ETV Bharat / bharat

ಯುಪಿಯಲ್ಲಿ ಹೆಚ್ಚಾದ ಫಾರಿನ್ ಬ್ರ್ಯಾಂಡ್​ ಮದ್ಯದ ಘಮಲು: 573 ವಿದೇಶಿ ಬ್ರ್ಯಾಂಡ್​​ ನೋಂದಣಿ

author img

By

Published : Aug 16, 2023, 2:15 PM IST

Foreign brand liquor: ಉತ್ತರ ಪ್ರದೇಶದಲ್ಲಿ ವಿದೇಶಿ ಬ್ರ್ಯಾಂಡ್​​ನ ಮದ್ಯ ಮಾರಾಟ ಹೆಚ್ಚಾಗುತ್ತಿದೆ. ಹೆಚ್ಚೆಚ್ಚು ಸಂಖ್ಯೆಯ ವಿದೇಶಿ ಮದ್ಯ ಕಂಪನಿಗಳು ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಪಡೆಯುತ್ತಿವೆ.

Liquor consumers in UP high on foreign brands

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ವಿದೇಶಿ ಬ್ರ್ಯಾಂಡಿನ (ಫಾರಿನ್ ಬ್ರ್ಯಾಂಡ್​) ಮದ್ಯದ ಘಮಲು ಹೆಚ್ಚಾಗುತ್ತಿದೆ. ದಿನಗಳೆದಂತೆ ಹೊಸ ಹೊಸ ವಿದೇಶಿ ಮದ್ಯ ಕಂಪನಿಗಳು ರಾಜ್ಯದಲ್ಲಿ ತಮ್ಮ ಮದ್ಯ ಮಾರಾಟಕ್ಕೆ ಲೈಸೆನ್ಸ್​ ಪಡೆಯುತ್ತಿದ್ದು, ಜನರಿಗೂ ಫಾರಿನ್ ಬ್ರ್ಯಾಂಡ್​ ತುಂಬಾ ಇಷ್ಟವಾಗತೊಡಗಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ನೋಂದಣಿಯಾದ ಒಟ್ಟು ಮದ್ಯ ಬ್ರಾಂಡ್ ಗಳ ಸಂಖ್ಯೆ 3,854 ಕ್ಕೆ ಏರಿದೆ. ಇದು ಇಲ್ಲಿಯವರೆಗೆ ನೋಂದಣಿಯಾದ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ನೋಂದಾಯಿಸಲ್ಪಟ್ಟ 3,106 ವಿವಿಧ ಆಲ್ಕೋಹಾಲ್ ಬ್ರ್ಯಾಂಡ್​ಗಳಿದ್ದವು.

ಫಾರಿನ್ ಮದ್ಯದ ಬ್ರಾಂಡ್​ಗಳು ಚಿಲ್ಲರೆ ಮದ್ಯ ವ್ಯಾಪಾರ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವುದರಿಂದ ಸ್ಥಳೀಯ ಪ್ರೀಮಿಯಂ ಬ್ರ್ಯಾಂಡ್​ಗಳು ತೀವ್ರ ಪೈಪೋಟಿ ಎದುರಿಸುವಂತಾಗಿದೆ. ಉತ್ತರ ಪ್ರದೇಶದಲ್ಲಿ ಲಭ್ಯವಿರುವ ಆಮದು ಮಾಡಿಕೊಂಡ ವಿದೇಶಿ ಮದ್ಯ ಬ್ರ್ಯಾಂಡ್​ಗಳ (ವಿಸ್ಕಿ, ವೋಡ್ಕಾ, ರಮ್ ಮತ್ತು ಜಿನ್) ಸಂಖ್ಯೆ ಹಿಂದಿನ ಹಣಕಾಸು ವರ್ಷದಲ್ಲಿ 199 ಇದ್ದುದು ಈ ಬಾರಿ 573 ಕ್ಕೆ ಏರಿದೆ.

ವಿದೇಶಿ ವೈನ್ ಉತ್ಪಾದಕರು ಹೆಚ್ಚಿನ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವ ಮಧ್ಯೆ ವಿದೇಶಿ ಬಿಯರ್ ತಯಾರಕರು ಸಹ ತಮ್ಮ ಉತ್ಪನ್ನಗಳನ್ನು ಹೆಚ್ಚಿಸಿದ್ದಾರೆ. ಆಮದು ಮಾಡಿಕೊಳ್ಳುವ ವೈನ್ ಮತ್ತು ಬಿಯರ್ ಉತ್ಪನ್ನಗಳ ಸಂಖ್ಯೆ ಒಂದು ವರ್ಷದಲ್ಲಿ ಕ್ರಮವಾಗಿ 305 ರಿಂದ 445 ಕ್ಕೆ ಮತ್ತು 34 ರಿಂದ 41 ಕ್ಕೆ ಏರಿದೆ.

ವಾರ್ಷಿಕ ಅಬಕಾರಿ ನೀತಿಯನ್ನು ದೃಢವಾಗಿಸಿದ್ದು ಮತ್ತು ಹೊಸ ಸಂದರ್ಭಗಳಿಗೆ ತಕ್ಕಂತೆ ರೂಪಿಸಿರುವುದರಿಂದ ಕಟ್ಟ ಕಡೆಯ ಗ್ರಾಹಕರು ಈಗ ಹೆಚ್ಚಿನ ಆಯ್ಕೆಗಳನ್ನು ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ವ್ಯಾಪಾರವನ್ನು ಸುಲಭಗೊಳಿಸುವ ಕ್ರಮಗಳನ್ನು ಜಾರಿಗೆ ತರಲು ನಮಗೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲವಿದೆ" ಎಂದು ಅಬಕಾರಿ ಆಯುಕ್ತ ಸೆಂಥಿಲ್ ಸಿ ಪಾಂಡಿಯನ್ ಹೇಳಿದ್ದಾರೆ.

ಅಬಕಾರಿ ಇಲಾಖೆಯು ಹೆಚ್ಚಿನ ಬ್ರ್ಯಾಂಡ್​ಗಳನ್ನು ನೋಂದಾಯಿಸುವ ಮೂಲಕ ಹೆಚ್ಚಿನ ಆದಾಯ ಗಳಿಸಿದೆ. ಬ್ರ್ಯಾಂಡ್​ಗಳ ನೋಂದಣಿಯಿಂದ ಅಬಕಾರಿ ಇಲಾಖೆಯ ಆದಾಯವು ವರ್ಷದಿಂದ ವರ್ಷಕ್ಕೆ 18.12 ಕೋಟಿ ರೂ.ಗಳಿಂದ 20.92 ಕೋಟಿ ರೂ.ಗೆ ಏರಿದೆ. ಹೆಚ್ಚಿನ ಸಂಖ್ಯೆಯ ವಿದೇಶಿ ಕಂಪನಿಗಳನ್ನು ಆಕರ್ಷಿಸುವ ಸಲುವಾಗಿ, ವಿದೇಶಿ ಬ್ರಾಂಡ್​ಗಳನ್ನು ನೋಂದಾಯಿಸುವ ಕಂಪನಿಯು ಪ್ರಧಾನ ಆಮದುದಾರರಿಂದ ಅಧಿಕಾರ ಪತ್ರವನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಷರತ್ತನ್ನು ತೆಗೆದುಹಾಕಲು ಯುಪಿ ಅಬಕಾರಿ ಇಲಾಖೆ ನಿರ್ಧರಿಸಿದೆ.

"ಮಾರ್ಚ್ 31, 2023 ರವರೆಗೆ ವಿದೇಶಿ ಬ್ರ್ಯಾಂಡ್​​ ಅನ್ನು ಮಾರಾಟ ಮಾಡಲು ಆಸಕ್ತಿ ಹೊಂದಿರುವ ವ್ಯಕ್ತಿ ಅಥವಾ ಕಂಪನಿಯು ಯುಪಿಯಲ್ಲಿ ಉತ್ಪನ್ನ ಮಾರಾಟ ಮಾಡಲು ಪ್ರಧಾನ ರಫ್ತುದಾರರನ್ನು ಸಂಪರ್ಕಿಸಬೇಕಾಗಿತ್ತು. ಇದು ಅರ್ಥಹೀನ ನಿಯಮವಾಗಿತ್ತು. ಹೀಗಾಗಿ ಇದನ್ನು ರದ್ದುಗೊಳಿಸಲಾಯಿತು. ಮೂಲ ಪರವಾನಿಗೆಯ ಮೂಲಕ ತರಿಸಿಕೊಂಡ ಮದ್ಯವನ್ನು ಬಾಟ್ಲಿಂಗ್​ ಮಾಡುವ ಯಾರಾದರೂ ಬ್ರ್ಯಾಂಡ್​ ಅನ್ನು ನೋಂದಾಯಿಸಬಹುದು. ಅದಕ್ಕಾಗಿಯೇ ಈ ವರ್ಷ ವಿದೇಶಿ ಬ್ರ್ಯಾಂಡ್​ಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದು ಕಂಡು ಬರುತ್ತಿದೆ" ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ : Libya Conflict: ಲಿಬಿಯಾದಲ್ಲಿ ಸಶಸ್ತ್ರ ಸಂಘರ್ಷ: 27 ಸಾವು, 106 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.