ETV Bharat / bharat

ಲಸಿಕೆಯನ್ನೇ ಅವಲಂಬಿಸಿ ಕೂರಬೇಡಿ, ಮುನ್ನೆಚ್ಚರಿಕೆ ಕ್ರಮ ಕಟ್ಟುನಿಟ್ಟಾಗಿ ಪಾಲಿಸಿ : 'ಈಟಿವಿ ಭಾರತ' ಸಂದರ್ಶನದಲ್ಲಿ ಡಾ. ಶ್ರೀನಾಥ್ ರೆಡ್ಡಿ - ಕೋವಿಡ್ ಎರಡನೇ ಅಲೆಗೆ ಕಾರಣ

'ಈಟಿವಿ ಭಾರತ'​ದೊಂದಿಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಖ್ಯಾತ ಆರೋಗ್ಯ ತಜ್ಞ ಡಾ. ಕೆ. ಶ್ರೀನಾಥ್ ರೆಡ್ಡಿ, ಕೋವಿಡ್ ಎರಡನೇ ಅಲೆಯ ಕಾರಣದ ಬಗ್ಗೆ ಚರ್ಚೆ ನಡೆಸಿದ್ದು, ಸೋಂಕು ನಿಯಂತ್ರಣಕ್ಕೆ ಜನರು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ.

Interview with Dr Shrinath Reddy
ಡಾ. ಶ್ರೀನಾಥ್ ರೆಡ್ಡಿ
author img

By

Published : Apr 18, 2021, 10:23 AM IST

Updated : Apr 19, 2021, 12:21 PM IST

ನವದೆಹಲಿ : ಕೇವಲ ಲಸಿಕೆಯಿಂದ ಮಾತ್ರ ಕೋವಿಡ್ ತಡೆಗಟ್ಟಲು ಸಾಧ್ಯವಿಲ್ಲ. ಭಾರತೀಯರು​ ಮಾಸ್ಕ್​​ ಧರಿಸುವುದು, ಕೈ ತೊಳೆಯುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಮುಂತಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೊತೆಗೆ ಹೆಚ್ಚು ಜನ ಸೇರಿ ಮಾಡುವ ಮದುವೆಯಂತಹ ಕೋವಿಡ್ ಸೂಪರ್​ ಸ್ಪ್ರೆಡ್ಡರ್ ಕಾರ್ಯಕ್ರಮಗಳನ್ನು ನಿಲ್ಲಿಸಬೇಕು. ಈ ಮೂಲಕ ಕೋವಿಡ್ -19 ಭಯವಿಲ್ಲದೆ ಮುಂದಿನ ವರ್ಷವನ್ನು ಪ್ರಾರಂಭಿಸಬೇಕು ಎಂದು ಖ್ಯಾತ ಆರೋಗ್ಯ ತಜ್ಞರು ಸಲಹೆಗಳನ್ನು ನೀಡಿದ್ದಾರೆ.

'ಈಟಿವಿ ಭಾರತ'ದೊಂದಿಗೆ ವಿಶೇಷ ಸಂವಾದದಲ್ಲಿ ಮಾತನಾಡಿದ ಖ್ಯಾತ ಆರೋಗ್ಯ ತಜ್ಞ ಮತ್ತು ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಅಧ್ಯಕ್ಷ ಡಾ. ಕೆ. ಶ್ರೀನಾಥ್ ರೆಡ್ಡಿ, ಕೋವಿಡ್ ಎರಡನೇ ಅಲೆ ವಿರುದ್ಧದ ದೇಶದ ಹೋರಾಟ ಸಮಯಕ್ಕೆ ಸರಿಯಾಗಿ ಸಾರ್ವಜನಿಕರು ಕೈಗೊಳ್ಳುವ ಆರೋಗ್ಯ ಕ್ರಮಗಳ ಮೇಲೆ ಅವಂಬಿತವಾಗಿದೆ. ಇದು ಯಾವುದೇ ಹೊಸ ರೂಪಾಂತರಿಗಳ ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಟ ಮಾಡಬಲ್ಲದು ಎಂದಿದ್ದಾರೆ.

ಡಾ. ಕೆ. ಶ್ರೀನಾಥ್ ರೆಡ್ಡಿ ಜೊತೆ ಸಂದರ್ಶನ

ಕೇವಲ ಲಸಿಕೆಯನ್ನೇ ಅವಲಂಬಿಸಿ ಕೂರಬೇಡಿ. ನೀವು ಲಸಿಕೆಯನ್ನು ನಂಬಿ ಇತರ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ಇನ್ನೂ ಒಂದು ವರ್ಷ ಈ ಆರೋಗ್ಯ ಬಿಕ್ಕಟ್ಟಿನಿಂದ ಹೊರ ಬರುವುದಿಲ್ಲ. ನಾವು ದೇಶದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ವರ್ಷವಾದ 2022 ಅನ್ನು ವೈರಸ್‌ನ ಭಯವಿಲ್ಲದೆ ಪ್ರಾರಂಭಿಸಬೇಕು. ನಮ್ಮ ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ವ್ಯಾಕ್ಸಿನೇಷನ್ ಡ್ರೈವ್ ಎರಡನ್ನೂ ನಾವು 2021 ರಲ್ಲಿ ಶಿಸ್ತುಬದ್ಧಗೊಳಿಸಿದಾಗ ಮಾತ್ರ ಅದು ಸಾಧ್ಯ ಎಂದು ಡಾ. ರೆಡ್ಡಿ ಹೇಳಿದ್ದಾರೆ.

ಕೋವಿಡ್​ ಎರಡನೇ ಅಲೆಗೆ ಕಾರಣವೇನು..?

ದೇಶದಲ್ಲಿ ಮತ್ತೊಮ್ಮೆ ಆರೋಗ್ಯ ಬಿಕ್ಕಟ್ಟಿಗೆ ಕಾರಣವಾಗಿರುವ ಕೋವಿಡ್ ಎರಡನೇ ಅಲೆಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ರೆಡ್ಡಿ, ಈ ವರ್ಷದ ಆರಂಭದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದಾಗ, ನಾವು ಕೋವಿಡ್ ವಿರುದ್ಧ ಯುದ್ಧ ಗೆದ್ದಿದ್ದೇವೆ ಅಂದುಕೊಂಡಿದ್ದೇ ಎರಡನೇ ಅಲೆ ಅಥವಾ ಮತ್ತೆ ಸೋಂಕು ಉಲ್ಬಣಕ್ಕೆ ಕಾರಣ ಎಂದಿದ್ದಾರೆ.

ಜನವರಿ ಆರಂಭದಿಂದ ದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾದಾಗ ನಾವು ತುಂಬಾ ನಿರಾಳರಾದೆವು. ದೈನಂದಿನ ಪ್ರಕರಣಗಳು, ಸಾವು ಮತ್ತು ಸಕ್ರಿಯ ಕೇಸ್​ಗಳ ಸಂಖ್ಯೆ ಕಡಿಮೆಯಾಗಿದ್ದನ್ನು ನೋಡಿ, ನಾವು ಸೋಂಕು ಮುಕ್ತವಾದೆವು ಎಂದು ಭಾವಿಸಿದೆವು. ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ, ನಮ್ಮಲ್ಲಿ ಹರ್ಡ್​ ಇಮ್ಯೂನಿಟಿ ಕ್ರಿಯೇಟ್ ಆಗಿದೆ ಎಂಬ ಕೆಲವರ ಮಾತುಗಳನ್ನು ಕೇಳಿದೆವು ಎಂದು ಡಾ ರೆಡ್ಡಿ ತಿಳಿಸಿದ್ದಾರೆ.

ಮೊದಲ ಅಲೆ ತಡೆಗೆ ಲಾಕ್​ ಡೌನ್​ ಕಾರಣ:

ದೇಶದಲ್ಲಿ ಕೋವಿಡ್ ಮೊದಲ ಅಲೆ ನಿಯಂತ್ರಣಕ್ಕೆ ಬರುವಲ್ಲಿ ಹಲವಾರು ಕಾರಣಗಳಿವೆ. ದೀರ್ಘವಾದ ಲಾಕ್‌ಡೌನ್, ಪ್ರಯಾಣ ನಿರ್ಬಂಧಗಳೊಂದಿಗೆ ಅನ್​ಲಾಕ್​ ಮಾಡಿದ ವಿವಿಧ ಹಂತಗಳು ಇವುಗಳಲ್ಲಿ ಸೇರಿವೆ. ದೀಪಾವಳಿ ಸಮಯದಲ್ಲೂ ಜನ ಜಂಗುಳಿ ಇರಲಿಲ್ಲ. ನಾವು ಯಾವಾಗ ಕೋವಿಡ್ ವಿರುದ್ಧ ಗೆದ್ದಿದ್ದಾಗಿ ಘೋಷಣೆ ಮಾಡಿಕೊಂಡೆವು, ಅಂದಿನಿಂದ ಶಿಸ್ತು ಮರೆಯಾಯಿತು. ಜನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಲು ಪ್ರಾರಂಭಿಸಿದರು ಎಂದು ಡಾ. ರೆಡ್ಡಿ ಈಟಿವಿ ಭಾರತಕ್ಕೆ​ ಹೇಳಿದ್ದಾರೆ.

Last Updated : Apr 19, 2021, 12:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.