ETV Bharat / bharat

ಭಾರತದಲ್ಲಿ ಇದೇ ಮೊದಲು : ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಚಿನ್ನದ ಎಟಿಎಂಗಳು ಲಭ್ಯ - Gold ATMs will be available in three places in Hyderabad

ಈ ಎಟಿಎಂಗಳ ಮೂಲಕ 0.5 ಗ್ರಾಂನಿಂದ 100 ಗ್ರಾಂ ಚಿನ್ನದ ನಾಣ್ಯಗಳನ್ನು ಡ್ರಾ ಮಾಡಬಹುದು. ಹಾಗೆ ನಿರಂತರವಾಗಿ ಬದಲಾಗುತ್ತಿರುವ ಚಿನ್ನದ ಬೆಲೆಯನ್ನು ಎಟಿಎಂ ಪರದೆಯ ಮೇಲೆ ಪ್ರದರ್ಶಿಸಲಾಗುವುದು ಮತ್ತು ಗುಣಮಟ್ಟ ಮತ್ತು ಖಾತರಿ ದಾಖಲೆಗಳನ್ನು ಸಹ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ..

ಭಾರತದಲ್ಲಿ ಇದೇ ಮೊದಲು: ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಚಿನ್ನದ ಎಟಿಎಂಗಳು ಲಭ್ಯ

author img

By

Published : Mar 18, 2022, 4:05 PM IST

ಹೈದರಾಬಾದ್ ​: ಹಣ ಡ್ರಾ ಮಾಡಲು ಎಟಿಎಂ ಬಳಸುವುದು ಸಾಮಾನ್ಯ. ಹಾಗೆ ಕೆಲವೆಡೆ ಔಷಧ ಎಟಿಎಂಗಳು ಸಹ ಕಾರ್ಯನಿರ್ವಹಿಸುತ್ತಿವೆ ಎಂದು ಕೇಳಿದ್ದೇವೆ. ಆದರೆ, ದೇಶದಲ್ಲೇ ಮೊದಲ ಬಾರಿಗೆ ಹೈದರಾಬಾದ್‌ನಲ್ಲಿ ಮೂರು ಸ್ಥಳಗಳಲ್ಲಿ ಚಿನ್ನದ ಎಟಿಎಂಗಳು ಕಾರ್ಯನಿರ್ವಹಸಲಿವೆ.

ಗೋಲ್ಡ್ ಸಿಕ್ಕಾದವರು ನಗರದಲ್ಲಿ ಗೋಲ್ಡ್ ಎಟಿಎಂಗಳನ್ನು ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಹೈದರಾಬಾದ್‌ನ ಬೇಗಂಪೇಟ್‌ನಲ್ಲಿರುವ ಗೋಲ್ಡ್ ಸಿಕ್ಕಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ಈಗಾಗಲೇ ಚಿನ್ನದ ಎಟಿಎಂಗಳು ದುಬೈನಲ್ಲಿ ಎರಡು ಸ್ಥಳಗಳಲ್ಲಿ ಮತ್ತು ಯುಕೆಯಲ್ಲಿ ಐದು ಸ್ಥಳಗಳಲ್ಲಿ ಲಭ್ಯವಿದೆ. ಇನ್ನೆರಡು ತಿಂಗಳಲ್ಲಿ ಹೈದರಾಬಾದ್‌ನ ಅಬಿಡ್ಸ್, ಪಾನ್ ಬಜಾರ್ ಮತ್ತು ಘಾನ್ಸಿ ಬಜಾರ್ ಪ್ರದೇಶಗಳಲ್ಲಿ ಗೋಲ್ಡ್ ಸಿಕ್ಕಾ ಎಟಿಎಂಗಳನ್ನು ಸ್ಥಾಪಿಸಲಾಗುತ್ತದೆ ಎಂದು ಕಂಪನಿಯ ಸಿಇಒ ಸೈದರ್ ತರಾಜ್ ಹೇಳಿದ್ದಾರೆ.

ಇದನ್ನೂ ಓದಿ: ಎಸ್​ಟಿಗೆ ಶೇ.7.5 ರಷ್ಟು ಮೀಸಲಾತಿ.. ಕಾನೂನು ಸಚಿವರ ಭರವಸೆ ಬಳಿಕ ಧರಣಿ ಕೈಬಿಟ್ಟ ಕಾಂಗ್ರೆಸ್..

ಈ ಎಟಿಎಂಗಳ ಮೂಲಕ 0.5 ಗ್ರಾಂನಿಂದ 100 ಗ್ರಾಂ ಚಿನ್ನದ ನಾಣ್ಯಗಳನ್ನು ಡ್ರಾ ಮಾಡಬಹುದು. ಹಾಗೆ ನಿರಂತರವಾಗಿ ಬದಲಾಗುತ್ತಿರುವ ಚಿನ್ನದ ಬೆಲೆಯನ್ನು ಎಟಿಎಂ ಪರದೆಯ ಮೇಲೆ ಪ್ರದರ್ಶಿಸಲಾಗುವುದು ಮತ್ತು ಗುಣಮಟ್ಟ ಮತ್ತು ಖಾತರಿ ದಾಖಲೆಗಳನ್ನು ಸಹ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಚಿನ್ನದ ಎಟಿಎಂಗಳು ಲಭ್ಯ

ಇದು ಇತರ ಎಟಿಎಂಗಳಂತೆಯೇ ಕಾರ್ಯನಿರ್ವಹಿಸುತ್ತದೆ. ಅದರ ಉತ್ಪಾದನೆ ಮತ್ತು ತಂತ್ರಜ್ಞಾನಕ್ಕಾಗಿ ಟ್ರಂಕ್ಸ್ ಡೇಟಾವೇರ್ ಮತ್ತು ಕೆಎಲ್-ಹೈಟೆಕ್‌ನಂತಹ ಕಂಪನಿಗಳೊಂದಿಗೆ ಕೈಜೋಡಿಸಿದ್ದೇವೆ.

ಶೇ.99.99 ಶುದ್ಧತೆಯ 0.5, 1, 2, 5, 10, 20, 50, 100-ಗ್ರಾಂ ಚಿನ್ನದ ನಾಣ್ಯಗಳನ್ನು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಡ್ರಾ ಮಾಡಬಹುದು. ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಕಾರ್ಡ್‌ಗಳನ್ನು ಸಹ ನೀಡಲಾಗುವುದು. ನಂತರದ ದಿನಗಳಲ್ಲಿ ದೇಶಾದ್ಯಂತ 3000 ಎಟಿಎಂಗಳನ್ನು ಸ್ಥಾಪಿಸುವುದು ತಮ್ಮ ಗುರಿಯಾಗಿದೆ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.