ETV Bharat / bharat

ಟೇಕ್​ಆಫ್​ಗೂ ಮೊದಲು ಇಂಧನ ಸೋರಿಕೆ.. ಫ್ಲೈ ಬಿಗ್​ ವಿಮಾನ ಹಾರಾಟ ರದ್ದು

ಬಿಹಾರದ ಪಾಟ್ನಾದಿಂದ ಗುವಾಹಟಿಗೆ ಮಂಗಳವಾರ ರಾತ್ರಿ ತೆರಳಬೇಕಿದ್ದ ಫ್ಲೈಬಿಗ್​ ವಿಮಾನ ಇಂಧನ ಸೋರಿಕೆಯಿಂದಾಗಿ ರದ್ದಾಗಿದೆ. ಇಂದು ಸಂಜೆಗೆ ಪ್ರಯಾಣ ಬೆಳೆಸಲಿದೆ ಎಂದು ಸಂಸ್ಥೆ ತಿಳಿಸಿದೆ.

flybig-flight-from-patna
ಫ್ಲೈ ಬಿಗ್​ ವಿಮಾನ ಸಂಸ್ಥೆ
author img

By

Published : Dec 7, 2022, 11:28 AM IST

ಪಾಟ್ನಾ(ಬಿಹಾರ): ಪಾಟ್ನಾದಿಂದ ಗುವಾಹಟಿಗೆ ಮಂಗಳವಾರ ತಡರಾತ್ರಿ ಹೊರಡಬೇಕಿದ್ದ ಫ್ಲೈಬಿಗ್ ವಿಮಾನದಲ್ಲಿ ಇಂಧನ ಸೋರಿಕೆಯಾದ ಕಾರಣ ಹಾರಾಟವನ್ನು ರದ್ದುಪಡಿಸಲಾಗಿದೆ. ಈ ವಿಮಾನದಲ್ಲಿ 66 ಪ್ರಯಾಣಿಕರು ಗುವಾಹಟಿಗೆ ತೆರಳಬೇಕಿದ್ದು, ಪ್ರಯಾಣ ರದ್ದಾಗಿದ್ದು ಗಲಾಟೆಗೆ ಕಾರಣವಾಗಿದೆ.

ಫ್ಲೈಬಿಗ್‌ ಏರ್​ಲೈನ್ಸ್​ನ ವಿಮಾನ ಸಂಖ್ಯೆ flg219 ಪಾಟ್ನಾದಿಂದ ಗುವಾಹಟಿಗೆ ಪ್ರತಿದಿನ ಹಾರಾಟ ನಡೆಸುತ್ತದೆ. ಮಂಗಳವಾರ ರಾತ್ರಿ 66 ಪ್ರಯಾಣಿಕರನ್ನು ಹೊತ್ತು ಗುವಾಹಟಿಗೆ ಹೊರಡುವುದಕ್ಕೂ ಮೊದಲು ವಿಮಾನ ಪರಿಶೀಲನೆ ನಡೆಸಿದಾಗ ಇಂಧನ ಸೋರಿಕೆಯಾಗುತ್ತಿರುವುದು ಕಂಡುಬಂದಿದೆ. ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಯತ್ನಿಸಿದಾಗ್ಯೂ ಸರಿಹೋಗಿಲ್ಲ.

ಬಳಿಕ ವಿಮಾನ ಹಾರಾಟವನ್ನು ರದ್ದು ಮಾಡಿ ಎಲ್ಲ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಏರ್​ಲೈನ್ಸ್​ನಿಂದಲೇ ಎಲ್ಲ ಪ್ರಯಾಣಿಕರಿಗೆ ಹೋಟೆಲ್​ ವ್ಯವಸ್ಥೆ ಮಾಡಿಕೊಡಲಾಗಿದೆ. ಪ್ರಯಾಣಿಕರಲ್ಲಿ ಕೆಲವರು ವಿದ್ಯಾರ್ಥಿಗಳಾಗಿದ್ದು, ಉದ್ಯೋಗ ನಿಮಿತ್ತ ಪರೀಕ್ಷೆಗೆ ಹಾಜರಾಗಬೇಕಿತ್ತು. ವಿಮಾನ ರದ್ದಾಗಿದ್ದರಿಂದ ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದಾರೆ.

ಫ್ಲೈಬಿಗ್​ ವಿಮಾನ ಸಂಸ್ಥೆ ಕೆಲವೇ ವಿಮಾನಗಳನ್ನು ಹೊಂದಿದ್ದು, ಪರ್ಯಾಯ ವ್ಯವಸ್ಥೆ ನೀಡಲು ವಿಫಲವಾಗಿದೆ. ಇಂಜಿನಿಯರ್​ಗಳ ತಂಡ ಇಂದು ಪಾಟ್ನಾಕ್ಕೆ ಬಂದಿದ್ದು, ತಪಾಸಣೆ ನಡೆಸಲಾಗುತ್ತಿದೆ. ಫ್ಲೈಬಿಗ್ ವಿಮಾನವು ಸಂಜೆ 6.15 ಕ್ಕೆ ಟೇಕ್ ಆಫ್ ಆಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಓದಿ: ಕಲಬುರಗಿಯಲ್ಲಿ ಹಳಿ ದಾಟುವಾಗ ಗೂಡ್ಸ್ ರೈಲಿಗೆ ಸಿಲುಕಿದ ತಾಯಿ-ಮಗ.. ಕೂದಲೆಳೆ ಅಂತರದಲ್ಲಿ ಪಾರು- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.