ಕೋಲ್ಕತ್ತಾ: ಉತ್ತರ ಸಿಕ್ಕಿಂನಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ಮೇಘಸ್ಪೋಟದಿಂದ ತೀಸ್ತಾ ನದಿಯಲ್ಲಿ ಪ್ರವಾಹ ಉಂಟಾಗಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ತೀಸ್ತಾ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದಲ್ಲಿ ಇದವರೆಗೂ 10 ಜನರು ಮೃತಪಟ್ಟಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದಾರೆ. 23 ಸೇನಾ ಸಿಬ್ಬಂದಿ ಸೇರಿದಂತೆ 100ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಸಿಬ್ಬಂದಿ ಪತ್ತೆ ಕಾರ್ಯ ಮುಂದುವರೆದಿದೆ.
-
14 dead, 102 missing in Sikkim flash flood
— ANI Digital (@ani_digital) October 5, 2023 " class="align-text-top noRightClick twitterSection" data="
Read @ANI Story | https://t.co/BrqkfjJT1T#Sikkim #sikkimflood pic.twitter.com/XoYeEU2AXj
">14 dead, 102 missing in Sikkim flash flood
— ANI Digital (@ani_digital) October 5, 2023
Read @ANI Story | https://t.co/BrqkfjJT1T#Sikkim #sikkimflood pic.twitter.com/XoYeEU2AXj14 dead, 102 missing in Sikkim flash flood
— ANI Digital (@ani_digital) October 5, 2023
Read @ANI Story | https://t.co/BrqkfjJT1T#Sikkim #sikkimflood pic.twitter.com/XoYeEU2AXj
ಕೇವಲ ಸಿಕ್ಕಿಂ ಮಾತ್ರವಲ್ಲದೇ ಇದರೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮ ಬಂಗಾಳದಲ್ಲೂ ಪ್ರವಾಹದ ದಿಗಿಲು ಎದುರಾಗಿದೆ. ರಾಜ್ಯದ ದಕ್ಷಿಣ ಮತ್ತು ಉತ್ತರ ಭಾಗಗಳ ಒಂಬತ್ತು ಜಿಲ್ಲೆಗಳಲ್ಲಿ 10,000 ಕ್ಕೂ ಹೆಚ್ಚಿನ ಜನರನ್ನು ರಕ್ಷಿಸಿ 190 ಸುರಕ್ಷಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
-
Sikkim flash flood: One of 23 missing soldiers rescued, search on for others
— ANI Digital (@ani_digital) October 4, 2023 " class="align-text-top noRightClick twitterSection" data="
Read @ANI Story | https://t.co/R1Jpuf6DVH#ArmyJawans #Sikkim #LachenValley #sikkimflashfloods pic.twitter.com/iVtLTzkg1A
">Sikkim flash flood: One of 23 missing soldiers rescued, search on for others
— ANI Digital (@ani_digital) October 4, 2023
Read @ANI Story | https://t.co/R1Jpuf6DVH#ArmyJawans #Sikkim #LachenValley #sikkimflashfloods pic.twitter.com/iVtLTzkg1ASikkim flash flood: One of 23 missing soldiers rescued, search on for others
— ANI Digital (@ani_digital) October 4, 2023
Read @ANI Story | https://t.co/R1Jpuf6DVH#ArmyJawans #Sikkim #LachenValley #sikkimflashfloods pic.twitter.com/iVtLTzkg1A
ಸಧ್ಯ ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬ್ಯಾನರ್ಜಿ ತಮ್ಮ ನಿವಾಸದಿಂದಲೆ ಪರಿಸ್ಥಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜತೆಗೆ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಕ್ರಮದ ಭಾಗವಾಗಿ ರಾಜ್ಯದ ಸರ್ಕಾರಿ ಅಧಿಕಾರಿಗಳ ರಜೆಗಳನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ. ಕೂಡಲೇ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳ ತಂಡವನ್ನು ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ಸಿಎಂ ಬ್ಯಾನರ್ಜಿ ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಈಗಾಗಲೆ ತಗ್ಗು ಪ್ರದೇಶಗಳಿಂದ 10,000 ಜನರನ್ನು ರಕ್ಷಣೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು.
ಏತನ್ಮಧೆ ಪಶ್ಚಿಮ ಬಂಗಾಳ ರಾಜ್ಯಪಾಲರಾದ ಸಿವಿ ಆನಂದ ಬೋಸ್ ಇಂದು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಬುಧವಾರ ಸಂಜೆ ಕೊಚ್ಚಿಯಿಂದ ನವದೆಹಲಿಗೆ ಆಗಮಿಸಿರುವ ಅವರು ಇಂದು ಬೆಳಗ್ಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ತರೆಳಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ ಎಂದು ರಾಜಭವನದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
"ರಾಜ್ಯಪಾಲ ಬೋಸ್ ಬುಧವಾರ ಸಿಕ್ಕಿಂ ಸೇರಿದಂತೆ ಪಶ್ಚಿಮ ಬಂಗಾಳದ ನೆರೆಯ ರಾಜ್ಯಗಳ ರಾಜ್ಯಪಾಲರೊಂದಿಗೆ ಪ್ರವಾಹ ಪರಿಸ್ಥಿತಿಯ ಬಗ್ಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಬಳಿಕ ಪರಿಸ್ಥಿತಿಯ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಎಚ್‌ಕೆ ದ್ವಿವೇದಿಯವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ವಿಚಾರಿಸಿದ್ದಾರೆ" ಎಂದು ಹೇಳಿದ್ದಾರೆ.
ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್ ಮತ್ತು ಬಂಗಾಳದ ಸಿಲಿಗುರಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ನೀರಿನಲ್ಲಿ ಕೊಚ್ಚಿಹೋಗಿದ್ದು, ಇದರಿಂದ ಸಂಪರ್ಕ ಕಡಿತಗೊಂಡಿದೆ. ತೀಸ್ತಾ ನದಿಯ ನೀರಿನ ಪ್ರಮಾಣ ಇಳಿಕೆಯಾದ ನಂತರ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಉತ್ತರ ಸಿಕ್ಕಿಂನಲ್ಲಿ ಮೇಘಸ್ಪೋಟ, ಮೂವರ ಸಾವು.. 23 ಯೋಧರು ನಾಪತ್ತೆ.. 7 ಸೈನಿಕರ ರಕ್ಷಣೆ