ರುದ್ರಪ್ರಯಾಗ, ಉತ್ತರಾಖಂಡ್: ಕೇದಾರನಾಥ ಧಾಮದ ಗರುಡಚಟ್ಟಿ ಮತ್ತು ಮೋದಿ ಗುಹೆಗೆ ಸಂಪರ್ಕ ಕಲ್ಪಿಸಲು ಅಳವಡಿಸಲಾಗಿರುವ ಸೇತುವೆಗೆ ಹಾನಿಯಾಗಿದ್ದು, ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದೆ. ಇದರಿಂದಾಗಿ ಧಾಮ್ ತಲುಪುವ ಯಾತ್ರಾರ್ಥಿಗಳು ಗರ್ವಾಲ್ ಮಂಡಲ್ ವಿಕಾಸ್ ನಿಗಮ್ ಅವರ ಟೆಂಟ್ ಕಾಲೋನಿ, ಮೋದಿ ಗುಹೆ, ಗರುಡಚಟ್ಟಿ ಮತ್ತು ಮಂದಾಕಿನಿ ನದಿಗೆ ಅಡ್ಡಲಾಗಿರುವ ಲಲಿತ್ ದಾಸ್ ಮಹಾರಾಜರ ಆಶ್ರಮವನ್ನು ತಲುಪಲು ಸಾಧ್ಯವಾಗುವುದಿಲ್ಲ. ನದಿ ದಾಟಲು ಸದ್ಯ ಮಂದಾಕಿನಿ ನದಿಗೆ ನಿರ್ಮಿಸಿರುವ ಸೇತುವೆ ಮೇಲೆ ಸಂಚಾರ ಬಂದ್ ಮಾಡಲಾಗಿದೆ.
ಮೋದಿ ಗುಹೆಗೆ ಹೋಗುವ ಸೇತುವೆ ಹಾನಿ: ಕೇದಾರನಾಥ ಧಾಮ ಮತ್ತು ಗರುಡಚಟ್ಟಿಯ ಹಳೆಯ ಮಾರ್ಗವು ಕೇದಾರನಾಥ ಧಾಮದಲ್ಲಿ ಮಂದಾಕಿನಿ ನದಿಗೆ ಅಡ್ಡಲಾಗಿ ಇದೆ. ಈ ಬಾರಿ ಗಡ್ವಾಲ್ ಮಂಡಲ್ ವಿಕಾಸ್ ನಿಗಮವು ಪ್ರಯಾಣಿಕರಿಗೆ ತಂಗಲು ನದಿಗೆ ಅಡ್ಡಲಾಗಿ ಟೆಂಟ್ ಕಾಲೋನಿಯನ್ನೂ ಮಾಡಿದೆ. ಮೋದಿ ಗುಹೆ ಸೇರಿದಂತೆ ಇತರ ಗುಹೆಗಳೂ ಇಲ್ಲಿವೆ. ನಿರಂತರ ಮಳೆಯಿಂದಾಗಿ ಸೇತುವೆಯ ಸುತ್ತಲಿನ ಪಾದಚಾರಿ ಮಾರ್ಗ ಹಾಳಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೋದಿ ಗುಹೆ ಹೊರತುಪಡಿಸಿ ಟೆಂಟ್ ಕಾಲೋನಿಯಲ್ಲಿ ಉಳಿದುಕೊಳ್ಳಲು ತೆರಳುವ ಎಲ್ಲ ಪ್ರಯಾಣಿಕರು ಪರದಾಡುವಂತಾಗಿದೆ.
ಓದಿ: ರಂಗೇರಿದ ಚುನಾವಣಾ ಕಣ: ಮಂಕಾದ ಕನ್ನಡ ಚಿತ್ರರಂಗ, ತೆರೆಕಾಣದ ಸಿನಿಮಾಗಳು
ಮಂದಾಕಿನಿ ನದಿಯ ಸೇತುವೆಯ ಗರ್ಡರ್‌ಗಳು ಹಾಳು: ಇದಲ್ಲದೇ ಲಲಿತ ಮಹಾರಾಜರ ಆಶ್ರಮವೂ ಇಲ್ಲೇ ಇದೆ. ಸಾವಿರಾರು ಭಕ್ತರು ಆಶ್ರಮಕ್ಕೆ ಪ್ರಸಾದವನ್ನು ತೆಗೆದುಕೊಳ್ಳಲು ಮತ್ತು ಭಂಡಾರದಲ್ಲಿ ಉಳಿಯಲು ಭೇಟಿ ನೀಡುತ್ತಾರೆ. ಈಗ ಹಾಳಾದ ರಸ್ತೆಯಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಮಂದಾಕಿನಿ ನದಿಯ ಸೇತುವೆಯ ಗರ್ಡರ್‌ಗಳು ಹಾಳಾಗಿವೆ ಎಂದು ಇಲಾಖಾ ಅಧಿಕಾರಿಗಳೇ ಹೇಳುತ್ತಿದ್ದಾರೆ. ಹೊಸದಾಗಿ ನಿರ್ಮಿಸಲು ವ್ಯವಸ್ಥೆ ಮಾಡಲಾಗಿದೆ. ಸದ್ಯ ಸೇತುವೆಯಿಂದ ಸಂಚಾರ ಬಂದ್ ಮಾಡಲಾಗಿದೆ. ನದಿ ದಾಟಲು ಬಯಸುವ ಎಲ್ಲಾ ಪ್ರಯಾಣಿಕರು ಈಗ ದೇವಸ್ಥಾನದ ಹಿಂದಿನ ಮಾರ್ಗದ ಮೂಲಕ ಹೋಗಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೋದಿ ಗುಹೆಗೆ ತೆರಳಲು ಸಮಸ್ಯೆ: ಚಾರ್ಧಾಮ್ ಮಹಾಪಂಚಾಯತ್ ಉಪಾಧ್ಯಕ್ಷ ಸಂತೋಷ್ ತ್ರಿವೇದಿ ಮಾತನಾಡಿ, ಮೋದಿ ಗುಹೆ ಮತ್ತು ಗರುಡಚಟ್ಟಿಗೆ ತೆರಳುವ ಪಾದಚಾರಿ ಸೇತುವೆ ಹಾಳಾಗಿದೆ. ಈ ಮಾರ್ಗವು ಮೋದಿ ಗುಹೆಗೂ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ಲಲಿತ್ ಮಹಾರಾಜ್ ಆಶ್ರಮ ಕೂಡ ಸೇತುವೆಯ ಇನ್ನೊಂದು ಬದಿಯಲ್ಲಿದೆ. ಅಲ್ಲಿ ನೂರಾರು ಭಕ್ತರು ಮತ್ತು ಸಂತರು ವಾಸಿಸುತ್ತಾರೆ. ಇದಲ್ಲದೆ, ಸೇತುವೆಯ ಇನ್ನೊಂದು ಬದಿಯಲ್ಲಿ ಗರ್ವಾಲ್ ಮಂಡಲ್ ವಿಕಾಸ್ ನಿಗಮದ ಟೆಂಟ್‌ಗಳನ್ನು ಸಹ ಸ್ಥಾಪಿಸಲಾಗಿದೆ. ಸೇತುವೆಯನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ತ್ರಿವೇದಿ ಹೇಳಿದರು.
ಅಷ್ಟೇ ಅಲ್ಲ ಈಗಾಗಲೇ ಮೋದಿ ಗುಹೆಗೆ ಸಾಕಷ್ಟು ಮಂದಿ ಬುಕ್ಕಿಂಗ್ ಮಾಡಿದ್ದಾರೆ. ಇನ್ನು ಅವರು ಮೋದಿ ಗುಹೆಗೆ ಭೇಟಿ ನೀಡಬೇಕಾದ್ರೆ ದೇವಸ್ಥಾನದ ಹಿಂದಿನ ದಾರಿಯಿಂದ ತೆರಳಬೇಕಾಗಿದೆ.
ಓದಿ: ಬುದ್ಧ ಪೂರ್ಣಿಮೆ: ಇತರರ ಕಲ್ಯಾಣಕ್ಕಾಗಿ ಅರ್ಥಪೂರ್ಣ ಜೀವನ ನಡೆಸಿ- ದಲೈ ಲಾಮಾ