ಗಾಜಿಯಾಬಾದ್ (ಉತ್ತರ ಪ್ರದೇಶ): ಗಡಿಯಲ್ಲಿ ಪಾಕ್ ಹಾಗೂ ಚೀನಾ ತಗಾದೆ ತೆಗೆಯುತ್ತಿದ್ದರೂ, ಭಾರತೀಯ ವಾಯುಸೇನೆಯು ನಿರಂತರವಾಗಿ 40 ದಿನಗಳಿಂದ ವಿದೇಶಗಳಿಂದ ಆಮ್ಲಜನಕ ಸರಬರಾಜು ಮಾಡುತ್ತಿದೆ.
ಚೀನಾದ ಆಕ್ರಮಣ ಪರಿಶೀಲಿಸಲು ಪೂರ್ವ ಲಡಾಖ್ ಹಾಗೂ ಇತರ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಭಾರತೀಯ ಸೇನೆಯನ್ನು ನಿಯೋಜಿಸಲಾಗಿದೆ. ನಾವು ಏಕಕಾಲಕ್ಕೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದೇವೆ. ಅದೇ ಸಮಯದಲ್ಲಿ ಗಡಿಯಲ್ಲೂ ನಮ್ಮ ಸೇನೆ ಕಾರ್ಯ ನಿರ್ವಹಿಸುತ್ತಿದೆ ಎಂದು ಗ್ರೂಪ್ ಕ್ಯಾಪ್ಟನ್ ಮನೀಶ್ ಕುಮಾರ್ ತಿಳಿಸಿದರು.
ಇದು ಸ್ಕ್ವಾಡ್ರನ್ 81 ವಿಮಾನದ ಮೂಲಕ ನಡೆಯುತ್ತಿರುವ ಕಾರ್ಯಾಚರಣೆಯಾಗಿದೆ. ಇದು ವಾಯು ಪ್ರಧಾನ ಕಚೇರಿಯ ಐಎಎಫ್‌ನಲ್ಲಿ ಸಿ -17 ಗಳನ್ನು ನಿರ್ವಹಿಸುತ್ತದೆ. ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಪಿ ಸಿಸೋಡಿಯಾ ಮಾತನಾಡಿ, ಸ್ಕ್ವಾಡ್ರನ್ 81 ವಿಮಾನವು ಹೆಚ್ಚು ಸಾಮರ್ಥ್ಯ ಹೊಂದಿದೆ. ಇದು ಒಂದು ನಿರ್ದಿಷ್ಟ ಸ್ಥಳಕ್ಕೆ ಟ್ಯಾಂಕರ್ಗಳನ್ನು ಸಾಗಿಸುತ್ತದೆ ಎಂದರು. ಪೈಲಟ್ಗಳನ್ನು ಮೂರು ಪ್ರತ್ಯೇಕ ತಂಡಗಳಾಗಿ ಮಾಡಲಾಗಿದ್ದು, ಕೋವಿಡ್ ಪರಿಹಾರ, ಚಂಡಮಾರುತ ಹಾಗೂ ಚೀನಾ, ಪಾಕ್ ಗಡಿಯಲ್ಲಿಯೂ ಈ ಟೀಂಗಳನ್ನು ನಿಯೋಜಿಸಲಾಗಿದೆ.
ಈ ಬಾರಿಯ ಕಾರ್ಯಾಚರಣೆ ಅಭೂತಪೂರ್ವವಾಗಿದೆ. ನಾವು ಸುಮಾರು 3,600 ಗಂಟೆಗಳವರೆಗೆ ವಿಮಾನ ಹಾರಾಟ ನಡೆಸಿದ್ದೇವೆ. 1,600 ಸುತ್ತುಗಳನ್ನು ಹಾರಿಸಿದ್ದು, 14 ಸಾವಿರ ಟನ್ ಆಮ್ಲಜನಕವನ್ನು ದೇಶದ ವಿವಿಧ ಭಾಗಗಳಿಗೆ ರವಾನೆ ಮಾಡಿದ್ದೇವೆ ಎಂದು ಕುಮಾರ್ ಹೇಳಿದರು.
ಇದನ್ನೂ ಓದಿ:ವಿಮಾನದಲ್ಲಿ ಬಾವಲಿ: ಮತ್ತೆ ದೆಹಲಿಗೆ ಮರಳಿದ ಏರ್ ಇಂಡಿಯಾ ವಿಮಾನ
ಸಿ -17 ಹೆವಿ-ಲಿಫ್ಟ್ ವಿಮಾನವನ್ನು ಯುಎಸ್ನಿಂದ ಸುಮಾರು 10 ವರ್ಷಗಳ ಹಿಂದೆ ಖರೀದಿಸಲಾಗಿದ್ದು, ದೇಶದ ಅಭಿವೃದ್ಧಿಗಾಗಿ ವಿಶ್ವದಾದ್ಯಂತ ಕಾರ್ಯಾಚರಣೆಯಲ್ಲಿ ತೊಡಗಿದೆ.