನೌಕೆಯು 51 ದಿನಗಳ ಕಾಲ ಸುಮಾರು 3,200 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ. ಗಂಗಾ ವಿಲಾಸ್ ನೌಕೆಯು ಭಾರತವನ್ನು ವಿಶ್ವದ ನದಿ ವಿಹಾರ ನಕ್ಷೆಯಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ. ಭಾರತ ಮತ್ತು ಬಾಂಗ್ಲಾದೇಶದ ನದಿಗಳ ಮೂಲಕ ಹಾದುಹೋಗುವ ಈ ರಿವರ್​ ಕ್ರೂಸ್ 27 ವಿವಿಧ ನದಿಗಳಲ್ಲಿ ಪ್ರಯಾಣಿಸಲಿದೆ. ಇದು ಜಲ ಮಾರ್ಗದುದ್ದಕ್ಕೂ ವಿಶ್ವ ಪರಂಪರೆಯ ತಾಣಗಳು ಸೇರಿದಂತೆ ವಿವಿಧ 50ಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಸಂದರ್ಶಿಸಲಿದೆ.

ಇದನ್ನೂ ಓದಿ : ಜ. 13ರಂದು ವಿಶ್ವದ ಅತಿ ಉದ್ದದ ಗಂಗಾ ವಿಲಾಸ್ ನೌಕೆಗೆ ಮೋದಿ ಚಾಲನೆ.. ಈ ಹಡಗಿನಲ್ಲಿದೆ ಐಷಾರಾಮಿ ಸೌಲಭ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.