ETV Bharat / bharat

ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು: ಬುಡಕಟ್ಟು ಸಮುದಾಯದತ್ತ ದೇಶದ ಚಿತ್ತ

ಸಂಥಾಲ್ ಸಮುದಾಯದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರು 1997ರಲ್ಲಿ ಒಡಿಶಾದ ರೈರಾಂಗಪುರ ನಗರ ಪಂಚಾಯತ್ ಕೌನ್ಸಿಲರ್ ಆಗಿದ್ದರು. ನಂತರ 2000ರಲ್ಲಿ ಬಿಜೆಡಿ-ಬಿಜೆಪಿ ಮೈತ್ರಿಕೂಟದ ಸರ್ಕಾರದಲ್ಲಿ ಮಂತ್ರಿಯೂ ಆದರು. ಇದರ ನಂತರ 2015 ರಲ್ಲಿ ಜಾರ್ಖಂಡ್​ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಲ್ಲಿನ ರಾಜ್ಯಪಾಲರೂ ಆಗಿದ್ದರು.

Focus now on tribals as NDA selects Murmu as Prez poll nominee

author img

By

Published : Jun 24, 2022, 7:33 PM IST

ಭುವನೇಶ್ವರ್: ಬುಡಕಟ್ಟು ಸಂಥಾಲ್ ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ನಂತರ ಈಗ ಸಮಸ್ತ ದೇಶದ ಗಮನ ಬುಡಕಟ್ಟು ಜನರತ್ತ ನೆಟ್ಟಿದೆ. ಸಂಥಾಲ್ ಎನ್ನುವುದು ಭಾರತದ 3ನೇ ಅತಿದೊಡ್ಡ ಬುಡಕಟ್ಟು ಸಮುದಾಯವಾಗಿದ್ದು, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 8.67 ರಷ್ಟು ಜನ ಈ ಸಮುದಾಯಕ್ಕೆ ಸೇರಿದ್ದಾರೆ.

ರಾಜಕೀಯ ಲೆಕ್ಕಾಚಾರ: ಒಡಿಶಾ ಮೂಲದ ಮುರ್ಮು ಅವರು ಆಯ್ಕೆಯಾದಲ್ಲಿ, ದೇಶದ ಯಾವುದೇ ರಾಜಕೀಯ ಪಕ್ಷವೂ ಬುಡಕಟ್ಟು ಜನಾಂಗದವರನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಅತಿ ಹೆಚ್ಚು ಬುಡಕಟ್ಟು ಜನಾಂಗದ ಜನಸಂಖ್ಯೆ ಇರುವ, ಅದರಲ್ಲೂ ಸಂಥಾಲ್ ಜನ ಹೆಚ್ಚಾಗಿರುವ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಇದೇ ಅಂಶದ ಮೇಲೆ ರಾಜಕೀಯ ಲಾಭವನ್ನೂ ಪಡೆಯಬಹುದು.

ಒಡಿಶಾದ ಬುಡಕಟ್ಟು ಶಕ್ತಿ: ಮುಂಬರುವ ಲೋಕಸಭಾ ಚುನಾವಣೆಗಳು ಮತ್ತು ಶೇ 22ಕ್ಕೂ ಹೆಚ್ಚು ಬುಡಕಟ್ಟು ಸಮುದಾಯ ಇರುವ ಒಡಿಶಾ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲೂ ಬಿಜೆಪಿ ಮುರ್ಮು ಅವರನ್ನು ಆಯ್ಕೆ ಮಾಡಿದ್ದನ್ನು ನೋಡಬಹುದು.

ಮುರ್ಮು ಸಾಗಿದ ಹಾದಿ: ಸಂಥಾಲ್ ಸಮುದಾಯದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರು 1997ರಲ್ಲಿ ಒಡಿಶಾದ ರೈರಾಂಗಪುರ ನಗರ ಪಂಚಾಯತ್ ಕೌನ್ಸಿಲರ್ ಆಗಿದ್ದರು. ನಂತರ 2000ರಲ್ಲಿ ಬಿಜೆಡಿ-ಬಿಜೆಪಿ ಮೈತ್ರಿಕೂಟದ ಸರ್ಕಾರದಲ್ಲಿ ಮಂತ್ರಿಯೂ ಆದರು. ಇದರ ನಂತರ 2015ರಲ್ಲಿ ಜಾರ್ಖಂಡ್​ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಲ್ಲಿನ ರಾಜ್ಯಪಾಲರೂ ಆಗಿದ್ದರು.

ಒತ್ತಡಕ್ಕೆ ಮಣಿಯದ ಗಟ್ಟಿಗಿತ್ತಿ ಮುರ್ಮು: 2017ರಲ್ಲಿ ಸಂಥಾಲ್ ಪರಗಣಾ ಟೆನೆನ್ಸಿ ಆ್ಯಕ್ಟ್, 1976ಕ್ಕೆ ಸಂಬಂಧಿಸಿದ ಕಾಯ್ದೆ ತಿದ್ದುಪಡಿಯೊಂದನ್ನು ಇವರು ಹಿಂತಿರುಗಿಸಿದ್ದರು. ಬುಡಕಟ್ಟು ಜನರಿಗೆ ಸೇರಿದ ಜಮೀನುಗಳನ್ನು ಅದರ ಮಾಲೀಕತ್ವ ಬದಲಾವಣೆ ಮಾಡದೆ, ವಾಣಿಜ್ಯ ಬಳಕೆಗೆ ನೀಡುವ ಮಸೂದೆ ಇದಾಗಿತ್ತು. ಪಶ್ಚಿಮ ಬಂಗಾಳದೊಂದಿಗೆ ಗಡಿ ಹಂಚಿಕೊಂಡಿರುವ ಜಾರ್ಖಂಡ್‌ನ ಬುಡಕಟ್ಟು ಜಮೀನನ್ನು ಬುಡಕಟ್ಟು ಅಲ್ಲದವರಿಗೆ ಮಾರಾಟ ಮಾಡುವುದನ್ನು ಈ ಕಾಯ್ದೆ ಪ್ರತಿಬಂಧಿಸುತ್ತದೆ.

"ಮುರ್ಮು ಅವರು ಬಿಜೆಪಿಸಹಿತ ಯಾವುದೇ ಪಕ್ಷದ ಒತ್ತಡಗಳನ್ನು ತಳ್ಳಿಹಾಕಿ ಸಂವಿಧಾನದ ಪ್ರಕಾರ ಕೆಲಸ ಮಾಡಬಲ್ಲರು ಎಂಬುದು ಈ ಘಟನೆಯಿಂದ ಸಾಬೀತಾಗುತ್ತದೆ. ಸಾಮಾನ್ಯವಾಗಿ ಬಿಜೆಪಿಯಲ್ಲಿ ಮಹಿಳಾ ನಾಯಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಮುರ್ಮು ಅವರು ಸಹ ಕೆಲಸ ಮಾಡುವ ಸ್ವಾತಂತ್ರ್ಯ ಹೊಂದಲಿದ್ದಾರೆ ಎಂಬುದು ನನ್ನ ಬಾವನೆ" ಎನ್ನುತ್ತಾರೆ ಉತ್ಕಲ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಸ್ಮಿತಾ ನಾಯಕ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.