ಬಲ್ಲಿಯಾ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಕಾವೇರುತ್ತಿದೆ. ರಾಜ್ಯದಲ್ಲಿ ಚುನಾವಣಾ ಉತ್ಸಾಹಿಗಳು ತಮ್ಮದೇ ಲೆಕ್ಕಾಚಾರದ ಮೂಲಕ ಗೆಲುವಿಗಾಗಿ ಭರದ ತಯಾರಿ ನಡೆಸುತ್ತಿದ್ದಾರೆ.
ಈ ಮಧ್ಯೆ ಬಲ್ಲಿಯಾ ಜಿಲ್ಲೆಯ ಕರಣರ್ ಚಪ್ರಾ ಗ್ರಾಮದ ನಿವಾಸಿಯಾದ ಹಾಥಿ ಸಿಂಗ್ ಎಂಬಾತ ಚುನಾವಣೆಗೋಸ್ಕರ ತಮ್ಮ ಬ್ರಹ್ಮಚಾರಿ ಪ್ರತಿಜ್ಞೆ ಮುರಿದಿದ್ದಾರೆ. ಪಂಚಾಯಿತಿ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಕಾರಣ, ಮದುವೆ ಮಾಡಿಕೊಂಡು ಪತ್ನಿಯನ್ನು ಕಣಕ್ಕಿಳಿಸುವ ನಿರ್ಧಾರ ಅವರದ್ದು.
ಇದನ್ನೂ ಓದಿ: ಅಚಲ ಪ್ರೀತಿಗೆ ಸೋತು ಹೋದ ಕುಟುಂಬ; ಪೋಷಕರ ಮಧ್ಯಸ್ಥಿಕೆಯಲ್ಲೇ ಮದುವೆ!
ಹಾಥಿ ಸಿಂಗ್ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದರು. ಆದರೆ ಪಂಚಾಯಿತಿ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ಘೋಷಣೆಯಾಗುತ್ತಿದ್ದಂತೆ ತಮ್ಮ ನಿರ್ಧಾರ ಬದಲಿಸಿದ್ದಾರೆ.
ಚುನಾವಣೆಯಲ್ಲಿ ಮೀಸಲಾತಿ ಪಟ್ಟಿ ಪ್ರಕಟಗೊಂಡಿರುವ ಕಾರಣ, ಅನೇಕ ಅಭ್ಯರ್ಥಿಗಳ ನಿರೀಕ್ಷೆಗಳು ಉಲ್ಟಾಪಲ್ಟಾ ಆಗಿದೆ. ಹೀಗಾಗಿ ಅಭ್ಯರ್ಥಿಗಳು ಬೇರೆ ಬೇರೆ ಯೋಜನೆಗಳ ಮೂಲಕ ಕಣಕ್ಕಿಳಿಯುವ ಆಲೋಚನೆಯಲ್ಲಿದ್ದಾರೆ.