ETV Bharat / bharat

ಕಂದಕಕ್ಕೆ ಉರುಳಿ ಬಿದ್ದ ಸೇನಾ ವಾಹನ.. ಏಳು ಮಂದಿ ಐಟಿಬಿಪಿ ಯೋಧರು ಸಾವು - ಕಂದಕಕ್ಕೆ ಉರುಳಿ ಬಿದ್ದ ಸೇನಾ ವಾಹನ

ಕಣಿವೆನಾಡಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಸೈನಿಕರು ಮೃತಪಟ್ಟಿದ್ದಾರೆ.

ಕಣಿವೆನಾಡಿನಲ್ಲಿ ಭೀಕರ ರಸ್ತೆ ಅಪಘಾತ
ಕಣಿವೆನಾಡಿನಲ್ಲಿ ಭೀಕರ ರಸ್ತೆ ಅಪಘಾತ
author img

By

Published : Aug 16, 2022, 12:15 PM IST

Updated : Aug 16, 2022, 12:48 PM IST

ಅನಂತನಾಗ್(ಜಮ್ಮು ಮತ್ತು ಕಾಶ್ಮೀರ): ಜಿಲ್ಲೆಯ ಪಹಲ್ಗಾಮ್​ನ ಫ್ರಿಸ್ಲಾನ್​ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬ್ರೇಕ್​ ಫೇಲಾದ ಕಾರಣ 39 ಸಿಬ್ಬಂದಿ ಪ್ರಯಾಣಿಸುತ್ತಿದ್ದ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ವಾಹನ ಕಂದಕಕ್ಕೆ ಉರುಳಿ ಬಿದ್ದಿದ್ದು, ಏಳು ಮಂದಿ ಯೋಧರು ಮೃತಪಟ್ಟಿದ್ದಾರೆ.

ಕಂದಕಕ್ಕೆ ಉರುಳಿ ಬಿದ್ದ ಸೇನಾ ವಾಹನ

ಅಮರನಾಥ ಯಾತ್ರೆಗಾಗಿ ನಿಯೋಜಿಸಲಾಗಿದ್ದ ಯೋಧರು ಇಂದು ಕಾರ್ಯಕ್ಕೆ ತೆರಳುತ್ತಿದ್ದರು. 39 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಚಂದನ್ವಾರಿಯಿಂದ ಪಹಲ್ಗಾಮ್‌ ಕಡೆ ಪ್ರಯಾಣ ಬೆಳೆಸಿತ್ತು. ಫ್ರಿಸ್ಲಾನ್‌ನಲ್ಲಿ ವಾಹನದ ಬ್ರೇಕ್​ ಫೇಲ್​ ಆಗಿದ್ದು, ಸೈನಿಕರು ಪ್ರಯಾಣಿಸುತ್ತಿದ್ದ ಬಸ್​ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಐಟಿಬಿಪಿ ತಿಳಿಸಿದೆ.

  • Pahalgam, J&K | Six ITBP personnel have lost their lives, while several other personnel received injuries, who are being airlifted to Army hospital, Srinagar for treatment: Police

    A bus carrying 37 ITBP personnel and two J&K Police personnel fell into riverbed in Pahalgam today pic.twitter.com/lVhNooPzlT

    — ANI (@ANI) August 16, 2022 " class="align-text-top noRightClick twitterSection" data=" ">

ಸಂಭವಿಸಿದ ಅಪಘಾತದಲ್ಲಿ ಹಲವಾರು ಐಟಿಬಿಪಿ ಜವಾನರು ಗಾಯಗೊಂಡಿದ್ದು ಅವರನ್ನು ಹೆಲಿಕಾಪ್ಟರ್​ ಮೂಲಕ ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಯುತ್ತಿದೆ. ಆದ್ರೆ ಈ ದುರಂತದಲ್ಲಿ ಏಳು ಸೈನಿಕರು ಮೃತಪಟ್ಟಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಓದಿ: ಬೀದರ್‌ ರಸ್ತೆ ಅಪಘಾತದಲ್ಲಿ ಇಡೀ ಪೊಲೀಸ್‌ ಕಾನ್ಸ್‌ಟೇಬಲ್‌ ಕುಟುಂಬ ಬಲಿ, ಐವರು ಸಾವು

Last Updated : Aug 16, 2022, 12:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.