ವೆಲ್ಲೂರು(ತಮಿಳುನಾಡು): ಕುಟುಂಬಸ್ಥರೆಲ್ಲರೂ ಸೇರಿ ಬಲವಂತದ ಮದುವೆ (Forced marriage) ಮಾಡಿದ್ದಕ್ಕಾಗಿ ತೀವ್ರವಾಗಿ ಮನನೊಂದು ಯುವತಿಯೋರ್ವಳು ಮದುವೆಯಾಗಿ ಕೇವಲ ಮೂರೇ ದಿನಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದೆ.
ಮೂರನೇ ವರ್ಷದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಮುತ್ತು ಮಂಟಪಂ ಪ್ರದೇಶದ ಭುವನೇಶ್ವರಿ (21) ನವೆಂಬರ್ 15ರಂದು ರಾಣಿಪೆಟ್ಟೈ ಜಿಲ್ಲೆಯ ಕಾವೇರಿಪಾಕ್ಕಂನ ಮಣಿಕಂದನ್ (27) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನವೆಂಬರ್ 17ರಂದು ಮದುವೆಯ ನಂತರದ ಸಮಾರಂಭದಲ್ಲಿ ಭಾಗಿಯಾಗಲು ತನ್ನ ಮನೆಗೆ ವಾಪಸ್ ಬಂದಿದ್ದಳು. ಈ ವೇಳೆ ಮುಂಜಾನೆ ಸ್ನಾನದ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ವೆಲ್ಲೂರು ಪೊಲೀಸರು (Vellore Police) ಭುವನೇಶ್ವರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ವಿಡಿಯೋ ನೋಡಿ: ಗಾಯಕಿಯ ಕಂಠಸಿರಿಗೆ ಮನಸೋತು ಬಕೆಟ್‌ಗಟ್ಟಲೆ ನೋಟು ಸುರಿದ ಅಭಿಮಾನಿ!
ಬಲವಂತದ ಮದುವೆಯಿಂದ ಆತ್ಮಹತ್ಯೆ:
ಲಭ್ಯವಾಗಿರುವ ಮಾಹಿತಿ ಪ್ರಕಾರ, ಭುವನೇಶ್ವರಿ ವಿದ್ಯಾಭ್ಯಾಸ ಮುಗಿಸಿದ ನಂತರ ಸ್ವಂತ ಉದ್ಯೋಗ ಪಡೆಯುವ ಕನಸು ಹೊತ್ತಿದ್ದರು. ಆದರೆ ಪೋಷಕರು ಆಕೆಯ ಒಪ್ಪಿಗೆ ಪಡೆದುಕೊಳ್ಳದೇ ಮದುವೆ ನಿಶ್ಚಯಿಸಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಆಕೆಯ ನಿಶ್ಚಿತಾರ್ಥವಾಗಿತ್ತು. ಈ ಐದು ತಿಂಗಳಲ್ಲಿ ಭುವನೇಶ್ವರಿ ತನ್ನ ಪತಿ ಮಣಿಕಂದನ್ ಜೊತೆ ಕೇವಲ ಮೂರು ಸಲ ಮಾತ್ರ ಮಾತನಾಡಿದ್ದರು ಎಂಬ ಮಾಹಿತಿ ದೊರೆತಿದೆ.