ETV Bharat / bharat

ಹುಟ್ಟುಹಬ್ಬದ ಕೇಕ್ ತಿಂದು 20 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು - ಆಂಧ್ರದಲ್ಲಿ ಅಪರಾಧ ಸುದ್ದಿ

ಕೇಕ್ ತಿಂದ ಒಂದು ಗಂಟೆಯಲ್ಲಿ, ವಾಂತಿ ಶುರುವಾಗಿದ್ದು, ಎಲ್ಲರನ್ನೂ ಧರ್ಮಾವರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರಲ್ಲಿ ಮಕ್ಕಳು ಮತ್ತು ವೃದ್ಧರೇ ಹೆಚ್ಚಾಗಿರುವುದಾಗಿ ತಿಳಿದು ಬಂದಿದೆ..

food-poision-at-anantapur-district-andra pradesh
ಹುಟ್ಟುಹಬ್ಬದ ಕೇಕ್ ತಿಂದು 20 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
author img

By

Published : Jul 10, 2021, 10:06 PM IST

ಅನಂತಪುರಂ(ಆಂಧ್ರಪ್ರದೇಶ) : ಜನಪ್ರತಿನಿಧಿಯೊಬ್ಬರ ಹುಟ್ಟುಹಬ್ಬದಂದು ಹಂಚಿದ ಕೇಕ್ ತಿಂದು ಸುಮಾರು 20 ಮಂದಿ ಅಸ್ವಸ್ಥರಾಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಧರ್ಮಾವರಂ ಎಂಬಲ್ಲಿ ನಡೆದಿದೆ.

ಧರ್ಮಾವರಂನ ಮೂರನೇ ವಾರ್ಡ್​ನ ಕೌನ್ಸಿಲರ್ ಆದ ರಮಣ ಎಂಬಾತನ ಹುಟ್ಟುಹಬ್ಬವನ್ನು ಶಾಂತಿನಗರ ಎಂಬಲ್ಲಿ ಆಚರಿಸಲಾಗಿದ್ದು, ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಕೇಕ್ ಹಂಚಲಾಗಿದೆ. ಅದನ್ನು ತಿಂದ ಸುಮಾರು 20 ಮಂದಿ ಅಸ್ವಸ್ಥರಾಗಿದ್ದಾರೆ.

ಕೇಕ್ ತಿಂದ ಒಂದು ಗಂಟೆಯಲ್ಲಿ, ವಾಂತಿ ಶುರುವಾಗಿದ್ದು, ಎಲ್ಲರನ್ನೂ ಧರ್ಮಾವರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರಲ್ಲಿ ಮಕ್ಕಳು ಮತ್ತು ವೃದ್ಧರೇ ಹೆಚ್ಚಾಗಿರುವುದಾಗಿ ತಿಳಿದು ಬಂದಿದೆ.

ಇನ್ನು, ಬರ್ತ್​ಡೇ ಪಾರ್ಟಿ ಆಚರಿಸಿಕೊಂಡಿದ್ದ ರಮಣ ಎಂಬಾತ ಕೂಡ ಸ್ವಲ್ಪ ಅಸ್ವಸ್ಥನಾಗಿದಾರೆ. ವಿಷಾಹಾರ ಸೇವನೆಯಿಂದ ವ್ಯಕ್ತಿಗಳು ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಟ್ರೋವರ್ಸಿ ಇಷ್ಟವಿಲ್ಲ, ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸಂಸದೆ ಸುಮಲತಾ ಅಂಬಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.